Pages

Tuesday, May 24, 2011

ಕೇರಳ ಅಡಿಗೆ

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

ಕೇರಳದ ಅಡಿಗೆಯಲ್ಲಿ ತೆಂಗು ಮತ್ತು ತೆಂಗಿನ ಎಣ್ಣೆಯ ಬಳಕೆ ಅತಿ ಹೆಚ್ಚು.
------------------------------------------------------------
೧.ಅವಿಯಲ್
--------------------------------------------


ಅವಿಯಲ್ ಎನ್ನುವುದು ಮಿಶ್ರ ತರಕಾರಿಗಳ ಮೇಲೋಗರ.
ಬೇಕಾಗುವ ಸಾಮಗ್ರಿಗಳು
ಹೆಚ್ಚಿದ ಸುವರ್ಣ ಗೆಡ್ಡೆ: ಒಂದು ಲೋಟ
ಬಾಳೆಕಾಯಿ : ೨
ಕ್ಯಾರೆಟ್: ೧
ಹೆಚ್ಚಿದ ಪಡುವಲಕಾಯಿ : ಅರ್ಧ ಲೋಟ
ಕುಂಬಳಕಾಯಿ ,ಬೀನ್ಸ್: ತಲಾ ಅರ್ಧ ಲೋಟ
ನುಗ್ಗೆಕಾಯಿ : ೨
ಹಸಿ ಮೆಣಸು : ೨
ಅರಸಿನ :ಚಿಟಿಕೆ
ತೆಂಗಿನೆಣ್ಣೆ : ೨ ಚಮಚ
ಉಪ್ಪು : ರುಚಿಗೆ ತಕ್ಕಷ್ಟು
ಹುಣಸೆ ರಸ : ೨ ಚಮಚ ಅಥವಾ ಹಸಿ ಮಾವಿನ ಹೋಳು : ಒಂದು
ಕರಿ ಬೇವಿನೆಲೆ : ೧೦

ಅರೆಯಲು :
ತೆಂಗಿನ ತುರಿ : ೨ ಲೋಟ
ಜೀರಿಗೆ : ಅರ್ಧ ಚಮಚ
ಸಣ್ಣ ಈರುಳ್ಳಿ : ೫
ಹಸಿ ಮೆಣಸು : ೧

ವಿಧಾನ
೧.ಸೂಚಿಸಿದ ಎಲ್ಲ ತರಕಾರಿಗಳನ್ನು ಮತ್ತು ಹಸಿಮೆಣಸನ್ನು ಉದ್ದಕ್ಕೆ ಹೆಚ್ಚಿ,ಬೇಯಿಸಿ ಇಟ್ಟುಕೊಳ್ಳಿ.
೨. ಅರೆಯಲು ಸೂಚಿಸಿದ ಎಲ್ಲ ಸಾಮಗ್ರಿಗಳನ್ನು ರುಬ್ಬಿ .
೩.ಈಗ ಬೆಂದ ತರಕಾರಿಗಳ ಜತೆ ರುಬ್ಬಿದ ಮಿಶ್ರಣ ಮತ್ತು ಅರಸಿನ ,ಉಪ್ಪು ,ಕರಿ ಬೇವಿನೆಲೆ ಹುಣಸೆ ರಸ ಅಥವಾ ಮಾವಿನ ಹೋಳನ್ನು ಹಾಕಿ ಮತ್ತಷ್ಟು ಬೇಯಿಸಿ.
೪.ಈಗ ಇದಕ್ಕೆ ತೆಂಗಿನೆಣ್ಣೆ ಸೇರಿಸಿ, ಒಲೆ ಆರಿಸಿ.
೫.ಬಿಸಿ ಬಿಸಿ ಅನ್ನದ ಜತೆ ಇದು ಬಹಳ ರುಚಿ.

