Pages

Friday, January 18, 2008

ಫುಲ್ಕಾ ...



ಬ್ಲಾಗ್ ಗೆ ಅಕ್ಷರ ಸೇರಿಸದೆ ಬಹಳ ದಿನಗಳಾದವು.ಕಾರಣಗಳು ಹಲವಾರು ಇದ್ದರೂ ಮುಖ್ಯ ಕಾರಣ "ಉದಾಸೀನ "..ಇವತ್ತು ಅದನ್ನು ಹೇಗಾದರೂ ಮೆಟ್ಟಿ ನಿಂತು, ಫುಲ್ಕಾ ಮಾಡುವ ವಿಧಾನ ವನ್ನು ಇಲ್ಲಿ ಬರೆಯುತ್ತಿದ್ದೇನೆ.

ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು : ೨ ಲೋಟ
ಉಪ್ಪು : ರುಚಿಗೆ ತಕ್ಕಷ್ಟು
ನೀರು :ಒಂದು ಲೋಟ

ಮಾಡುವ ವಿಧಾನ
ಗೋಧಿ ಹಿಟ್ಟು , ಉಪ್ಪು, ನೀರು ಇವುಗಳನ್ನು ಚೆನ್ನಾಗಿ ಕಲಸಿ.ಹತ್ತು ನಿಮಿಷ ಹಾಗೇ ಬಿಡಿ.
ಆಮೇಲೆ ಗೋಧಿ ಹಿಟ್ಟಿನ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಚಪಾತಿ ಲಟ್ಟಿಸುವಂತೆ ಲಟ್ಟಿಸಿ.

ಕಾವಲಿಯನ್ನು ಬಿಸಿಮಾಡಿ, ಆ ಬಳಿಕ ಲಟ್ಟಿಸಿದ ಸಣ್ಣ ಚಪಾತಿಗಳನ್ನು ಕಾವಲಿಗೆ ಹಾಕಿ.ಸ್ವಲ್ಪ ಬೆಂದ ಕೂಡಲೇ,ಅವುಗಳನ್ನು ಚಿಮಟಿಯ ಸಹಾಯದಿಂದ ಕಾವಲಿಯಿಂದ ತೆಗೆದು,ನೇರವಾಗಿ ಬೆಂಕಿ ಮೇಲೆ ಸುಡಬೇಕು.ಎರಡೂ ಒಲೆಗಳನ್ನು ಉರಿಸಿದರೆ ಒಳ್ಳೆಯದು.ಒಂದರಲ್ಲಿ ಕಾವಲಿಯಲ್ಲಿ ಬೇಯಿಸುವುದು, ಇನ್ನೊಂದರಲ್ಲಿ ಚಪಾತಿಯನ್ನು ನೇರವಾಗಿ ಸುಡುವುದು ಒಟ್ಟಿಗೆ ಮಾಡಬಹುದು.

ಫುಲ್ಕಾ ತಯಾರು!!
ಪಲ್ಯ/ಸಾಂಬಾರಿನ ಜತೆ ಫುಲ್ಕಾವನ್ನು ಸವಿಯಬಹುದು!!

ಇನ್ನೇಕೆ ತಡ, ಫುಲ್ಕಾ ಮಾಡಿ, ಹೇಗಾಯಿತು ಹೇಳಿ!!
thatskannada

6 comments:

ಬಾನಾಡಿ said...

ಪುಲ್ಕಾವನ್ನು ಸಾಂಬಾರಿನಲ್ಲಿ ತಿನ್ನುವುದಕ್ಕಿಂತ ಒಳ್ಳೆಯ ಪಲ್ಯದಲ್ಲಿ ತಿನ್ನುವುದು ರುಚಿಯಾಗಿರುತ್ತದೆ.
ಒಲವಿನಿಂದ
ಬಾನಾಡಿ

Archu said...

thanks for comments baanadi.
loko bhinnaruchihi !!

cheers,
archana

Anonymous said...

ನಗುವು ಸಹಜದ ಧರ್ಮ
ನಗಿಸುವುದು ಪರ ಧರ್ಮ
ನಗುವ ನಗಿಸುತ ನಗಿಸಿ
ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
ವಿಳಾಸ: http://nagenagaaridotcom.wordpress.com/

ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.

ನಗೆ ಸಾಮ್ರಾಟ್

sunaath said...

ನನ್ನ ಶ್ರೀಮತಿ ನಿಮ್ಮ recipe ತಯಾರಿಸಿ ತಿನ್ನಿಸಿದರು. ತುಂಬಾ ಚೆನ್ನಾಗಿದೆ. ಇನ್ನೂ ಇಂತಹ recipeಗಳನ್ನು ದಯವಿಟ್ಟು ತಿಳಿಸಿರಿ.

ಮಹೇಶ್ ಪುಚ್ಚಪ್ಪಾಡಿ said...

ಚೆನ್ನಾಗಿದೆ.ಇನ್ನೂ ಹೆಚ್ಚು ಐಟಂಗಳ ಬಗ್ಗೆ ತಿಳಿಸಿ.

Sushrutha Dodderi said...

ಪ್ರಿಯ ಅರ್ಚನಾ,

ನಮಸ್ಕಾರ. ಹೇಗಿದ್ದೀ?

ನಿಂಗೂ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು


ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