ಮಹಾರಾಷ್ಟ್ರದ ವರ್ಲಿ ಬುಡಕಟ್ಟಿನ ಜನರು ತಮ್ಮ ಮನೆಗಳ ಗೋಡೆಯ ಮೇಲೆ ಬಿಡಿಸುವ ಸುಂದರ ಚಿತ್ರಗಳು ಈಗ ಎಲ್ಲೆಡೆಯೂ ಮನೆಮಾತಾಗಿವೆ.
ಇವರು ಪ್ರಕೃತಿಯ ಆರಾಧಕರು. ಪ್ರಕೃತಿಯ ಜತೆಗೆ ಸಮರಸದ ಜೀವನ ನಡೆಸುತ್ತ ಬಂದವರು. ಅವರ ನಿತ್ಯದ ಜೀವನ,ಕೃಷಿ, ಬೇಟೆ , ಪ್ರಕೃತಿ ,ಹಬ್ಬದ ಆಚರಣೆಗಳು, ನೃತ್ಯ, ವಿನೋದ ಎಲ್ಲವನ್ನೂ ಚಿತ್ರಗಳಾಗಿ ಮೂಡಿಸುತ್ತಾರೆ. ತಮ್ಮ ಮನೆಯ ಗೋಡೆಯನ್ನು ಮಣ್ಣು, ಸೆಗಣಿಯಿಂದ ಸಾರಿಸಿ, ಅದರಲ್ಲಿ ಅಕ್ಕಿ ಹಿಟ್ಟಿನಿಂದ ಚಿತ್ತಾರಗಳನ್ನು ಬಿಡಿಸಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಬಳಕೆಯಾಗುವ ಆಕಾರ ಗಳು ತ್ರಿಭುಜ, ವೃತ್ತ ,ಚೌಕ ಮತ್ತು ಸರಳ ರೇಖೆಗಳು. ಒಂದಕ್ಕೊಂದು ಅಂಟಿದ ಎರಡು ತ್ರಿಭುಜಗಳು ಮನುಷ್ಯ,ಪ್ರಾಣಿಯನ್ನು ಪ್ರತಿನಿಧಿಸುತ್ತವೆ. ಈ ಚಿತ್ರಕಲೆ ಸರಳ ಮತ್ತು ಚಿತ್ತಾಕರ್ಷಕವಾಗಿದೆ.
ನನಗೆ ಇತ್ತೀಚಿಗೆ ಈ ಕಲೆಯಲ್ಲಿ ಅಪಾರ ಆಸಕ್ತಿ ಮೂಡಿ ಬಂತು. ಹಾಗಾಗಿ ವರ್ಲಿ ತರಗತಿಗಳಿಗೆ ಹಾಜರಾಗಿ ಒಂದಷ್ಟು ವರ್ಲಿ ಚಿತ್ತಾರಗಳನ್ನು ಕಲಿತೆ .
ಇವು ನಾನು ಬಿಡಿಸಿದ ವರ್ಲಿ ಚಿತ್ರಗಳು.
ವರ್ಲಿ ಜನರ ನಿತ್ಯ ಜೀವನ
ವರ್ಲಿ ಜನರ ನೃತ್ಯ
ಇತ್ತೀಚಿಗೆ ಬಂದ ಕೋಕೋ ಕೋಲಾದ ಜಾಹೀರಾತಿನಲ್ಲಿ ವರ್ಲಿ ಚಿತ್ರದ ದೀಪಾವಳಿ ಆಚರಣೆಯನ್ನು ಅಳವಡಿಸಲಾಗಿದೆ. ಜಯನಗರದಲ್ಲಿ ಕಂಡುಬಂದ ಜಾಹೀರಾತು ಫಲಕ ಇದು :
ಲಾಲ್ ಬಾಗಿನ ಬಳಿ ಗೋಡೆಗಳ ಮೇಲೆ ಬರೆದಿರುವ ಚಿತ್ತರಗಳಲ್ಲಿ ವರ್ಲಿ ಚಿತ್ರಕಲೆಯನ್ನು ಕಾಣಬಹುದು. ಚಿತ್ರಕೃಪೆ :ಪ್ರಜಾವಾಣಿ.
ವರ್ಲಿ ಬಗ್ಗೆ ಮತ್ತಷ್ಟು ಓದಿಗೆ : Unique Art Of Warli Paintings (Hardcover)
by Sudha Satyawadi
Publisher: D. K. Printworld (p) Ltd. (2010)
8 comments:
ಬುಡಕಟ್ಟು ಜನಾಂಗದವರ ಚಿತ್ರಗಳು ಒಂದು ವಿಶಿಷ್ಟ ಚೆಲುವನ್ನು ಹೊಂದಿವೆ. ನೀವು ಈ ಕಲೆಯನ್ನು ಕರಗತ ಮಾಡಿಕೊಂಡಿದ್ದು ಪ್ರಶಂಸನೀಯ. ಇಲ್ಲಿ ಕೊಟ್ಟಿರುವ ಚಿತ್ರಗಳು ಸುಂದರವಾಗಿವೆ.
ಅರ್ಚನಾ ಅವರೇ...
ನೀವು ಬಿಡಿಸಿದ ಚಿತ್ತಾರಗಳು ಸುಂದರವಾಗಿವೆ... ತರಗತಿಗೆ ಎಲ್ಲಿ ಹೋದಿರಿ...? ಈ ಕಡೆ ಜಯನಗರದಲ್ಲಿ ಎಲ್ಲಾದರೂ ಇದೆಯಾ...?
ಶ್ಯಾಮಲ
super art.
ವರ್ಲಿ ಚಿತ್ರಕಲೆ ಸು೦ದರವಾಗಿರುತ್ತದೆ.
ನಮ್ಮೂರಲ್ಲಿ ಹಸೆ ಗೋಡೆ ಬರೆಯುತ್ತಾರೆ. ಅದು ಕೂಡಾ ನೋಡಲು ಸು೦ದರ.
ವ೦ದನೆಗಳು.
whov.. its wonderful. Next time i come to Blore, i will make sure to see these art in those walls near to Lalbag. Thanks again,
ತುಂಬಾ ಚೆನ್ನಾಗಿದೆ ನಿಮ್ಮ ಲೇಖನ ಓದಿದ ನಂತರ ನಮ್ಮಂತಹ ಸಾಮಾನ್ಯರ ಮನಸ್ಸಿನಲ್ಲಿ ಮೂಡುವ ಚಿತ್ರವೇ ಬೇರೆ..
ನಮ್ಮ ಕರ್ನಾಟಕದ ಹಸೆ ಚಿತ್ತಾರ ನಿಮಗೆ ಗೊತ್ತಿಲ್ಲವೇ..
ನಮ್ಮೂರ ಲ್ಲಿ ಪುರಾತನ ಕಾಲದಿಂದಲೂ ಈ ಕಲೆ ಇದೆ..
Post a Comment