ಸೂಚನೆ :
೧.ಹಲವು ತರಕಾರಿಗಳು ಸ್ವಲ್ಪ ಸ್ವಲ್ಪ ಉಳಿದಿದ್ದರೆ, ಸಾಮಾನ್ಯವಾಗಿ ಅವಿಯಲ್ ಮಾಡುವುದು ರೂಢಿ. ತರಕಾರಿ ಬೆಲೆ ಗಗನಕ್ಕೆರುತ್ತಿರುವಾಗ ಅವಿಯಲ್ ಮಾಡಿದರೆ ಅಳಿದುಳಿದ ತರಕಾರಿಯೂ ವ್ಯರ್ಥವಾಗುವುದಿಲ್ಲ. ರುಚಿಗೂ ಕೊರತೆಯಿಲ್ಲ!
೨.ಸುವರ್ನಗೆಡ್ಡೆಯ ಬದಲು ಕೆನೆ ಗೆಡ್ಡೆಯನ್ನು ಬಳಸಬಹುದು. ಕೆಲವೆಡೆ ಬಟಾಣಿಯನ್ನು ಸೇರಿಸುವುದೂ ಇದೆ.


----------------------------------------------------------------------------
2. ನೇಂದ್ರ ಬಾಳೆ ಹಣ್ಣಿನ ಬಜ್ಜಿ
-----------------------------------------------------------------------



ನೇಂದ್ರ ಬಾಳೆ ಹಣ್ಣು :೨
ಕಡ್ಲೆ ಹಿಟ್ಟು : ಒಂದು ಲೋಟ
ಅಕ್ಕಿ ಹಿಟ್ಟು : ಕಾಲು ಲೋಟ
ಮೆಣಸಿನ ಹುಡಿ :ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ

ವಿಧಾನ
೧.ನೇಂದ್ರ ಬಾಳೆ ಹಣ್ಣನ್ನು ಚಕ್ರಾಕಾರವಾಗಿ ಹೆಚ್ಚಿ.
೨.ಕಡ್ಲೆ ಹಿಟ್ಟು,ಅಕ್ಕಿ ಹಿಟ್ಟು, ಮೆಣಸಿನ ಹುಡಿ,ಉಪ್ಪು ಮತ್ತು ನೀರು ಸೇರಿಸಿ ಚೆನ್ನಾಗಿ ಕಲಕಿ. ಮಿಶ್ರಣವು ನೀರು ನೀರಾಗಿರಬಾರದು.ಸ್ವಲ್ಪ ದಪ್ಪಕ್ಕಿರಬೇಕು.
೩.ಎಣ್ಣೆಯನ್ನು ಬಿಸಿ ಮಾಡಿ.
೪.ಹೆಚ್ಚಿದ ನೇಂದ್ರ ಬಾಳೆ ಹಣ್ಣನ್ನು ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಕರಿಯಿರಿ.



---------------------------------------------------------------
೩.ಓಲನ್
--------------------------------------------------------------
ಇದು ಕೇರಳದ ಸಾಂಪ್ರದಾಯಿಕ ಖಾದ್ಯ. ಓಣಂ ಸಂದರ್ಭದಲ್ಲಿ ಇದನ್ನು ತಯಾರಿಸುತ್ತಾರೆ.

ಬೇಕಾಗುವ ಸಾಮಗ್ರಿಗಳು
ಅಲಸಂದೆ ಕಾಳು : ಅರ್ಧ ಲೋಟ
ಸೋರೆಕಾಯಿ ಹೋಳು : ಒಂದು ಲೋಟ
ಚೀನೀಕಾಯಿ ಹೋಳು : ಒಂದು ಲೋಟ
ಬಾಳೆಕಾಯಿ ಹೋಳು : ಅರ್ಧ ಲೋಟ
ಹಸಿ ಮೆಣಸು : ಒಂದು
ತೆಂಗಿನ ಕಾಯಿ : ೧
ಉಪ್ಪು :ರುಚಿಗೆ ತಕ್ಕಷ್ಟು
ಕರಿ ಬೇವಿನೆಲೆ : ಹತ್ತು

