Pages

Wednesday, August 15, 2007

ಸ್ವಾತಂತ್ರ್ಯ ದಿನಾಚರಣೆ .....


ಅಗೋಸ್ತು ಹದಿನೈದು ಯಾವ ವಾರ ಬಂದಿದೆ ಅಂತ ಕಣ್ಣಾಡಿಸಿದೆ..ವಾವ್ಹ್!!ಬುಧವಾರ..ಈ ಸಲ ರಜೆ ನಷ್ಟವಾಗಲಿಲ್ಲ ಅಂತ ಮನದಾಳದಲ್ಲಿ ಹರ್ಷದ ಬುಗ್ಗೆಗಳೆದ್ದವು. ಜತೆಗೆ ನಾನು ಬಾಲ್ಯದಲ್ಲಿ ಆಚರಿಸುತ್ತಿದ್ದ ಸ್ವಾತಂತ್ರ್ಯ ದಿನ ಕಣ್ಣೆದುರು ಬಂತು.

ಸ್ವಾತಂತ್ರ್ಯ ದಿನಾಚರಣೆ ಶಾಲೆಯಲ್ಲಿ ಆಚರಿಸುತ್ತಿದ್ದ ಬಲು ದೊಡ್ಡ ಹಬ್ಬ. ಸುಮರು ಹದಿನೈದು ದಿನಗಳ ಮುಂಚೆಯೇ ಅದಕ್ಕೆ ತಯಾರಿ ಆರಂಭವಾಗುತಿತ್ತು.
ಧ್ವಜ ಗೀತೆ,ರಾಷ್ಟ್ರ ಭಕ್ತಿಗೀತೆಗಳ ತಾಲೀಮಿನ ಜತೆಗೆ,ಭಾಷಣ,ನೃತ್ಯ,ರಸಪ್ರಶ್ನೆ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸುವ ತರಾತುರಿ.ನಾಟಕದ ಪಾತ್ರದ ಮಾತುಗಳಂತೂ ಮನೆಯವರಿಗೆಲ್ಲ ಬಾಯಿಪಾಠವಾಗುತ್ತಿದ್ದವು.ಅಮ್ಮನ ಸೀರೆ,ಅಪ್ಪನ ಮುಂಡು ಇವಕ್ಕೆಲ್ಲ ಎಲ್ಲಿಲ್ಲದ ಬೇಡಿಕೆ.ಕೋಲಾಟ,ಲೇಜಿಮು,ಗೀ ಗೀ ಪದ,ಸುಗ್ಗಿ ಕುಣಿತ ಒಂದೇ ಎರಡೇ ಎಷ್ಟೊಂದು ಬಗೆಯ ಕಾರ್ಯಕ್ರಮಗಳು!!

ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಲಾಗುತ್ತಿತ್ತು.ಸ್ವಾತಂತ್ರ್ಯೋತ್ಸವದ ದಿನವಂತೂ ನಮ್ಮ ಸಂಭ್ರಮವನ್ನು ಕೇಳುವುದೇ ಬೇಡ. ಬೇಗನೆ ಎದ್ದು,ಸಮವಸ್ತ್ರ ಧರಿಸಿ ತಯಾರಾಗುತ್ತಿದ್ದೆವು, ಮನೆಯ ಹೂದೋಟದಲ್ಲಿ ಎಷ್ಟು ಹೂವುಗಳು ಸಿಗುತ್ತವೋ ಅವುಗಳನ್ನೆಲ್ಲ ಕೊಯ್ದು,ಶಾಲೆಗೆ ಕೊಂಡೊಯ್ಯುತ್ತಿದ್ದೆವು.ದ್ವಜದ ಒಳಗೆ ಬಣ್ಣ ಬಣ್ಣದ ಹೂವುಗಳನ್ನು ತುಂಬಿಸಿ,ಧ್ವಜಾರೋಹಣಕ್ಕೆ ಅಣಿ ಮಾಡುತ್ತಿದ್ದೆವು.ಧ್ವಜಸ್ಥಂಭದ ಸುತ್ತ ಹೂವಿನ ರಂಗೋಲಿಯ ಸೊಬಗು. ಧ್ವಜಾರೋಹಣ ಆದಾಗ , ಎಲ್ಲರೂ ಒಕ್ಕೊರಲಿನಿಂದ ’ಝಂಡಾ ಊಂಚಾ ರಹೇ ಹಮಾರಾ ’ ಎಂದು ಹಾಡುತ್ತಿದ್ದೆವು ಅದರ ಅರ್ಥವೇನೆಂದು ಗೊತ್ತಿಲ್ಲದಿದ್ದರೂ..

