Pages

Thursday, February 24, 2011

ಮೊಸರು ಗೊಜ್ಜು

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

ಬೇಸಗೆಯ ಬಿಸಿಲಿಗೆ ಅಥವಾ ಮಸಾಲೆಯುಕ್ತ ಪದಾರ್ಥಗಳ ಜತೆ ತಂಪು ನೀಡುವುದು ಮೊಸರಿನ ಈ ಖಾದ್ಯಗಳು. ತಯಾರಿಸಲು ಸುಲಭ. ಆರೋಗ್ಯಕ್ಕೆ ಹಿತಕರ. ಇನ್ನೇಕೆ ತಡ!! ಇವುಗಳನ್ನು ಮಾಡಿ ನೋಡಿ .

೧.ಅನಾನಸು ರಾಯಿತ


ಬೇಕಾಗುವ ವಸ್ತುಗಳು
ಅನಾನಸಿನ ಚೂರುಗಳು : ಒಂದು ಲೋಟ
ಮೊಸರು : ಎರಡು ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಕಾಳು ಮೆಣಸಿನ ಪುಡಿ :ಚಿಟಿಕೆ
ಜೇನು : ಒಂದು ಚಮಚ

ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಒಟ್ಟಿಗೆ ಕಲಸಿ.ಬಿಸಿ ಅನ್ನದ ಜತೆ ತಂಪಾದ ರಾಯಿತ ..ಆಹಾ ಏನು ಅಧ್ಭುತ ರುಚಿ !

೨.ಬಟಾಟೆ ಮೊಸರು ಗೊಜ್ಜು


ಬೇಕಾಗುವ ವಸ್ತುಗಳು
ಬಟಾಟೆ :೧
ಹಸಿ ಮೆಣಸು :೨
ಶು೦ಠಿ :ಸಣ್ಣ ಚೂರು
ಮೊಸರು : ಎರಡು ಲೋಟ
ಉಪ್ಪು:ರುಚಿಗೆ ತಕ್ಕಷ್ಟು

ಒಗ್ಗರಣೆಗೆ
ಎಣ್ಣೆ, ಸಾಸಿವೆ,ಜೀರಿಗೆ,ಉದ್ದು :ತಲಾ ಒಂದು ಚಮಚ
ಅರಸಿನ :ಚಿಟಿಕೆ
ಕರಿಬೇವಿನೆಲೆ ಹತ್ತು ಎಸಳು

ವಿಧಾನ
೧.ಬಟಾಟೆ ಯನ್ನು ಬೇಯಿಸಿ, ಸಿಪ್ಪೆ ತೆಗೆದು ,ಚೆನ್ನಾಗಿ ಪುಡಿ ಮಾಡಿ ಇಟ್ಟುಕೊಳ್ಳಿ.
೨.ಇದಕ್ಕೆ ಮೊಸರು,ಶು೦ಠಿ,ಕತ್ತರಿಸಿದ ಹಸಿ ಮೆಣಸು,ಉಪ್ಪು ಹಾಕಿ ಚೆನ್ನಾಗಿ ಕಲಸಿ.
೩.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಸಾಸಿವೆ,ಜೀರಿಗೆ,ಅರಸಿನ ಹಾಕಿ ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಕರಿಬೇವಿನೆಲೆ ಹಾಕಿ .ಇದನ್ನು ಬಟಾಟೆಯ ಮಿಶ್ರಣಕ್ಕೆ ಹಾಕಿ.

೩.ತೊಂಡೆಕಾಯಿ ಮೊಸರು ಗೊಜ್ಜು

ಬೇಕಾಗುವ ವಸ್ತುಗಳು
ತೊಂಡೆಕಾಯಿ: ಒಂದು ಲೋಟ
ತೆಂಗಿನ ತುರಿ : ಕಾಲು ಲೋಟ
ಜೀರಿಗೆ : ಒಂದು ಚಮಚ
ಕಾಳು ಮೆಣಸು : ಅರ್ಧ ಚಮಚ
ಮೊಸರು : ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆಗೆ
ಎಣ್ಣೆ, ಸಾಸಿವೆ,ಜೀರಿಗೆ,ಉದ್ದು :ತಲಾ ಒಂದು ಚಮಚ
ಅರಸಿನ :ಚಿಟಿಕೆ
ಕರಿಬೇವಿನೆಲೆ ಹತ್ತು ಎಸಳು

ವಿಧಾನ :

೧.ತೊಂಡೆಕಾಯಿಯನ್ನು ಇಡಿಯಾಗಿ ಬೇಯಿಸಿ ಇಟ್ಟುಕೊಳ್ಳಿ.
೨.ಇದನ್ನು ತೆಂಗಿನ ತುರಿ,ಜೀರಿಗೆ ,ಕಾಳು ಮೆಣಸು ಇವುಗಳ ಜತೆ ಒಟ್ಟಿಗೆ ರುಬ್ಬಿ.
೩.ರುಬ್ಬಿದ ಮಿಶ್ರಣಕ್ಕೆ ಮೊಸರು,ಉಪ್ಪು ಹಾಕಿ ಕಲಕಿ.
೪.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಸಾಸಿವೆ,ಜೀರಿಗೆ,ಅರಸಿನ ಹಾಕಿ ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಕರಿಬೇವಿನೆಲೆ ಹಾಕಿ .ಇದನ್ನು ಬಟಾಟೆಯ ಮಿಶ್ರಣಕ್ಕೆ ಹಾಕಿ.