೧.ತೆಂಗಿನ ತುರಿಯನ್ನು ರುಬ್ಬಿ,ಹಾಲು ತೆಗೆದು ಇಟ್ಟುಕೊಳ್ಳಿ.
೨.ಅಲಸಂದೆ ಕಾಳನ್ನು ೪-೫ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.ಬಳಿಕ ಇವುಗಳನ್ನು ಉಪ್ಪು ನೀರಿನಲ್ಲಿ ಕುಕ್ಕರಿನಲ್ಲಿ ಬೇಯಿಸಿ
೩.ತೆಂಗಿನ ಹಾಲನ್ನು ಎರಡು ಸಮ ಪಾಲುಗಳಾಗಿ ಮಾಡಿ. ಒಂದನೇ ಅರ್ಧ ಭಾಗದಲ್ಲಿ ತರಕಾರಿಗಳನ್ನು ಮತ್ತು ಹಸಿ ಮೆಣಸನ್ನು ಬೇಯಿಸಿ. ಉಪ್ಪು ಮತ್ತು ಕರಿಬೇವಿನೆಲೆ ಹಾಕಿ.
೪.ತರಕಾರಿಗಳು ಬೇಯುತ್ತಿದ್ದಂತೆ ಇದಕ್ಕೆ ಬೇಯಿಸಿದ ಅಲಸಂದೆ ಕಾಳನ್ನು ಸೇರಿಸಿ.
೫.ಬಳಿಕ ಉಳಿದ ತೆಂಗಿನ ಹಾಲು ಸೇರಿಸಿ, ಮಂದ ಉರಿಯಲ್ಲಿ ಬೇಯಿಸಿ. ಮಿಶ್ರಣವು ಸ್ವಲ್ಪ ದಪ್ಪ ಆಗುವ ತನಕ ಬೇಯಿಸಬೇಕು.


--------------------------------------------------------------
೪.ತೋರನ್
----------------------------------------------------------------

ಬೀನ್ಸ್ : ೧ ಲೋಟ
ಕ್ಯಾರೆಟ್ : ಒಂದು ಲೋಟ
ಸಣ್ಣ ನೀರುಳ್ಳಿ : ಅರ್ಧ ಲೋಟ
ತೆಂಗಿನ ತುರಿ :೫ ಚಮಚ
ಸಾಸಿವೆ :ಅರ್ಧ ಚಮಚ
ಜೀರಿಗೆ : ಒಂದು ಚಮಚ
ಕರಿ ಬೇವು : ಹತ್ತು
ಅರಸಿನ :ಅರ್ಧ ಚಮಚ
ಕೆಂಪು ಮೆಣಸಿನ ಹುಡಿ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ : ಸ್ವಲ್ಪ
ವಿಧಾನ
೧.ಬೀನ್ಸ್, ಕ್ಯಾರೆಟ್ ಮತ್ತು ನೀರುಳ್ಳಿಯನ್ನು ಸಣ್ಣಗೆ ಹೆಚ್ಚಿ.
೨.ತೆಂಗಿನ ತುರಿ, ಜೀರಿಗೆ ,ಕರಿಬೇವಿನೆಲೆ, ಬೆಳ್ಳುಳ್ಳಿ ಯನ್ನು ನೀರು ಹಾಕದೆ ರುಬ್ಬಿ.
೩.ಎಣ್ಣೆಯನ್ನು ಬಿಸಿ ಮಾಡಿ,ಸಾಸಿವೆ ,ಅರಸಿನ, ಕರಿಬೇವಿನೆಲೆ ಹಾಕಿ ಒಗ್ಗರಣೆ ತಯಾರಿಸಿ.
೪.ಇದಕ್ಕೆ ಹೆಚ್ಚಿದ ನೀರುಳ್ಳಿಯನ್ನು ಹಾಕಿ, ಅದು ಕಂದು ಬಣ್ಣ ಬರುವ ತನಕ ಹುರಿಯಿರಿ. ಇದಕ್ಕೆ ಬೀನ್ಸ್, ಕ್ಯಾರೆಟ್ ಸೇರಿಸಿ.ಕೆಂಪು ಮೆಣಸಿನ ಹುಡಿ , ಉಪ್ಪು ಮತ್ತು ರುಬ್ಬಿದ ಮಿಶ್ರಣ ಸೇರಿಸಿ,ಮಂದ ಉರಿಯಲ್ಲಿ ಬೇಯಿಸಿ.

-------------------------------------------------------------------------------------------------
೫.ಕಾಳನ್
--------------------------------------------------------------------------------------------------
ಇದು ನಾವು ಮಾಡುವ ಮಜ್ಜಿಗೆ ಹು ಳಿಯನ್ನು ಹೋಲುತ್ತದೆ

