ಬಗೆ ಬಗೆ ಲೇಖನಗಳ
ಸರಮಾಲೆ ಧರಿಸುತ್ತ
ವರ್ಣಮಯ ಚಿತ್ರಗಳ
ವಸ್ತ್ರ ಹೊದೆಯುತ್ತ
ಈ ಚೆಲುವೆ 'ಜ್ಞಾನಸುಧೆ' ಹರಿಸುವಳು||
ಟೀಕೆ ಟಿಪ್ಪಣಿಗಳಿಗಾಗಿ
'ಸಮುದ್ರಮಥನ'ಗೈಯ್ಯುತ್ತ
ನಕ್ಕು ಹಗುರಾಗಲು
'ನಗೆ ಹೊನಲು'ಸೂಸುತ್ತ
ಈ ಚೆಲುವೆ ಮಿನುಗುತಿಹಳು||
ಪುಟಾಣಿಗಳ ಕುಣಿದಾಟಕ್ಕೆ
'ಎಳೆಯರ ಅಂಗಳ' ತೋರಿಸುತ್ತ
ಮುಂದೇನಾದೀತೆಂಬ ಕಾತರಕೆ
'ಭವಿಷ್ಯವಾಣಿ' ನುಡಿಯುತ್ತ
ಈ ಚೆಲುವೆ ನಲಿಯುತಿಹಳು||
ಸರ್ವರ ಸುಖವನು ಬಯಸಿ
'ಸುಖೀಭವ' ಎಂದು ಪಿಸುಗುಟ್ಟುತ್ತ
ಕೊಂಚ ವಯ್ಯಾರದ ಮಾತುಗಳ
'ಲಘುಬಿಗು'ವಿನಲಿ ಉಲಿಯುತ್ತ
ಈ ಚೆಲುವೆ ಬೆಳಗುತಿಹಳು||
ನೊಂದ ಮನದ ಸಾಂತ್ವನಕೆ
'ಆಪ್ತ ಸಲಹೆ'ನೀಡುತ್ತ
ತರ್ಲೆ ಪ್ರಶ್ನೆಗಳಿಗೆ ಉತ್ತರಿಸುವಳು
'ನೀವು ಕೇಳಿದಿರಿ'ಅನ್ನುತ್ತ
ಈ ಚೆಲುವೆ ನಗುತಿಹಳು||
ಟಿ ವಿ ಧಾರಾವಾಹಿಗಳ ವಿಮರ್ಶೆ
'ಜಾಣ ಪೆಟ್ಟಿಗೆ'ಯಿಂದ ನೀಡುತ್ತ
ಹತ್ತು ಹಲವು ಸಮಾಚಾರ
'ಸುದ್ದಿ ಸ್ವಾರಸ್ಯ' ಹೇಳುತ್ತ
ಈ ಚೆಲುವೆ ಓಡಾಡುತಿಹಳು||
ಇದೆಯೆ ನಿಮಗೆ 'ಪುಸ್ತಕ ಪ್ರೀತಿ'
ಎಂದು ಪ್ರಶ್ನಿಸುತ್ತ
ಬಣ್ಣಬಣ್ಣದ 'ಚಿತ್ರಲೋಕ'ದ
ರಂಗು ಚೆಲ್ಲುತ್ತ
ಈ ಚೆಲುವೆ ಬಣ್ಣದ ಓಕುಳಿಯಾಡುತಿಹಳು||
ಪುಟ ಸಂಖ್ಯೆ ೨೪, ಸುಧಾ ವಾರ ಪತ್ರಿಕೆ ,೧೩,ಎಪ್ರಿಲ್ ,೨೦೦೬
'ನಿಮ್ಮ ಪುಟ' ದಲ್ಲಿ ಪ್ರಕಟವಾಗಿದೆ.
6 comments:
ನಿಮಗೆ ಪುಸ್ತಕ ಪ್ರೀತಿ, ಕನ್ನಡ ಪ್ರೀತಿ ಎರಡೂ ಉಂಟು ಅಂತ ಗೊತ್ತಾಗ್ತದೆ. ನನ್ನ ಬ್ಲಾಗಿನಲ್ಲಿ ನಿಮ್ಮ ಪುಟದ ಕೈಮರ ಹಾಕಬಹುದೆ?
khandita..
'ಸುಧಾ' ಕಣ್ಣ ಮುಂದೆ ಬಂದು ನಿಂತಿತು.. ತುಂಬಾ ಚೆಂದ ಉಂಟು ಪದ್ಯ
thanks vijendra :-)
ಸುಧಾ ಪತ್ರಿಕೆ ಈಗ್ಲೂ ಅಷ್ಟು ಚೆನ್ನಾಗಿದ್ಯಾ? ಕಳೆದ ೫-೬ ವರ್ಷದಿಂದ ತರಂಗ ಮಾತ್ರ ಒದೋದು - ಅದೂ ಮುಂಚಿನಷ್ಟು ಒಳ್ಳೆದಿಲ್ಲ
haan..sudhaa chennagide..
taranga nange eegeega ashtondu ishta aagtaa illa..
Post a Comment