Pages

Tuesday, March 31, 2009

ಮೆಂತೆ ತಂಬುಳಿ


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬೇಸಗೆಯಲ್ಲಿ ತಯಾರಿಸುವ ಒಂದು ಬಗೆಯ ಮೇಲೋಗರಕ್ಕೆ ’ತಂಬುಳಿ’ ಎಂದು ಹೆಸರು.ಬಿಸಿ ಬಿಸಿ ಅನ್ನಕ್ಕೆ ತಂಪಾದ ಈ ತಂಬುಳಿಯನ್ನು ಕಲಸಿಕೊಂಡು ಊಟ ಮಾಡುವುದೆಂದರೆ..ಆಹಾ..ಎಂಥ ರುಚಿ!! ತಂಬುಳಿಯ ಮೂಲವಸ್ತು :ತೆಂಗಿನಕಾಯಿ ತುರಿ ಮತ್ತು ಮಜ್ಜಿಗೆ. ಮತ್ತೆ ಒಗ್ಗರಣೆ. ಮೆಂತೆ ತಂಬುಳಿ,ಒಂದೆಲಗದ ತಂಬುಳಿ,ಶುಂಠಿ ತಂಬುಳಿ,ದೊಡ್ಡ ಪತ್ರೆ ತಂಬುಳಿ,ಮಾವಿನ ಮಿಡಿ ತಂಬುಳಿ..ಒಂದೇ ಎರಡೇ..ಹಲವಾರು ವಿಧದ ತಂಬುಳಿಗಳು ಜನಪ್ರಿಯವಾಗಿವೆ.

ಇಲ್ಲಿ ಮೆಂತೆ ತಂಬುಳಿ ಮಾಡುವ ವಿಧಾನವನ್ನು ಬರೆಯುತ್ತಿದ್ದೇನೆ.

ಬೇಕಾಗುವ ಸಾಮಗ್ರಿಗಳು
ಮೆಂತೆ:ಅರ್ಧ ಚಮಚ
ಜೀರಿಗೆ:ಒಂದು ಚಮಚ
ಕಾಳು ಮೆಣಸು :೬
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಅರ್ಧ ಲೋಟ
ಉಪ್ಪು:ರುಚಿಗೆ ತಕ್ಕಷ್ಟು

ಒಗ್ಗರಣೆಗೆ:ಎಣ್ಣೆ :ಒಂದು ಚಮಚ
ಬೇವಿನೆಲೆ :೬ ಎಸಳು
ಜೀರಿಗೆ:ಅರ್ಧ ಚಮಚ
ಸಾಸಿವೆ:ಅರ್ಧ ಚಮಚ

ವಿಧಾನ :
೧.ಮೆಂತೆ,ಜೀರಿಗೆ,ಕಾಳು ಮೆಣಸು ಇವುಗಳನ್ನು ಹುರಿದುಕೊಂಡು, ತೆಂಗಿನಕಾಯಿ ತುರಿಯ ಜತೆ ರುಬ್ಬಿ.
೨.ಈ ಮಿಶ್ರಣಕ್ಕೆ ಮಜ್ಜಿಗೆ,ಉಪ್ಪು ಹಾಕಿ ಕಲಸಿ.
೩.ಸಣ್ಣ ಪಾತ್ರೆಯಲ್ಲಿ/ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಬಿಸಿಯಾಗುತ್ತಿದ್ದಂತೆ,ಸಾಸಿವೆ,ಜೀರಿಗೆ ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ,ಬೇವಿನ ಎಸಳು ಹಾಕಿ
೪.ಇದನ್ನು ರುಬ್ಬಿ ಇಟ್ಟ ಮಿಶ್ರಣಕ್ಕೆ ಹಾಕಿ. ಕಲಸಿ.
೫.ಇದೇ ತಂಬುಳಿ.ಇನ್ನೇಕೆ ತಡ..ಅನ್ನದ ಜತೆ ಕಲಸಿ ತಿನ್ನಿ .

13 comments:

sunaath said...

Archana,
Thanks for the recipe.

ranjith said...

ಆಹಾ!

ಮೆಂತೆ ತಂಬುಳಿ!!