ನಮ್ಮೆಲ್ಲರ ಕಣ್ಣಲ್ಲಿ ಸಂಭ್ರಮದ ನಗು.ಮಕ್ಕಳ ನೃತ್ಯ,ನಾಟಕ ಇವನ್ನೆಲ್ಲಾ ನೋಡಲು ಬಂದ ಹೆತ್ತವರ ಮೊಗದಲ್ಲಂತೂ ಹೆಮ್ಮೆಯ ಸೊಬಗು!! ಮೇಷ್ಟ್ರೋ ಅಥವಾ ಹಿರಿಯರೋ ಬರೆದುಕೊಟ್ಟ ಭಾಷಣವನ್ನು ಉರು ಹೊಡೆದು ಹೇಳುವುದಂತೂ ಸಣ್ಣ ಕೆಲಸವೇನಲ್ಲ!!
ಬಹುಮಾನ ಗೆದ್ದರಂತೂ ಜಗವನ್ನೇ ಗೆದ್ದ ಹರ್ಷ!! ಬಹುಮಾನ ಒಂದು ಸಣ್ಣ ಪೆನ್ಸಿಲ್ ಇರಲಿ ಅಥವಾ ಪುಟ್ಟ ಲೋಟವೇ ಇರಲಿ,ಖುಷಿಯೇನೂ ಪುಟ್ಟದಾಗಿರುತ್ತಿರಲಿಲ್ಲ!!

ಸಭಾಕಾರ್ಯಕ್ರಮ ಮುಗಿದ ಮೇಲೆ ಎಲ್ಲರಿಗೂ ಬೆಲ್ಲ,ತೆಂಗಿನಕಾಯಿ ಜತೆ ಕಲಸಿದ ಅವಲಕ್ಕಿ ನೀಡಲಾಗುತ್ತಿತ್ತು.ಎಲ್ಲ ಕಾರ್ಯಕ್ರಮಗಳು ಮುಗಿದು ಮನೆಗೆ ಬಂದ ಮೇಲೂ ಸ್ವಲ್ಪ ದಿನ ಆ ಸಂಭ್ರಮದ ದಿನದ್ದೇ ಗುಂಗು!!

ಶಾಲಾದಿನಗಳಲ್ಲಿದ್ದ ಆ ಸಂಭ್ರಮದ ದಿನವನ್ನು ಈಗ ನಾನು ಕೇವಲ ರಜಾದಿನದ ದೃಷ್ಟಿಯಲ್ಲಿ ಕಾಣುತ್ತಿರುವುದನ್ನು ಯೋಚಿಸಿ ಒಮ್ಮೆ ವಿಷಾದವಾಯಿತು.ಯಾಕೆ ನನ್ನ ಮನಸ್ಠಿತಿ ಈ ರೀತಿಯಾಗಿ ಬದಲಾಗಿದೆ ಎಂದು ಯೋಚಿಸಲಾರಂಭಿಸಿದೆ.

7 comments:

ಅನಂತ said...

ಖಂಡಿತ ಸ್ವಾತಂತ್ರ್ಯ ದಿನದ ಸಂಭ್ರಮ ಈಗ ಕಳೆದ್ಹೋಗಿದೆ.
೧ ತಿಂಗಳು ಪ್ರಾಕ್ಟಿಸ್ ಮಾಡಿ,ಪೆರೇಡ್ ಅಲ್ಲಿ ನಮ್ಮ ರಾಷ್ಟ್ರಧ್ವಜಕ್ಕೊಂದು ಸೆಲ್ಯೂಟ್ ಹೊಡ್ಕೊಂಡು ಹೋಗಬೇಕಾದ್ರೆ ಮನಸಲ್ಲಿ ಎನೋ ಹೆಮ್ಮೆ, ನಾನೊಬ್ಬ ಭಾರತೀಯ ಅಂತ.

ಈಗ ಎಲ್ಲಾ ಆಫೀಸ್,ಕಂಪೆನಿಗಳಲ್ಲೂ ಧ್ವಜಾರೋಹಣ ಮಾಡಿದ್ರೆ ಚೆನ್ನಾಗಿರುತ್ತೆ, ಆದ್ರೆ ಮಾಡುವವರು ಯಾರು..?

Supreeth.K.S said...

ಸ್ವಾತಂತ್ರ್ಯ ದಿನಾಚರಣೆಯ ದಿನದ ಸಂಭ್ರಮ, ನಲಿವನ್ನು ಮತ್ತೊಮ್ಮೆ ಅನುಭವಿಸಿದಂತಾಯ್ತು. ಬೆಳಗಾಗಿ ಬೇಗನೇ ಎದ್ದು, ಹಿಂದಿನ ದಿನ ತಾನೆ ಅಮ್ಮ ನೀಲಿ ಹಾಕಿ ಒಗೆದಿರಿಸಿದ ಬಿಳಿಯ ಯೂನಿಫಾರ್ಮ್, ಕ್ಯಾನ್ವಾಸ್ ಶೂ ತೊಟ್ಟು ಅಂಗಿಯ ಜೇಬಿನ ಮೇಲೆ ಪುಟ್ಟ ಧ್ವಜವನ್ನು ಸಿಕ್ಕಿಸಿಕೊಂಡು, ಶಾಲೆಗೆ ಹೋಗುತ್ತಿದ್ದ ನೆನಪು ಇಂದಿಗೂ ಹಸಿರು...