ಕೇನೆ ಗಡ್ಡೆ ಅಥವಾ ಸುವರ್ಣ ಗೆಡ್ಡೆ : ಒಂದು ಲೋಟ
ಬಾಳೆಕಾಯಿ : ಒಂದು
ಹಸಿ ಮೆಣಸು : 1
ಮೊಸರು : ಒಂದು ಲೋಟ
ತೆಂಗಿನ ತುರಿ : ಅರ್ಧ ಲೋಟ
ಜೀರಿಗೆ : ಒಂದು ಚಮಚ
ಸಾಸಿವೆ :ಅರ್ಧ ಚಮಚ
ಅರಸಿನ :ಚಿಟಿಕೆ
ಉಪ್ಪು : ರುಚಿಗೆ ತಕ್ಕಷ್ಟು
ತುಪ್ಪ : ೩ ಚಮಚ
ಕೆಂಪು ಮೆಣಸು: ೨
ಕರಿಬೇವು : ೧೦ ಎಸಳು
ಕಾಳು ಮೆಣಸಿನ ಹುಡಿ : ಒಂದು ಚಮಚ

ವಿಧಾನ

೧.ಸುವರ್ಣ ಗೆಡ್ಡೆ ಮತ್ತು ಬಾಳೆಕಾಯಿಯನ್ನು ಸಣ್ಣಗೆ ಹೆಚ್ಚಿ.
೨.ತೆಂಗಿನ ತುರಿ ಮತ್ತು ಜೀರಿಗೆಯನ್ನು ನೀರು ಹಾಕದೆ ನುಣ್ಣಗೆ ರುಬ್ಬಿ.
೩.ನೀರಿನಲ್ಲಿ ಕಾಳು ಮೆಣಸಿನ ಪುಡಿಯನ್ನು ಕರಗಿಸಿ,ಇದರಲ್ಲಿ ಹೆಚ್ಚಿದ ತರಕಾರಿಗಳನ್ನು ಸೇರಿಸಿ. ಹಸಿ ಮೆಣಸು,ಉಪ್ಪು ಮತ್ತು ಅರಸಿನ ಪುಡಿ ಹಾಕಿ,ಬೇಯಿಸಿ.
೪.ನೀರು ಕಡಿಮೆಯಾಗುತ್ತ ಬಂದಾಗ ಇದಕ್ಕೆ ತುಪ್ಪ ಹಾಕಿ .ಬಳಿಕ ಮೊಸರನ್ನು ಹಾಕಿ ಕಲಕಿ ,ಬೇಯಿಸಿ.
೫.ಇದು ದಪ್ಪವಾಗುತ್ತ ಬಂದಂತೆ ರುಬ್ಬಿದ ತೆಂಗಿನ ತುರಿ ಯ ಮಿಶ್ರಣವನ್ನು ಹಾಕಿ ,ಕಲಕಿ.
೫.ಕೆಂಪು ಮೆಣಸು , ಸಾಸಿವೆ, ಕರಿಬೇವಿನೆಲೆಯ ಒಗ್ಗರಣೆ ಕೊಡಿ.ಒಲೆ ಆರಿಸಿ,ಕೆಳಗಿಳಿಸಿ.

------------------------------------------------------------------------
೬.ತೆಂಗ ಚಾರು
------------------------------------------
ಟೊಮೇಟೊ :೨
ತೆಂಗಿನ ತುರಿ : ೪ ಚಮಚ
ಅರಸಿನ :ಚಿಟಿಕೆ
ಹಸಿ ಮೆಣಸು : ೨
ನೀರು :ಒಂದು ವರೆ ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಸಾಸಿವೆ : ಒಂದು ಚಮಚ
ಕರಿ ಬೇವಿನೆಲೆ : ೧೦
ಕೆಂಪು ಮೆಣಸು : ೧
ಎಣ್ಣೆ :ಒಂದು ಚಮಚ
ವಿಧಾನ
೧.ಟೊಮೇಟೊಗಳನ್ನು ನೀರಿನಲಿ ಬೇಯಿಸಿ.
೨.ಬೆಂದ ಬಳಿಕ ಇದಕ್ಕೆತೆಂಗಿನ ತುರಿ ,ಹಸಿ ಮೆಣಸು,ಉಪ್ಪು ಸೇರಿಸಿ ಮತ್ತಷ್ಟು ಕುದಿಸಿ.
೩.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ, ಸಾಸಿವೆ, ಕೆಂಪು ಮೆಣಸು,ಕರಿ ಬೇವಿನೆಲೆ ಹಾಕಿ ಒಗ್ಗರಣೆ ತಯಾರಿಸಿ,ಬೇಯುತ್ತಿರುವ ಮಿಶ್ರಣಕ್ಕೆ ಹಾಕಿ. ಒಲೆ ಆರಿಸಿ.

No comments: