ಸುಳ್ಳು ಕಂತೆಗಳ ಮಟ್ಟ ಹಾಕುತಿದೆ
ಈ ಹೊತ್ತಗೆಯ ಪ್ರತಿ ಕಣ
ದೂರ ಸರಿಸಿದೆ ನಮ್ಮ ಚಿತ್ತಭಿತ್ತಿಗೆ
ಕವಿದಂತಹ ಗ್ರಹಣ ||
ಇತಿಹಾಸದ ನೈಜ ಚಿತ್ರಣ
ನೀಡಿಹುದು ಆವರಣ
ಧರ್ಮಾಂಧತೆಯ ಪರಿಮಾಣ
ತಿಳಿಸಲಿಲ್ಲ ಶಾಲಾ ಶಿಕ್ಷಣ||
ಒಂದೇ ತಿಂಗಳಲಿ ಕಂಡಿಹುದು
ನಾಲ್ಕನೇ ಮುದ್ರಣ
ಸಾಹಿತ್ಯ ಲೋಕದ ಭೀಮಕಾಯನ
ಪರಿಶ್ರಮ ಇದಕೆ ಕಾರಣ||
ಒಳಗಡೆ ತುಂಬಿಹುದು
ಸತ್ವಭರಿತ ಹೂರಣ
ಓದುಗರಿಗೆ ನೀಡುತಿಹುದು
ಭರ್ಜರಿ ರಸದೌತಣ||
ಕೃತಿಯ ಅಂಚು ಅಂಚಿಗೂ ಇಹುದು
ಸತ್ಯ ಮತ್ತು ಸೌಂದರ್ಯದ ತೋರಣ
ಅದಕಾಗಿಯೇ ಕರ್ತೃ ಗೈದಿಹರು
ಸತತ ಅನ್ವೇಶಣ||
4 comments:
ಕವನದ ಮೂಲಕ ಆವರಣದ ಪರಿಚಯ, ಸಾರಾಂಶದ ಜೊತೆಗೆ ಕನ್ನಡದ ಸಾಹಿತ್ಯದ ಭೀಮಕಾಯನಿಗೆ ನುಡಿನಮನ ಸಲ್ಲಿಸಿರುವ ನಿಮಗೆ ವಂದನೆಗಳು.
ಶಾಲಾ ಶಿಕ್ಷಣ ಇಂಥ ವಿಷಯದ ಬಗ್ಗೆ ತಿಳಿಸ್ಲಿಕ್ಕೆ ಹೊರ.ಟ್ರೇ ಅಂಬೇಡ್ಕರ್ ಬಗ್ಗೆ ತಿಳುಸುದು ಯಾರು? ಮಹಮದ್ ಗಜ಼ನಿ ಎಷ್ಟು ಬಾರಿ ಭಾರತದ ಮೇಲೆ ಆಕ್ರಮಣ ಮಾಡಿದ ಅಂತ ಕಳಿಸುದು ಯಾರು?
ತುಂಬಾ ಚೆನ್ನಾಗಿದೆ.. ಅವರಣ ಖಂಡಿತ ಓದಿ ನೋಡ್ತೇನೆ.. ಪುಣೆ ಯಲ್ಲಿ ಪುಸ್ತಕ ಸಿಕ್ಕುದು ಸ್ವಲ್ಪ ಕಸ್ತ ಅಷ್ಟೇ
Aavarana Oduvudakkagi monneyaste kritiyannu kondukonde. Nimma kavana adannu oduva apeksheyannu innastu hechchiside.
Abhinandanegalu.....nimma kavanarachane munduvareyali...
sogasaada Kaavya rachane.nannallina saahityaasakthige uttejana sikkidantaaytu. rachanakaararige vandanegalu.
Post a Comment