Anonymous said...

ಅರ್ಚನಾ,
ಅನಂತರವರ ಆಫೀಸು ಧ್ವಜಾರೋಹಣದ ಐಡಿಯಾ ಚೆನ್ನಾಗಿದೆ. ಆ ದಿನ ಎದ್ದುಬರುವ ಕಾಳಜಿ, ಮನಸ್ಸು ನಮಗಿರಬೇಕು. ಅಷ್ಟೆ. ನಿಮ್ಮ ನೆನಪುಗಳು, ಕಳಕಳಿ ಎಲ್ಲವನ್ನೂ ಆತ್ಮೀಯವಾಗಿ ಹಂಚಿಕೊಂಡಿರುವುದು ಚೆನ್ನಾಗಿದೆ.
- ಟೀನಾ.

Kalidas geleyara balaga said...

Archana,

I used to read "O Manase" by Ravi Belegere when I was at Bangalore.

Now at Pune, I am not getting that magzine, but eager to read ur scripts very much. words are simply superb !!

While reading ur scripts I feel like am I reading my personal dairy..? really u direct readers to some other world.

SUNDAR NENAPONDE SHASHWATH KODUGE.
antha helodakke nimma script saakari.

waiting for next script.
- Lokesh

Anonymous said...

ಕನ್ನಡ ಮಿತ್ರರೇ,
ನಾಡ ಪರ ಭಾಷಣಗಳು ಇಲ್ಲಿಯವರೆವಿಗು ಎಷ್ಟೊ ಬಂದು ಹೋದವು. ಆದರೆ, ಅದರಲ್ಲಿ ಎಚ್ಚರಿಕೆಯ ಮಾತುಗಳು ಕೆಚ್ಚಿನ ನುಡಿಗಳು ಇಣುಕಿಯೂ ಕೂಡ ಇರಲಿಲ್ಲ.

ಪ್ರತಿ ವರುಷ, ಕನ್ನಡಿಗರಲ್ಲಿ ಜಾಗೃತಿ ಹಾಗೂ ಆತ್ಮಸ್ಥಿರ್ಯ ತುಂಬಲು ಕರ್ನಾಟಕ ರಕ್ಷಣಾ ವೇದಿಕೆಯ ವತಿ ಇಂದ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ನಡೆಯುತ್ತದೆ.

ಕಳೆದ ವರುಷ ಬಳ್ಳಾರಿಯಲ್ಲಿ ಜರುಗಿತು. ಟಿ.ಏ.ನಾರಾಯಣ ಗೌಡರು ಬೆಂಕಿಯ ನುಡಿಗಳ್ಳನ್ನಾಡಿದರು. ವಲಸಿಗರ ಧರ್ಮದ ಬಗ್ಗೆ ತಿಳುವಳಿಕೆ ಹಾಗು ಎಚ್ಚರಿಕೆಯನ್ನು ನೀಡಿದರು.

ಅವರ ಕೆಲವು ಮಾತು ಗಳು ಹೀಗಿದ್ದವು -

"ನುಡಿ ಕಾಯಿ, ಗಡಿ ಕಾಯಿ, ಇಲ್ಲಿ ಬದುಕ್ತ ಇದ್ದೀಯ, ಬಾಳ್ತ ಇದ್ದಿಯ, ನಮ್ಮ ನಾಡಿನ ಭಾಷೆಯನ್ನ ಕಾಯಿ ನಮ್ಮ ನಾಡಿನ ಜನರ ಹಿತವನ್ನ ಕಾಯಿ, ಈ ನಾಡಿನ ನೆಲ ಜಲಗಳನ್ನ ಕಾಯಿ ಇಲ್ದಿದ್ರೆ ...."ಮುಂದೆ ಕೇಳಲು ಇಲ್ಲಿ ನೋಡಿ
http://www.karave.blogspot.com/


http://www.karnatakarakshanavedike.org/app/webroot/files/samaavesha_varadi.pdf


೬ ನೇಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶ,
ಬೆಂಗಳೂರುನಲ್ಲಿ, ಸೆ ೨೮-೨೯ ರಂದು
ಅರಮನೆ ಮೈದಾನ
ತಪ್ಪದೆ ಬನ್ನಿ
ಸ್ವಾಭಿಮಾನಿಗಳಾಗಿ

Anonymous said...

Hi Archana

Very Good Article. Made me to go back to my school days for celebrating independence day.

Be posting such articles which makes us to know the reality n feel for it.

Unknown said...

neevu barediro article tumba chennagi moodi bandide.