Pages

Friday, March 9, 2007

ನಮನ

ಉನ್ನತ ಚಿಂತನೆಯ
ಸ್ಫೂರ್ತಿಯ ಸೆಲೆಯೆ
ಸಾಧನೆಯ ಛಲ ಹೊತ್ತ
ಕಾಂತಿಯ ನೆಲೆಯೆ

ಏರಿದೆಯಲ್ಲ ನೀನು
ಅಷ್ತೊಂದು ಎತ್ತರಕೆ
ಕಾಯುತ್ತಿದ್ದೆವು ನಾವು
ನಿನ್ನ ಉತ್ತರಕೆ

ಆಗಿಯೇ ಬಿಟ್ಟಿತು
ಕೊಲಂಬಿಯಾ ದುರಂತ
ಭಸ್ಮವಾದಿರಿ ನೀವೆಲ್ಲ
ಹೀಗಾದದ್ದು ಯಾಕಂತ

ಅಷ್ಟು ಬೇಗನೆ ನಿನಗೇಕೆ ಬಂತು
ಭಗವಂತನ ಕರೆ
ಇನ್ನಷ್ಟು ಸುರಿಸಬಹುದಿತ್ತಲ್ಲ
ಸಂಶೊಧನಾ ಧಾರೆ

ನೀಲ ನಭದಲಿ ಮಿಂಚಿ
ಮರೆಯಾದ ಉಜ್ವಲ ತಾರೆ
ಮತ್ತೊಮ್ಮೆ ನೀ ಬುವಿಯಲಿ
ಜನ್ಮ ತಳೆದು ಬಾರೆ

ಜನಮನದಲ್ಲಿ ನಿನ್ನ
ನೆನಪು ಶಾಶ್ವತ
ಅತ್ಮವಿಶ್ವಾಸದ ಮೊಗ
ಮತ್ತು ನಿನ್ನ ಮಂದಸ್ಮಿತ

3 comments:

ಮಂಜು ಶಂಕರ್ said...

ಚೆನ್ನಾಗಿದೆ.

regular ಆಗಿ ಬರೀರಿ!

ಮಂಜು ಶಂಕರ್ said...

ಫೆಬ್ರವರಿ ೨೦೦೩ ರ ಒಂದು ಶನಿವಾರ ಬೆಳಿಗ್ಗೆ ಆಸ್ಟಿನ್, ಟೆಕ್ಸಸ್ ನಲ್ಲಿ ಸ್ನೇಹಿತನೊಡನೆ ತಿಂಡಿ ಮುಗಿಸಿ ಟಿ.ವಿ. ಹಾಕಿದ್ರೆ ನೋಡಿದ್ದು ಈ ದುರ್ಘಟನೆ. ನಮ್ಮೂರಿನಿಂದ ಜಾಗದಿಂದ ಸುಮಾರು ೮೦-೯೦ ಮೈಲಿ ದೂರದಲ್ಲಿ ಸ್ಪೇಸ್-ಶಟಲ್ ನ ಪಳೆಯುಳಿಕೆಗಳು ಬಿದ್ದಿದ್ದವು.

Death has no logic.

ನನ್ನ ದೃಷ್ಟಿಯಲ್ಲಿ ಕಲ್ಪನಾ ಚಾವ್ಲಾ ಕೇವಲ ಭಾರತೀಯ ಮಹಿಳೆಯರಿಗೆ ಮಾತ್ರ ಅಲ್ಲ, ಜಗತ್ತಿನ ಎಲ್ಲ ಮಹಿಳೆಯರಿಗೆ ಆದರ್ಶಪ್ರಾಯ. ನಮ್ಮ ವೇದಗಳಲ್ಲಿ ಉಲ್ಲೇಖವಾಗಿರುವ ಧೀಮಂತ ಸ್ತ್ರೀಯರ ಪ್ರತಿರೂಪ. ದುರದೃಷ್ಟವಶಾತ್, ಇಂತಹ ಉತ್ತಮ ವ್ಯಕ್ತಿಗಳಿಗಿಂತ ನಮ್ಮ ಯುವತಿಯರಿಗೆ glamor, show-off ವ್ಯಕ್ತಿಗಳು ಅನುಕರಣೀಯರಾಗಿದ್ದಾರೆ. (ಯುವಕರಿಗೂ ಅನ್ವಯವಾಗುತ್ತೆ ಈ ಮಾತು).

ಶ್ವೇತ said...

ಹೀಗೆ ಅಡ್ಡಾಡುತ್ತಿರುವಾಗ ನಿಮ್ಮ ಬ್ಲಾಗ್ ಸಿಕ್ಕಿದ್ದು. ತುಂಬ ಚೆನ್ನಾಗಿದೆ ಈ ನಮನ ಕವನ.