Pages

Wednesday, July 25, 2007

ಅನಿಸುತಿದೆ ಯಾಕೋ ಇಂದು...

(ಕವಿ ಜಯಂತ ಕಾಯ್ಕಿಣಿಯವರ ಕ್ಷಮೆ ಕೋರಿ..)

ಅನಿಸುತಿದೆ ಯಾಕೊ ಇಂದು
ರೈಲದು ಓಡಲೇಬೇಕು ಎಂದು
ಬೆಂಗಳೂರ ಲೋಕದಿಂದ
ಮಂಗಳೂರಿಗೆ ಬರಬೇಕೆಂದು
ಆಹಾ ಎಂಥ ಮಧುರ ಯೋಚನೆ
ರೈಲು ಸೀಟಿ ಕೂಗೆ ಒಮ್ಮೆ ಹಾಗೆ ಸುಮ್ಮನೆ ||

ಕಡಿಮೆಯಾದೀತು ತುಸು ಅಫಘಾತದ ತಳಮಳ
ಘಾಟಿಯ ಟ್ರಾಫಿಕ್ ಜಾಮ್ ರಜಾ ಹಾಕಲಿದೆ
ರೈಲಿನ ಮೊಗವನು ಕಂಡ ಕ್ಷಣ
ಹಸಿರು ಬಾವುಟ ತೋರಲಿ ಒಮ್ಮೆ
ಹಾಗೆ ಸುಮ್ಮನೆ||

ಓಡದ ರೈಲಲಿ ಕಾಣದ
ಕೈಗಳ ಕಹಿ ಇದೆ
ಹಳಿಯಲಿ ಬರೆಯದ ನಿನ್ನ
ಹೆಸರು ಕಡತದಲಿ ಉಳಿದಿದೆ||
ರೈಲಿಗುಂಟೆ ಇದರ ಕಲ್ಪನೆ?

ಓಡಬಾರದೆ ರೈಲು ಒಮ್ಮೆ
ಹಾಗೆ ಝುಮ್ಮನೆ!! || ಅನಿಸುತಿದೆ|
(ತರಂಗ ಆಗಸ್ಟ್ ೨,೨೦೦೭ ,ಪುಟ ಸಂಖ್ಯೆ ೨೨ ರಲ್ಲಿ ಪ್ರಕಟವಾಗಿದೆ )

24 comments:

ವಿಕ್ರಮ ಹತ್ವಾರ said...

ಅಬ್ಬಾ.....ಅಂತೂ ಬಂದ್ಯಲ್ಲ....

ಮಂಜು ಶಂಕರ್ said...

ಚೆನ್ನಾಗಿದೆ ಮಾರಾಯ್ತಿ!

ಮುಂಗಾರು ಮಳೆಯ ಜ್ವರ ನಿನ್ನನ್ನೂ ಬಿಡಲಿಲ್ವಾ ;-) ?

ಕಡೆಗೂ ತರಂಗದ ಕ.ಬು ಗೆ ಹೋಗಲಿಲ್ಲವಲ್ಲ! (j/k!)

Raghavendra Udupa said...

Good one.. Let me see Taranga..

ಉಮಾಶಂಕರ್ ಯು. said...

ಅಂತು ಬಂದ್ರಲ್ಲ ... ಸುಮಾರು ದಿನದಿಂದ ಪತ್ತೆನೆ ಇರ್ಲಿಲ್ಲ ... ಬಂದ ಕೂಡಲೆ ರೈಲು ಬಿಡೋಕೆ ಶುರು ಮಾಡಿದ್ರ ... ಹೇಗೆ ... :) Anywayz good one .. ರೈಲಿಗುಂಟೆ ಇದರ ಕಲ್ಪನೆ? ನಿಮ್ಮದು ಸೊಪರ್ ಕಲ್ಪನೆ.

cheers...
ಉಮಾ ...

Unknown said...

anisuthidhe yaako indhu...
neevu uthama kaviyaaguvirandhu...

Madhavarao said...

Good compose.... Tumba chennagide

Anonymous said...

very nice
wish you good luck

Anonymous said...

Great !!! Chennagide ...

Devadatta Bhat said...

sooper kaNe... naanooo ide railige kaaytaa ideeni!

Anonymous said...

geLeyare, chindiyaagi discussion nadeetaa ide. Heege munduvareyali…

innondu vishya: ide tara, kannaDada para chintane, charche, hot discussions

ella ee hosa blog alloo nadeetide. illoo bhAgavahisONa banni !


http://enguru.blogspot.com


- KattEvu kannaDada naaDa, kai joDisu baara !

mouna said...

nice!! hope your dream comes true :)

Anonymous said...

Another feather in your "Kavana" cap. A good piece of work, keep it up. All the best.

GK

Ashu said...

