ದಿನ ಬೆಳಗಾದರೆ ಸಾಕು,ಯಾವುದೇ ಚ್ಯಾನಲನ್ನು ಒತ್ತಿದರೂ ಸಾಮಾನ್ಯವಾಗಿ ಕಾಣಿಸುವ ಕಾರ್ಯಕ್ರಮ ’ರಿಯಾಲಿಟಿ ಶೋ’.ಸಂಗೀತ ಕ್ಷೇತ್ರಕ್ಕೆ ಇದು ಪ್ರೋತ್ಸಾಹವನ್ನು ನೀಡುತ್ತಿರುವಂತೆ ಮೇಲ್ನೊಟಕ್ಕೆ ಅನಿಸಿದರೂ, ಕೆಳಕಂಡ ಅಂಶಗಳು ಅದಕ್ಕೆ ವಿರುದ್ಧವಾದ ವಾದವನ್ನು ಪುಷ್ಟೀಕರಿಸುತ್ತವೆ.
೧.ಸಂಗೀತ ಸ್ಪರ್ಧೆಯನ್ನು ಒಂದು ರೀತಿಯ ಯುದ್ಧದಂತೆ ಬಿಂಬಿಸಲಾಗುತ್ತದೆ.ವೇದಿಕೆಯು ಸಮರಾಂಗಣ.ಅದಕ್ಕೆ ತಕ್ಕುದಾದ ಹಿನ್ನೆಲೆ ಸಂಗೀತ ಹಾಗೂ ಬೆಳಕಿನ ಅಬ್ಬರ.ಭಯಭೀತರಾಗಿರುವ ಸ್ಪರ್ಧಿಗಳು!!
೨.ಹಾಡಿಗಿಂತಲೂ ಹಾಡುಗಾರರ ವಸ್ತ್ರಾಲಂಕಾರ,ಮನೆಯ ಆರ್ಥಿಕ ಪರಿಸ್ಥಿತಿ,ಅವರ ಹೆತ್ತವರ/ಸಂಬಧಿಕರ ಆತಂಕ,ಹಾರೈಕೆ,ಸ್ಪರ್ಧಿಗಳ ಮಾನಸಿಕ ತುಮುಲಗಳ ಬಗ್ಗೆ ಕಾಮೆರ ಹಾಯಿಸಲಾಗುತ್ತದೆ.ಕ್ಯಾಮರಾದ ಕಣ್ಣ ಮುಂದೆಯೇ ತೀರ್ಪುಗಾರರ ವಾಗ್ವಿವಾದವೂ ನಡೆಯುತ್ತದೆ.ಕೆಲವೊಮ್ಮೆ ಸ್ಪರ್ಧಿಯ ಧಾರ್ಮಿಕ ನಂಬಿಕೆಗಳ ಚಿತ್ರೀಕರಣವನ್ನೂ ಪ್ರೇಕ್ಷಕರಿಗೆ ತೋರಿಸಲಾಗುತ್ತದೆ.ಇವೆಲ್ಲವೂ ಚ್ಯಾನಲ್ ನ ಟಿ.ಆರ್.ಪಿ.ಹೆಚ್ಚಿಸುವ ತಂತ್ರಗಳೆಂದು ಬೇರೆ ಹೇಳಬೇಕಾಗಿಲ್ಲ.
೩.ಸ್ಪರ್ಧೆಯಲ್ಲಿ ಖ್ಯಾತ ಹಾಡುಗಾರರು ತೀರ್ಪುಗಾರರಾಗಿ ಬಂದರೂ, ಫಲಿತಾಂಶ ತೀರ್ಮಾನವಾಗುವುದು ಎಸ್.ಎಮ್.ಎಸ್.ಮೂಲಕ.ಹೀಗಾಗಿ ಕೆಲವೊಮ್ಮೆ ಅತ್ಯುತ್ತಮ ಹಾಡುಗಾರರೂ ಮುಂದಿನ ಹಂತಗಳಿಗೆ ಹೋಗುವ ಅವಕಾಶದಿಂದ ವಂಚಿತರಾಗುತ್ತಾರೆ.
