Pages

Sunday, November 11, 2007

ಬಾದಾಮಿ ಹಲ್ವಾ:


ಬಾದಾಮಿ ಹಲ್ವಾ:

ಬೇಕಾಗುವ ಸಾಮಗ್ರಿಗಳು
ಬಾದಾಮಿ ೧೦೦ ಗ್ರಾಮ್
ಸಕ್ಕರೆ : ಒಂದುವರೆ ಲೋಟ
ಹಾಲು : ಅರ್ಧ ಲೋಟ
ತುಪ್ಪ : ೨-೩ ಚಮಚ


ಮಾಡುವ ವಿಧಾನ

ಮೊದಲು ಬಾದಾಮಿಯನ್ನು ಬಿಸಿನೀರಿನಲ್ಲಿ ಒಂದು ಘಂಟೆ ಕಾಲ ನೆನೆ ಹಾಕಿ.
ಆ ಬಳಿಕ ಬಾದಮಿ ಸಿಪ್ಪೆ ಸುಲಿಯಿರಿ.ಕೈಯಲ್ಲಿ ಒಂದಿಷ್ಟು ಬಾದಾಮಿ ತೆಗೆದುಕೊಂಡು ಜೋರಾಗಿ ಉಜ್ಜಿದರೆ ಸಿಪ್ಪೆ ಸುಲಭವಾಗಿ ಬೇರ್ಪಡುತ್ತದೆ. ಸಿಪ್ಪೆ ಸುಲಿದಾದ ಮೇಲೆ ಬಾದಾಮಿಯನ್ನು ಹಾಲಿನ ಜತೆ ನುಣ್ಣನೆ ರುಬ್ಬಿ.

ರುಬ್ಬಿದ ಬಾದಾಮಿ,ಸಕ್ಕರೆ ಇವುಗಳನ್ನು ಒಂದು ಕಡಾಯಿಯಲ್ಲಿ ಹಾಕಿ,ಒಲೆಯ ಮೇಲೆ ಇಟ್ಟು,
ಸುಮಾರು ೩೦ -೪೦ ನಿಮಿಷ ಮಂದ ಉರಿಯಲ್ಲಿ ಕಲಕುತ್ತಾ ಇರಿ.

ಬಾದಾಮ್ ಸಕ್ಕರೆ ಮಿಶ್ರಣವು ಪಾತ್ರೆಯ ಬದಿಯನ್ನು ಬಿಡುತ್ತಿದ್ದಂತೆ, ೨-೩ ಚಮಚ ತುಪ್ಪ ಹಾಕಿ.
ಮಿಶ್ರ್‍ಅಣವು ಗಟ್ಟಿಯಾಗುತ್ತಾ ಬಂದಂತೆ,ಅದನ್ನು ಒಲೆಯಿಂದ ಕೆಳಗಿರಿಸಿ.

ಇದೀಗ ರುಚಿಯಾದ ಬಾದಾಮ್ ಹಲ್ವಾ ತಯಾರು!!

13 comments:

Srivathsa Joshi said...

ಬಾಯಲ್ಲಿ ನೀರೂರಿಸುವ ಚಿತ್ರದೊಂದಿಗೆ ಬಾದಾಮಿಹಲ್ವಾ ಪ್ರಸ್ತುತಪಡಿಸಿದ್ದಕ್ಕಾಗಿ ಅರ್ಚನಾ ಅವರಿಗೆ ಧನ್ಯವಾದ ಮತ್ತು ಅಭಿನಂದನೆ.

ಈಗ ಕೆಲವು ’ಹಾಗೇ ಸುಮ್ಮನೆ...’ ಕಾಮೆಂಟ್ಸು :-)

1) ಬಾದಾಮಿ ಹಲ್ವಾ ಚಾರಿತ್ರಿಕವಾಗಿ ಮಹತ್ವವಾದುದು. ಚಾಲುಕ್ಯರ ಕಾಲದಲ್ಲಿ ರಾಜಧಾನಿ ಬಾದಾಮಿಯಲ್ಲಿ ಪ್ರತಿದಿನವೂ ರಾಜಸಭೆಯ ಕೊನೆಗೆ ಸಭಾಸದರೆಲ್ಲರಿಗೂ ಬಾದಾಮಿ ಹಲ್ವಾ ವಿತರಿಸಲಾಗುತ್ತಿತ್ತೆಂದು ಚರಿತ್ರಕಾರರು ವರ್ಣಿಸಿದ್ದಾರೆ.

