'ಕನ್ನಡಹನಿಗಳಲ್ಲಿ ಹೊಸ ಕವಿತೆ ಬರೆದರೆ ಅದು ಕವಿತ್ವ...
ಕನ್ನಡಹನಿಗಳನ್ನೇ ಕದ್ದು ಬೇರೆಡೆ ಬರೆದರೆ ಅದು ಕಪಿತ್ವ
ಸೃಜನ ಶೀಲತೆಯನ್ನು ಪ್ರೋತ್ಸಾಹಿಸುವುದೇ ನೈಜತ್ವ'
ಈ ಸಾಲುಗಳು ಇರುವುದು ಕನ್ನಡ ಹನಿಗಳು ಎಂಬ ಜಾಲತಾಣದಲ್ಲಿ.
ಆದರೆ ಅವರು ನನ್ನ ಬ್ಲಾಗ್ ನಿಂದ ಸದ್ದಿಲ್ಲದೇ ಒಂದು ಛಾಯಾಚಿತ್ರವನ್ನು ಕದ್ದು ಅವರ ಜಾಲ ತಾಣದಲ್ಲಿ ಹಾಕಿಕೊಂಡಿದ್ದಾರೆ.
ನಾನು ನಮ್ಮ ಮನೆಯಲ್ಲಿ ನೆಲ್ಲಿಕಾಯಿ ತಂಬುಳಿ ತಯಾರಿಸಿ, ನನ್ನದೇ ಕ್ಯಾಮೆರ ದಲ್ಲಿ ತೆಗೆದ ನೆಲ್ಲಿಕಾಯಿ ತಂಬುಳಿಯ ಚಿತ್ರ ಯಥಾವತ್ತಾಗಿ ಅವರ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
nanna blog
kannada hanigaLu
ಈ ಬಗ್ಗೆ ನಾನು ಅವರಿಗೆ ಮೈಲ್ ಮಾಡಿದರೂ ಅದರ ಬಗ್ಗೆ ಯಾವುದೇ ಉತ್ತರ ಬಂದಿಲ್ಲ. ಇದಕ್ಕೆ ಏನು ಹೇಳಬೇಕು ?
ಇಂಥದ್ದೇ ಒಂದು ಸಂಗತಿಯನ್ನು ಕೆಲವು ದಿನಗಳ ಹಿಂದೆ ಪಾಕ ಚಂದ್ರಿಕೆಯ ನಾವಡರೂ ಪ್ರಸ್ತಾಪಿಸಿದ್ದರು.
6 comments:
ಹೌದು. ಚಿತ್ರ ತೆಗೆದುಕೊಂಡರೂ ಅದರ ಮೂಲ ಉಲ್ಲೇಖಿಸುವುದು ಅವರ ಕರ್ತವ್ಯ.
ಇದು ನಾಚಿಕೆಗೇಡು ವಿಷಯ!
ಸುಷ್ಮಾಸಿಂಧು ಅವರ blogನಿಂದಲೂ ಸಹ ಒಂದು ಲೇಖನ ಕಳುವಾಗಿ, ಒಂದು ಆಂಗ್ಲ blogದಲ್ಲಿ ಪ್ರಕಟವಾಗಿತ್ತು.
ಹೀಗೂ ಇದಾರ ಇಲ್ಲಿ....???
Dear Archana,
ಮೊದಲು ನಿಮ್ಮಲ್ಲಿ ನಮ್ಮ ಕ್ಷಮೆಯಿರಲಿ. ನಾನು ಸ್ವಲ್ಪ ದಿನಗಳಿಂದ ಬ್ಯುಸಿ ಇದ್ದೆ. ಆದ ಕಾರಣ ನಿಮ್ಮ ಯಾವುದೇ ಅಹವಾಲನ್ನು ನೋಡಲು ಸಾಧ್ಯವಾಗಲಿಲ್ಲ. ಹಾಗಾಗಿ ಕ್ಷಮಿಯಿರಲಿ ಎಂದು ಕೋರುತ್ತಿದ್ದೇನೆ.
ನಮ್ಮಲ್ಲಿ ನಾವೇ ಯಾವ ಛಾಯಾಚಿತ್ರವನ್ನು ಕದಿಯುವುದಿಲ್ಲ. ಒಂದು ವೇಳೆ ಹಾಗೆ ಹಾಕಿದರೆ, ಅದರ ವಾರಸುದಾರರ ಇಚ್ಚೆ ಹಾಗು ಅವರ ಹೆಸರನ್ನು ಕೊಡುತ್ತೇವೆ. ಆದರೆ ಈ ರೆಸಿಪಿಯನ್ನು ಯಾರೋ ಬೇರೆಯವರು ಹಾಕಿರುವುದರಿಂದ ಹಾಗೂ ಅದನ್ನು ನಾವು ಪರಿಶೀಲಿಸಲು ಸಾಧ್ಯವಾಗದ ಕಾರಣ ಅದು ಪ್ರಕಟಗೊಂಡಿದೆ. ನಿಮ್ಮ ಮೇಲ್ ನೋಡಿ ಅದನ್ನು ತೆಗೆದಿದ್ದೇನೆ.
ಮತ್ತೊಮ್ಮೆ ಕ್ಷಮೆಯಿರಲಿ ಎಂದು ಕೋರುವ,
ನಿಮ್ಮ ಕನ್ನಡಹನಿಗಳ ಬಳಗ.
Heegooo Unteeee......
photonuu kaditaara?
Post a Comment