೪.ಹೊಸ ಚಲನಚಿತ್ರ ತೆರೆ ಕಾಣುವುದಿದ್ದಲ್ಲಿ,ಅದರ ನಟ/ನಟಿ/ನಿರ್ದೇಶಕರು ಅತಿಥಿಯಾಗಿ ಕಾರ್ಯಕ್ರಮಕ್ಕೆ ಬರುತ್ತಾರೆ.ಹೊಸ ಚಿತ್ರಗಳು ಹಿಟ್ ಆಗುವಲ್ಲಿ ಇಂತಹ ಜಾಹೀರಾತು ತಂತ್ರಗಳು ಚಿತ್ರತಂಡಕ್ಕೆ ಅಗತ್ಯವೆನಿಸಿವೆ.
೫.ಸತತ ಸಾಧನೆ,ಸ್ವರ,ಲಯ,ತಾಳಗಳ ನಿರಂತರ ಅಭ್ಯಾಸದಿಂದ ಕರಗತವಾಗುವ ವಿದ್ಯೆ -ಸಂಗೀತ.ಇಂತಹ ರಿಯಾಲಿಟಿ ಶೊಗಳು ಜನರಲ್ಲಿ ಹಾಡಬೇಕೆಂಬ ಆಸೆ ಹುಟ್ಟಿಸುವುದು ನಿಜ.ಟಿ.ವಿ.ಯಲ್ಲಿ ತಮ್ಮ ಮಗ/ಮಗಳು ಹಾಡುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಡಿ.ವಿ.ಜಿ.ಯವರು ಹೇಳಿದಂತೆ ’ಮನ್ನಣೆಯ ದಾಹವೀ ಎಲ್ಲಕ್ಕಿಂತ ತೀಕ್ಷ್ಣತಮ!! ’. ಆದರೂ ಇಂತಹ ಸ್ಪರ್ಧೆಗಳು ಜನರಲ್ಲಿ ಕ್ಷಿಪ್ರ ಕಲಿಕೆಯ ಭ್ರಾಂತಿಯನ್ನು ಹುಟ್ಟಿಸುತ್ತವೆ.ನನ್ನ ಸಂಗೀತ ಟೀಚರು ಮೊನ್ನೆ ಹೀಗೇ ಮಾತಾಡುವಾಗ ಅಂದರು "ನನ್ನಲ್ಲಿ ಸಂಗೀತ ಕಲಿಯಲು ಬರುವ ಕೆಲವರದ್ದು ಈ ಪರಿಯ ಪ್ರಶ್ನೆ "ಎಷ್ಟು ದಿನದಲ್ಲಿ ನನ್ನ ಮಗ/ಮಗಳು ಸಂಗೀತ ಕಲಿತು ಟಿ.ವಿ.ಯಲ್ಲಿ ಹಾಡಬಹುದು?" ಟೀಚರಂದರಂತೆ "ಸಂಗೀತವೇನೂ ಕ್ರೇಶ್ ಕೋರ್ಸ್ ಅಲ್ಲ..ಇಂತಿಷ್ಟು ದಿನದಲ್ಲಿ ಕಲಿಯಲು."
ಕೆಲವೆಡೆ ಇಂತಹ ಸ್ಪರ್ಧೆಗಳಿಗಾಗಿಯೇ ತರಬೇತಿ ನೀಡಲಾಗುತ್ತದೆ.ಸಂಗೀತದ ಕಲಿಕೆಗಿಂತಲೂ ಕೆಲವು ಹಾಡುಗಳನ್ನು ಹಾಡಲು ಅಭ್ಯಾಸ ಮಾಡಿಸಲಾಗುತ್ತದೆ. ಆದರೆ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಮಿಂಚಿದವರು ಗಮನಾಹ್ರವಾಗಿ ಮುಂದೆ ಬರುತ್ತಿರುವ ಲಕ್ಷಣಗಳು ಕಾಣಿಸುತ್ತಿಲ್ಲ.