೨) ಬೇಕಾಗುವ ಸಾಮಗ್ರಿಗಳು ಲಿಸ್ಟ್‌ನಲ್ಲಿ ತುಪ್ಪ ೨-೩ ಚಮಚ ಎಂದಿದೆ. ಅಂದರೆ ನೆಗೆಟಿವ್ ೧ ಚಮಚ?? ಬಹುಶಃ ಕೊಲೆಸ್ಟೊರಾಲ್ ಕೊಲೆಯಾಗಬೇಕೆಂದು ಆ ಲೆಕ್ಕ? ಹಾಗೆ ನೋಡಿದರೆ ೩೦-೪೦ (= ಮೈನಸ್ ೧೦) ನಿಮಿಷ ಮಂದ ಉರಿಯಲ್ಲಿ ಕಲಕುತ್ತಾ ಇರಬೇಕಾದ ಸಂಗತಿಯೂ ಸ್ವಲ್ಪ ಆಲೋಚಿಸಬೇಕಾದದ್ದೇ!

೩) "ಬಾದಾಮಿಯನ್ನು ಬಿಸಿನೀರಿನಲ್ಲಿ ಒಂದು ಘಂಟೆ ಕಾಲ ನೆನೆ ಹಾಕಿ" ಎಂದಿದೆ. ಘಂಟೆಕಾಲವೂ ನೀರು ಬಿಸಿಯಾಗಿಯೇ ಇರಬೇಕೊ?

೪) ಮಿಶ್ರಣವನ್ನು ಒಲೆಯಿಂದ ಕೆಳಗಿಳಿಸಿದ ಮೇಲೆ ತುಪ್ಪಸವರಿದ ತಟ್ಟೆಯಲ್ಲಿ ಹರಡಬೇಕೆಂಬ ಸ್ಟೆಪ್ಪು ಯಾಕೆ ಮೆನ್ಷನಿಸಲ್ಪಟ್ಟಿಲ್ಲ ? ಬಹುಶಃ ಹಲ್ವಾ temptation ತೀವ್ರವಾಗಿ ಆ ಸ್ಟೆಪ್ ಅವಶ್ಯಕತೆಯೇ ಬರೋದಿಲ್ಲ?

೫) ಏನೇ ಇರಲಿ, ಇಂತಹದೇ ಇನ್ನೂ ರುಚಿರುಚಿ ವಿಚಾರಗಳನ್ನು ಅರ್ಚನಾ ಬ್ಲಾಗಿಸುತ್ತಿರಲಿ, ನಾವೆಲ್ಲ ಓದಿ ಸವಿಯೋಣ. ಅ(ಹ)ಲ್ವಾ?

Devadatta Bhat said...

thanks kane! ondu helpu beku microwave nalli maadbodaada tindi publish maadidre nammantaha "naLapaaki" gaLige bahaLa upakaara vaagutte :-)

Anveshi said...

ಅರ್ಚನಾ ಅವರೆ,

ಬಾದಾಮಿ ಹಲ್ವ ಹೇಗೆ ಮಾಡುವುದು ಅಂತೆಲ್ಲಾ ಹೇಳಿ... ಕೊನೆಯಲ್ಲಿ ರುಚಿಯಾದ ಬಾದಾಮಿ ಹಲ್ವಾ ತಯಾರ್ ಅಂದಿದ್ದೀರಿ...

ಅದು ರುಚಿಯಾಗಿದೆ ಅಂತ ಗೊತ್ತಾಗೋದು ಹೇಗೆ ಮತ್ತು ಅದನ್ನು ತಿನ್ನೋದು ಹೇಗೆ ಅಂತ ಹೇಳಲೇ ಇಲ್ಲ....!!! :)

ಅದಕ್ಕೂ ಮೊದಲು, ಒಲೆಯ ಮೇಲಿಡಲು ಹೇಳಿದ್ದೀರಿ... ಒಲೆಯಲ್ಲಿ ಬೆಂಕಿ ಇರಲೇಬೇಕಾ? ತುಂಬಾ ಕನ್‌ಫ್ಯೂಶನ್ನು...

Krishnaa said...

its nice

Anonymous said...