ಅರ್ಚನ,
ಆ ಕಾಣದ ಕೈಗಳು ಒಮ್ಮೆ ಈ ಕವನವನ್ನು ಒದಿ, ಮಂಗಳೂರಿನಿ೦ದ ಬೆ೦ಗಳೂರಿಗೆ ಕಡತದಲ್ಲಿ ಒಡುತ್ತಿದ್ದ ರ್ರೈಲನ್ನು ಹಳಿ ಮೇಲೆ ಓಡಿಸ್ಥಾರಾ ನೊಡೋಣ..

Anyway..Hats Off for ur imagination :)

Ashok Rao.

ವಿನಾಯಕ ಭಟ್ಟ said...

ಕವನ ಚೆನ್ನಾಗಿದೆ.
ಅನಿಸುತಿದೆ ಯಾಕೋ ಇಂದು
ಮತ್ತೆ ಮತ್ತೆ ನಿಮ್ಮ ಕವನ ಓದಬೇಕೆಂದು
ಒಮ್ಮೆಯಾದರೂ ಪ್ಯಾಸೆಂಜರ್ ರೈಲು ಓಡಬೇಕೆಂದು
ಅದರಲ್ಲಿ ನಾನು ಹೋಗಬೇಕೆಂದು.

ನಿಮ್ಮಿಂದ ಇನ್ನಷ್ಟು ಇಂತಹ ರೀಮಿಕ್ಸ್ ಗಳು ಬರಲಿ. ನಮಗೆ ಖುಷಿ ತರಲಿ.

Unknown said...

thumba chennagide.
part 2 mungaru thegithiddaranthe
ondu chance nodbahudu.
tharanga thegothene.
goodluck.

Ramki said...

Chennagide

Anonymous said...

After all teh songs that I've seen on the internet. the poems like Kuvempu an dthe ones of Ranna fame.. Now, you've put the most famous of them all! Well done, my dear! Well done!

Anonymous said...

--------------------------------------------------------
If you think you need to type in Kannada, please use quillpad.in/kannada/ It's going to
make your life so easy, you'll think computers were made for Kannada. Try Quillpad. Put up lot
of blog articles and anything else you may want to do...

Anonymous said...

ವಿಕ್ರಮ್,
ಹಾ..ಬಂದೆ ...ರೈಲಲ್ಲಿ ಅಲ್ಲಾ :-)

ಮಂಜು,
ಹೌದು ಮಹಾರಾಯ..ಕ.ಬು.ಗೆ ಎಸೆದು ಎಸೆದು ಅವರಿಗೆ ಸುಸ್ತಾಯಿತಂತೆ ..

ರಾಘವೇಂದ್ರ,
ಥಾಂಕ್ಸ್ ಮೆಚ್ಚಿಕೊಂಡದ್ದಕ್ಕೆ..

ಉಮಾಶಂಕರ್,
ಕೆಲಸ ಮಾಮೂಲಿಗಿಂತ ಜಾಸ್ತಿ ಇತ್ತು..( ಹಾಗಂತ ರೈಲು ಬಿಡ್ತಾ ಇಲ್ಲ..)
ಧನ್ಯವಾದಗಳು.

ಮಧು,
ನಿಮ್ಮ ಮೆಚ್ಚುಗೆಯ ಕವನಕ್ಕೆ ಥಾಂಕ್ಯು..

ಮಾಧವ,ಗಿಲ್ಲಿ,ಶ್ರೆಕ್,
ಮೆಚ್ಚುಗೆಗೆ ಧನ್ಯವಾದ..

ದೇವದತ್ತ,
ನಾನೂ ಕಾಯ್ತಾ ಇದ್ದೇನೆ..ಬೇಗ ಬಂದರೆ ಸಾಕು..

Anonymous said...

ಬನವಾಸಿ ಬಳಗ,
ಥಾಂಕ್ಸ್, ಮಾಹಿತಿ ಹಂಚಿಕೊಂಡದ್ದಕ್ಕೆ..

ಮೌನ,ವಿನಾಯಕ ಭಟ್ಟ,GK,Ashok,Ramki,ಆಶಾ ಮಾಮಿ,
ಎಲ್ಲರಿಗೂ ಥಾಂಕ್ಸ್..

ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್ said...

ಚೆನ್ನಾಗಿದೆ.

ನನ್ನ ಬ್ಲಾಗ್ ಫ್ರೆಂಡ್,

http://kavimanasu.blogspot.com/

Nadi Basavaraju said...

ತರಂಗದಲ್ಲಿ ಓದಿದ್ದೆ. ಚೆನ್ನಾಗಿ ಬರೆದಿದ್ದೀರಾ.

ಸುಧೇಶ್ ಶೆಟ್ಟಿ said...

chennagi barediddeera...

navaz.kodal said...

tumba chanagide ide thara innu alau rymix madi all the best