ಹೀಗೆಂದು ಬರುವ ಎಲ್ಲರೂ ಇದೇ ರೀತಿ ಎಂದು ನಾನು ಹೇಳುವುದಿಲ್ಲ.ಬಲು ಸೊಗಸಾಗಿ ಹಾಡುವವರೂ ಇದ್ದಾರೆ. ಆದರೆ ರಿಯಾಲಿಟಿ ಶೊದ ಆಯ್ಕೆ ಪ್ರಕ್ರಿಯೆಯು ಎಸ್.ಎಮ್.ಎಸ್.ಮತ್ತು ಪ್ರಚಾರತಂತ್ರಗಳ ಮೇಲೆ ಅವಲಂಬಿತವಾಗಿರುವುದು ವಿಶಾದನೀಯ!!
14 comments:
r=rಅರ್ಚನ ಮೇಡಮ,
ರಿಯಾಲಿಟಿ ಷೋ ಬಗ್ಗೆ ನಿಮ್ಮ ಅಭಿಪ್ರಾಯ ಸರಿಯಿದೆ...ಮುಖ್ಯವಿಚಾರಕ್ಕಿಂತ ಕಲಿಯುವವರಿಗೆ ಬೇಗ ಪ್ರಸಿದ್ದಿಗೆ ಬರುವ ಆಸೆ...ಮತ್ತು ಛಾನಲ್ಲಿನವರಿಗೆ ತಮ್ಮ ಟಿ.ಅರ್.ಪಿ ಹೆಚ್ಚಿಸಿಕೊಳ್ಳುವ ತಂತ್ರ....ಇದರಿಂದಾಗಿ ನಿಜಕ್ಕೂ ಒಂದು ವಿದ್ಯೆ ಕಲಿಯುವಾಗಿನ ಭಕ್ತಿ, ಶ್ರದ್ದೆ, ನಿರಂತರ..ಅಭ್ಯಾಸ....ಎಲ್ಲಾ ಮಾಯಾವಾದಂತೆ ಅನಿಸುತ್ತದೆ....
ಯಾವುದೇ ಕಲಿಕೆಯಾಗಲಿ, ಅದರ ಅಂತಿಮ ಉದ್ದೇಶ ಹಣ ಗಳಿಸುವುದು, ಬಹು ಬೇಗ ಪ್ರಸಿದ್ದಿಯಾಗುವುದು ಆಗಿರಬಾರದು. ’ವಿದ್ಯೆಯಿಂದ ವಿನಯತೆ ಬರಬೇಕೇ ಹೊರತು, ಹಣ, ಅಥವ ಪ್ರಸಿದ್ದಿಯಲ್ಲ’.
ಅರ್ಚನಾಜೀ ನಿಮ್ಮ ಲೇಖನ ಚೆನ್ನಾಗಿದೆ,
ನಿಜ ನೀವ್ ಹೇಳೋದು...ಇವತ್ತಿ ನ ಇಂಥ ಕಾರ್ಯಕ್ರಮಗಳು..ಜನರ ಭಾವನೆಗಳನ್ನ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿವೆ.
ಇವನ್ನೇ ಸ್ವಲ್ಪ ಪ್ರಾಮಾಣಿಕವಾಗಿ ಮಾಡಿದ್ರೆ, ಅತಿರೇಕಗಳನ್ನ ಕಡಿಮೆ ಮಾಡಿಕೊಂಡರೆ ನಿಜಕ್ಕೂ ಚೆನ್ನಾಗಿರುತ್ತವೆ.
ಸುನಿಲ್.
ಲೇಖನ ತುಂಬ ಚೆನ್ನಾಗಿದೆ...