Archana avare,

Belagaageddu diettina hotteyalli nimma BAADAAMI HALVA nodide... Ammanige recipe kalisikodteeni. Urinda baruvaaga maadi tartaare..
Bayalli neerUrtide.

:)

- Chetana

Anonymous said...

ಬಾದಾಮಿ ಹಲ್ವಾದ ರೆಸಿಪಿ ಓದಿದೆ. ಮನೆಗೆ ಹೋಗಿ ಪ್ರಯತ್ನಿಸಬೇಕು. ಡೌಟ್ ಬಂದ್ರೆ ಇದ್ದೇ ಇದೆಯಲ್ಲ, ಬಾದಾಮಿ ನೆನೆಯೋದ್ರೊಳ್ಗೆ ನಿಮ್ಮ ಬ್ಲಾಗ್ ನೋಡಿ ಬಿಟ್ರೆ ಆಯಿತು,
ಹೊಸ ವರ್ಷಕ್ಕೆ ಹೊಸ ಪ್ರಯತ್ನ.
ಥ್ಯಾಂಕ್ಸ್.

ನಾವಡ

ಸುಪ್ತದೀಪ್ತಿ suptadeepti said...

ಅರ್ಚನಾ, ೨೦೦೮-ರಲ್ಲೂ ಬಾದಾಮಿ ಹಲ್ವಾನೇ ಮಾಡ್ತಿರಬೇಕಾ?

ಹೊಸ ವರುಷ ಹರುಷದಾಯಕವಾಗಿರಲಿ.
ಸುಖ, ಸಂತಸ, ಶಾಂತಿ ತರಲಿ,
ನಗು ಹಬ್ಬಲಿ, ಬಿಗು ತಗ್ಗಲಿ,
ಸಮೃದ್ಧಿಯ ಆಪ್ತ ತೋಳು ಎಲ್ಲರನು ತಬ್ಬಲಿ.

Archu said...

@ಶ್ರೀವತ್ಸ ಜೋಶಿ ,
೧.ಧನ್ಯವಾದಗಳು ಚರಿತ್ರೆಯ ಪುಟಗಳನ್ನು ನೆನಪಿಸಿದ್ದಕ್ಕೆ :)
೨.ಅಯ್ಯೋ ದೇವಾ !!ಹೌದಲ್ವೆ!!
೩.ಮೊದಲಿಗೆ ಬಿಸಿ ಇದ್ದರೆ ಸಾಕು :)
೪.ತುಪ್ಪ ಸವರದೇ ಮಾಡಿದ್ದು ನಾನು..ಹಾಗೇ ಬ್ಲೊಗಿಸಿದ್ದೇನೆ.
೫.ನಿಮ್ಮ ಪನ್ ಬಹಳ ಸೊಗಸಾಗಿದೆ ಪಂಡಿತರೇ :)
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು !!

ದೇವದತ್ತ,
ನಮ್ಮ ಮನೆಯಲ್ಲಿ ಸದ್ಯಕ್ಕಿನ್ನೂ microwave oven ಬಂದಿಲ್ಲ..ಹಾಗಾಗಿ ಆ ಅಡುಗೆಗಳ ಬಗ್ಗೆ ಯೋಚಿಸಿಲ್ಲ!!
ನಾನು ಅವುಗಳನ್ನು ಮಾಡಿದಾಗಲಂತೂ ಖಂಡಿತ ಬ್ಲೊಗಿಸುತ್ತೇನೆ..ಬ್ಲೊಗ್ ಮೆಚ್ಚಿದ್ದಕ್ಕೆ ಥಾಂಕ್ಸ್!!

shrungara said...

ಮಾನ್ಯ ಓದುಗರೆ,

ಈಗಿನ ಕಾಲದಲ್ಲಿ ಕನ್ನಡ ಸಾಹಿತ್ಯ ದಲ್ಲಿ ಕಾದಂಬರಿಗಳನ್ನು ಓದುವವರ ಸಂಖ್ಯೆ ಗಣನೀಯ ವಾಗಿ ಕಡಿಮೆಯಾಗುತ್ತಿದೆ.
ಮೊದಲೆಲ್ಲಾ ಬಹಳ ಮಂದಿ ಓದುಗರಿದ್ದರು. ಈಗಿನ ಪೀಳಿಗೆಗೆ ಅದೆಲ್ಲ ಬೇಡವಾಗಿದೆ.