ಖುಷಿಯಾಯ್ತು ಓದಿ. ಉರಗ ದ ತಂಬುಳಿಯನ್ನೂ ಇದೇ ವಿಧಾನದಲ್ಲಿ ಮಾಡಬಹುದಾ?

-ರಂಜಿತ್.

Unknown said...

ತಂಬುಳಿ ಮನಸಿಗೆ ಮತ್ತು ಹೊಟ್ಟೆಗೆ ತಂಪು ನೀಡಿತು..
ಬಾಯ್ಯಕಸನ ತಂಬುಳಿ ಕರವೇ ಸಾಂಘವ ಆಜಿ :-)

shivu.k said...

ಅರ್ಚನ ಮೇಡಮ್,

ನನಗೆ ಮಾವಿನ, ಅಮಟೇಕಾಯಿ.. ತಂಬುಳಿ ಮಾಡುವುದು ಗೊತ್ತಿತ್ತು...ಮೆಂತ್ಯ ತಂಬುಳಿ ಕಲಿಸಿದ್ದೀರಿ...ಇವತ್ತು ರಾತ್ರಿ ಇದೇ...ಮಾಡಿಸಿ ರುಚಿ ನೋಡೇಬಿಡುತ್ತೇವೆ....
ದನ್ಯವಾದಗಳು...

Dr.Gurumurthy Hegde said...

Archana,
omme baayalli neeru bantu recipe keli

Bhavana Rao said...

hey i love the way you write..neat presenation, along with photo..:o)

Unknown said...

Tambuli nijawaglu chennagiratte.. mente soppu huridu saha ide reeti tambuli madbahudu...try madu....

Dkrbhat said...

ತಾರಕ್ಕ ತಂಬುಳಿ
ನಾ ಊಟಕ್ಕೆ ಬರುವೆನು
ತಾರೆ ತಂಬುಳಿಯಾ

ತಂಬುಳಿ ಹೀರಿದರೆ
ತಲೆಯೆ ತಂಪು
ತಾರೆ ತಂಬುಳಿಯಾ

ಬೇಸಿಗೆಯ ಬಿಸಿಲಿಗೆ
ತಂಪಾದ ತಂಬುಳಿ
ತಾರೆ ತಂಬುಳಿಯಾ

Dkrbhat said...

ತಾರಕ್ಕ ತಂಬುಳಿ
ನಾ ಊಟಕ್ಕೆ ಬರುವೆನು
ತಾರೆ ತಂಬುಳಿಯಾ

ತಂಬುಳಿ ಹೀರಿದರೆ
ತಲೆಯೆ ತಂಪು
ತಾರೆ ತಂಬುಳಿಯಾ

ಬೇಸಿಗೆಯ ಬಿಸಿಲಿಗೆ
ತಂಪಾದ ತಂಬುಳಿ
ತಾರೆ ತಂಬುಳಿಯಾ

ಮಲ್ಲಿಕಾರ್ಜುನ.ಡಿ.ಜಿ. said...

ಆಹಾ! ರುಚಿಯಾದ ತಂಬುಳಿ. ರೆಸಿಪಿಗಾಗಿ ಧನ್ಯವಾದಗಳು. ಖಂಡಿತ ನಮ್ಮನೇಲೂ ಮಾಡುತ್ತೇವೆ.

Guruprasad said...

ಅರ್ಚನ
ಗೊತ್ತಿರಲಿಲ್ಲ...ಇದರಬಗ್ಗೆ,, ನಮ್ಮ ಅಮ್ಮನಿಗೆ ತೋರಿಸಿ ಹೇಳಿದೆ... ಇವೊತ್ತೇ try ಮಾಡ್ತೇನೆ ಅಂತ ಹೇಳಿದರೆ,, ನೋಡೋಣ ಹೇಗೆ ಇರುತ್ತೋ ಅಂತ...

ಗುರು

Kishore said...

Nimminda inspire agai nanu kelavu aduge innovations start madtha iddini

Nivu kelvondannna patent madiddira anstatte... alva?

ರವಿರಾಜ್ ಆರ್.ಗಲಗಲಿ said...

idanna madodu kasta, tinnoke ista, enu madodu bayalli niru barisitu nimma lekhana...