ರಿಯಾಲಿಟಿ ಶೋ ಅನ್ನೋದು ಒಂಥರಾ ಸಾಫ್ಟ್ವೇರ್ ಫೀಲ್ಡ್ ಇದ್ದಂಗೆ... ದುಡ್ಡು ಮಾಡೋದಕ್ಕಾಗಿ, ಬದುಕೊದಕ್ಕಾಗಿ ಮಾಡೋ ಒಂದು ಕಾಯಕ ವಾಗಿಬಿಟ್ಟಿದೆ... ಕಲಿಕೆಯ ಉದ್ದೇಶ ದುಡ್ಡು ಮಾಡೋದು ಆಗಿರಬಾರದು ಅನ್ನೋದೇನೋ ಸರಿ... ಆದರೆ ನಾವು ಮಾಡಿದ್ದಾದರೂ ಏನು... ಸಂಗೀತ ಒಲಿಯಲಿಲ್ಲ , ಅದಕ್ಕಾಗಿ ಕಂಪ್ಯೂಟರ್ ಕಲಿತೆವು... ಉದ್ದೇಶ ದುಡ್ಡು ಮಾಡೋದೇ... ಆದರೆ ಸಂಗೀತದ ಇಂಥ ಶೋ ಗಳಿಂದ ದುಡ್ಡು ಮತ್ತು ಪ್ರಸಿದ್ಧಿ ಎರಡೂ ಸಿಗೋದಾದರೆ ಯಾರಿಗೆ ಬೇಡ... ಅಂತೂ ಮಾನವೀಯತೆ , ಪಾಪ ಪುಣ್ಯ ಗಳಿಗೆ ಬೆಲೆಇಲ್ಲದೆ ದುಡ್ಡೇ ದೊಡ್ಡಪ್ಪ ಅಂತ ತಿಳ್ಕೊಳೋ ಈ ಪ್ರಪಂಚದಲ್ಲಿ , ಕಂಪ್ಯೂಟರ್, ಬಿಸಿನೆಸ್ ಯಾವುದೂ ಒಲಿಯದೆ ಎರಡು ಹಾಡು ಮಾತ್ರ ಒಲಿಸಿಕೊಂಡವರು ಇದಕ್ಕಿಂತ ಬೇರೇನು ಮಾಡಲು ಸಾಧ್ಯ ಅಲ್ಲವೇ?
ನಮಸ್ಕಾರ ಅರ್ಚನಾ. ನಿನ್ನ ಲೇಖನ ಚೆನ್ನಾಗಿದೆ. ಆದರೆ ಮರಳುಗಾಡಿನ ಮಧ್ಯೆ ಕಾಣುವ ಒಂದು ಓಯೆಸಿಸ್ ನಂತೆ ಚೆನ್ನಾಗಿ ಮೂಡಿಬರುತ್ತಿರುವ ರಿಯಾಲಿಟಿ ಶೋಗಳೂ ಪ್ರಸಾರವಾಗುತ್ತಿವೆ! ಸಂಗೀತಕ್ಕೆ ಭಾಷೆಯ ಬಂಧನವಿಲ್ಲ ಎಂದು ನಂಬಿರುವ ನನಗೆ ಬೇರೆ ಭಾಷೆಯ ಮ್ಯೂಸಿಕ್ ರಿಯಾಲಿಟಿ ಶೋಗಳನ್ನು ನೋಡುವ ಹವ್ಯಾಸ ಇದೆ! ಅವುಗಳಲ್ಲಿ ಅತ್ಯಂತ ಪ್ರಿಯವಾದ ಶೋ ಎಮ್ದರೆ ಝೀ ಮರಾಠಿಯಲ್ಲಿ ಪ್ರಸಾರವಾಗುವ "ಐಡಿಯಾ ಸ ರೆ ಗ ಮ ಪ"!!! ಆದರಲ್ಲೂ ಇತ್ತೀಚೆಗೆ ಸಂಪನ್ನವದ "ಲಿಟ್ಲ್ ಚಾಂಪ್ಸ್" ಅಂತೂ ಅದ್ಭುತವಾಗಿತ್ತು! ಆ ಕಾರ್ಯ್ಕ್ರಮದ ಆಯೋಜಕರು ಮಕ್ಕಳ ಪ್ರತಿಭೆಯನ್ನು ಗಣನೆಗೆ ತೆಗೆದುಕೊಂಡು ಅವರಿಗೆ ಅನ್ಯಾಯವಾಗಬಾರದೆಂದು ಅವರ ಎಸ್-ಎಮ್-ಎಸ್ ನ ಪ್ರಮಾಣ ೫೦% ಗೆ ಇಳಿಸಿ ತೀರ್ಪುಗಾರ-ಪರೀಕ್ಷಕರಿಗೆ ಮಿಕ್ಕ ೫೦% ಅಂಕ ಕೊಡುವ ಬದಲಾವಣೆ ಮಾಡಿ ಇತಿಹಾಸ ಸೃಷ್ಟಿಸಿತು!!!