ಆದರೂ ನನ್ನಂತ ಕೆಲವು die-hard ಓದುಗರು, ಬರಹಗಾರರೂ ಇದ್ದಾರೆ, ಸದ್ಯಕ್ಕೆ!!


ನಾನೇನು ಮಾಡಿದೆ ಅಂತೀರೋ?

ನನ್ನ ಕತೆಗಳ (ಶೃಂಗಾರ ಕತೆಗಳ) ಒಂದು ಬ್ಲಾಗ್ ಪ್ರಾರಂಭಿಸಿಬಿಟ್ಟೆ..

ಓದ್ತೀರಾ? ಬನ್ನಿ ಇಲ್ಲಿಗೆ...

http://shrungara.blogspot.com/

ನಿಮ್ಮ ಅನಿಸಿಕೆ ಗಳನ್ನು ತಿಳಿಸುವುದು ಮಾತ್ರ ಮರೆಯಬೇಡಿ

Vens said...

ಮಿಸ್.ಅರ್ಚನಾ
ಈ ಹಲ್ವಾ ಹೀಟಾ ಅಥ್ವಾ ತಂಪಾ??
ಆರೋಗ್ಯಕ್ಕೆ ತಂಪಾಗುವಂತ ಬೇರೆ ತಿಂಡಿ ಬಗ್ಗೆನೂ ಸೊಲ್ಪ ಹೇಳ್ತೀರ?

ವೆಂಕಿ

ಪೂರ್ಣ ವಿ-ರಾಮ said...

ಹಲ್ವಾದ ಬಗ್ಗೆ ಹೇಳಿದ ತಮಗೆ ತುಂಬಾ ಧನ್ಯವಾದ. ಫೋಟೋನೂ ನೋಡಿ ಸಖತ್ ಥ್ರಿಲ್ ಆಗ್ಬುಟ್ಟೆ. ಕೂಡಲೇ ಪಕ್ಕದಲ್ಲಿದ್ದ ಬೇಕರಿಗೆ ಹೋಗಿ ಎರಡು ಕೇಜಿ ಹಲ್ವಾ ತಂದು ಹೇಳದೇ ಕೇಳದೇ ತಿಂದುಬಿಟ್ಟೆ( ವಿ.ಸೂ: ಒಂದು ವಾರದಲ್ಲಿ)

ಈಗ ಮತ್ತೆ ತಿನ್ನಬೇಕೆನ್ನಿಸುತ್ತಿದೆ. ಅದಕ್ಕೆ ಇನ್ನೊಂದು ಹೊಸ ಉಪಾಯ ಮಾಡಿದ್ದೇನೆ. ಸಾಗರದಿಂದ ನನ್ನ ಅಮ್ಮನಿಗೆ ಬರಹೇಳಿದ್ದೇನೆ. ಇನ್ನೇನು ನಾಳೆನೋ ನಾಡಿದ್ದೋ ಬಂದ್ ಬಿಡ್ತಾನೆ. ಆಮೇಲಂತೂ ಹಲ್ವಾದ್ದೇ ಹಬ್ಬ !


ತುಂಬಾ ಥ್ಯಾಂಕ್ಸು ಮೇಮ್

Anonymous said...

Ri, Ri, Ri... idu anyaya kanri. bare badami halva madod helkotbitre hengri... idanna maneli hengasre madbeku anthanu baribekithri,, illi nan hendthi nannane madkodi antha prana thinthalri...

NAN HENDTHI HATHRANE MADSKONDU THINNONA ANDRE AVALA KAI RUCHI THINDU THINDU BEJARAGOGIDE KANRI,

NIM PHONE NUMBER KODRI CALL MADI ADDRESS THAKONDU NIM KAI RUCHI NODTHINKARI..


SMARAN....

Anonymous said...

This is a great nutritious dish. Anything containing almonds is very good for health. I have been using almonds on regular basis and my energy level has been so good and I feel so all through the day. Even if you can not make halwa regularly, just try eating a few almonds right in the morning with a glass of milk and see it for yourself. My quick breakfast recipe is to soak in milk a handful of almonds, cashew, raisins and pista the night before and have it for breakfast. Best breakfast if you are hurry. Cheers to almonds!