೪.ಪಡುವಲಕಾಯಿ ಹಶಿ


ಬೇಕಾಗುವ ವಸ್ತುಗಳು
ಪಡುವಲಕಾಯಿ:೧
ತೆಂಗಿನ ತುರಿ : ಕಾಲು ಲೋಟ
ಬೆಲ್ಲ : ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು
ಒಗ್ಗರಣೆಗೆ
ಎಣ್ಣೆ, ಸಾಸಿವೆ :ತಲಾ ಒಂದು ಚಮಚ
ಇಂಗು :ಚಿಟಿಕೆ
ಕರಿಬೇವಿನೆಲೆ ಹತ್ತು ಎಸಳು
ಕೆಂಪು ಮೆಣಸು :೨

ವಿಧಾನ
೧.ಪಡುವಲಕಾಯಿಯನ್ನು ಸಣ್ಣಗೆ ಹೆಚ್ಚಿ
೨.ಇದನ್ನು ನೀರು,ಬೆಲ್ಲ ಮತ್ತು ಉಪ್ಪು ಇವುಗಳ ಜತೆ ಬೇಯಿಸಿ,ತಣಿಸಿ.
೩.ತೆಂಗಿನ ತುರಿಯನ್ನು ನುಣ್ಣಗೆ ರುಬ್ಬಿ,ತಣಿದ ಪಡುವಲಕಾಯಿ ಮಿಶ್ರಣಕ್ಕೆ ಹಾಕಿ.
೪.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ, ಸಾಸಿವೆ,ಕೆಂಪು ಮೆಣಸು ,ಇಂಗು ಹಾಕಿ .ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಕರಿಬೇವಿನೆಲೆ ಹಾಕಿ .ಇದನ್ನು ಪಡುವಲಕಾಯಿ ಮಿಶ್ರಣಕ್ಕೆ ಹಾಕಿ.


೫.ದೊಣ್ಣೆ ಮೆಣಸಿನ ಕಾಯಿ ರಾಯಿತ

ಬೇಕಾಗುವ ವಸ್ತುಗಳು
ದೊಣ್ಣೆ ಮೆಣಸಿನ ಕಾಯಿ :೨
ಮೊಸರು : ಎರಡು ಲೋಟ
ಬೆಲ್ಲ :ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆಗೆ
ಎಣ್ಣೆ:ಎರಡು ಚಮಚ
ಸಾಸಿವೆ,ಜೀರಿಗೆ,ಉದ್ದು :ತಲಾ ಒಂದು ಚಮಚ
ಕೆಂಪು ಮೆಣಸು : 3
ಅರಸಿನ :ಚಿಟಿಕೆ
ಕರಿಬೇವಿನೆಲೆ ಹತ್ತು ಎಸಳು

ವಿಧಾನ
೧.ದೊಣ್ಣೆ ಮೆಣಸಿನ ಕಾಯಿಯನ್ನು ಸಣ್ಣಗೆ ಹೆಚ್ಚಿ.
೨.ಬಾಣಲೆಯಲ್ಲಿ ಎಣ್ಣೆ ಹಾಕಿ,ಸಾಸಿವೆ,ಜೀರಿಗೆ,ಉದ್ದು, ಕೆಂಪು ಮೆಣಸು , ಅರಸಿನ ಹಾಕಿ ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಕರಿಬೇವಿನೆಲೆ ಹಾಕಿ.
೩.ಇದಕ್ಕೆ ಹೆಚ್ಚಿದ ದೊಣ್ಣೆ ಮೆಣಸನ್ನು ಹಾಕಿ ಚೆನ್ನಾಗಿ ಬಾಡಿಸಿ.
೪.ಬಳಿಕ ಇದಕ್ಕೆ ಉಪ್ಪು ಮತ್ತು ಬೆಲ್ಲ ಹಾಕಿ ಮಂದ ಉರಿಯಲ್ಲಿ ಕಲಕಿ.
೫.ಒಲೆ ಆರಿಸಿ,ಇದನ್ನು ತಣಿಯಲು ಬಿಡಿ. ಬಳಿಕ ಇದಕ್ಕೆ ಮೊಸರು ಸೇರಿಸಿ.
೬.ದೊಣ್ಣೆ ಮೆಣಸಿನ ಕಾಯಿ ಮೊಸರು ಗೊಜ್ಜು ತಯಾರಾಯಿತು.
---------------------------------------------------------------------------------------------

7 comments:

ವಿ.ರಾ.ಹೆ. said...

thank you thank you. ಪಡುವಲಕಾಯಿ ಹಶಿ nange bhari ishta.

shivu.k said...

ಸಕ್ಕತ್ ಟೇಷ್ಟಿ ಅನ್ನಿಸುತಿದೆ...

sunaath said...

ಅರ್ಚನಾ,
Thanks a lot.

Unknown said...

ಬಾಯಲ್ಲಿ ನೀರು ಬರ್ತಿದೆ

Unknown said...

ಬಾಯಲ್ಲಿ ನೀರು ಬರ್ತಿದೆ

Unknown said...

ಬಾಯಲ್ಲಿ ನೀರು ಬರ್ತಿದೆ

Unknown said...

bayalli niru bartide