ನಂತರ ಮಲಯಾಳಮ್ ಚಾನೆಲ್ಲಾದ "ಏಶಿಯನೆಟ್", ಮತ್ತು ಅಮೃತಾದಲ್ಲಿ ಪ್ರಸಾರವಾಗುತ್ತಿರುವ ಸ್ಟಾರ್ ಸೂಪರ್ ಸಿಂಗರ್ ಮತ್ತು "ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕಾಗಿಯೆ ಮೀಸಲಾದ ಒಂದು ಕಾರ್ಯಕ್ರಮ ಪ್ರಸಾರವಾಗುತ್ತಿದೆ ಎಂದು ತಿಳಿಸಲು ಸಂತೋಷವಾಗುತ್ತದೆ! ಕನ್ನಡಿಗರಿಗೆ ಇಂತಹಾ ಅವಕಾಶ ಎಂದು ಸಿಗುವುದೋ ಆ ದೇವನೇ ಬಲ್ಲ!!!
ಅರ್ಚು,
Reality show ಬಗೆಗಿನ ವಿಶ್ಲೇಷಣೆ ವಾಸ್ತವತೆಯಿಂದ ಕೂಡಿದೆ.ಅಭಿನಂದನೆಗಳು.
By the way,ಹೊಸ ವರ್ಷದ ಶುಭಾಶಯಗಳನ್ನು ಈಗ ಹೇಳಲೆ?
ಈ ರಿಯಾಲಿಟಿ ಶೋ ನೋಡಿದಾಗೆಲ್ಲ ಮೈ ಪರಿಚಿಕೊಳ್ಲೋ ತರ ಆಗುತ್ತೆ .
samarpaka haguu samayochita lekhana
Goodness Archana, i did not know there were reality shows for music competition and that too like this. Its really saddening. I have long away from India television media. I feel people will have ambition to become singer and so, but making it like this is really a very sad thing.
ಅರ್ಚನಾ,
ರಿಯಾಲಿಟಿ ಷೋ ಗಳ ಹಿ೦ದಿನ ರಿಯಾಲಿಟಿಗಳನ್ನು ಬಿಡಿಸಿಟ್ಟಿದ್ದೀರಿ.ಒ೦ದ೦ತೂ ನಿಜ,ಎಲ್ಲವು TRP ಗಾಗಿ. ಲೇಖನ ಚೆನ್ನಾಗಿದೆ. ನನ್ನ ಬ್ಲಾಗಿಗೆ ನೀವು ಬ೦ದಿಲ್ವಲ್ಲ. ಒಮ್ಮೆ ಭೇಟಿ ಕೊಟ್ಟು ಅಭಿಪ್ರಾಯಿಸಿ.
www.nirpars.blogspot.com
ಕೆಲವೊಂದು ಶೋಗಳಲ್ಲಂತೂ ಬೇಕಂತಲೇ ಅಳಿಸುವ ಯತ್ನ ಮಾಡಲಾಗುತ್ತದೆ, ಟಿ.ಆರ್.ಪಿ. ಗಾಗಿ. ಅಂತಹ ಶೋಗಳನ್ನು ನೋಡದೇ ಇರುವುದೇ ಪರಿಹಾರ ಅನ್ನಿಸುತ್ತದೆ.
-ರಂಜಿತ್.
First of all watching reality show is an extreem waste of time...and writing..about the same...receving comments for the same..is not better than that...I hope You understand what I said...By the way I dont know why I am wasting time...
My mail Id is getmabu@gmail.com
I know you will mail me
Hi all
Thanks for the comments.
Mahabaleshwar
Blogs are meant for expressing views on topics that an individual thinks is worth spending time on. Opinions differ and that's a very good thing and I think that's the best part of democracy. Thanks for your comments.
you are right about reality show.. there should be a censor board for tv shows also.. Every channel should come through this Board. Otherwise in near future these studpid idot box channel may plan more harming content of reality shows.. Who knows? what next..
Hogli bidi. Nam janakke buddhi illa. Jana mentalgalu
Post a Comment