Pages

Friday, November 14, 2008

ಒಂದು ಸಂದೇಹ ...

ಎಷ್ಟೇ ಜನ ಓಡಾಡಿದರೂ
ಎಷ್ಟೇ ವಾಹನ ಗುದ್ದಾಡಿದರೂ
ಬೆಂಗಳೂರ ರಸ್ತೆ ಮೂಕ ||

ಹಾರ್ನುಗಳ ಕಿರಿಕಿರಿ
ಜನರ ಚರಿಪಿರಿ
ಬೆಂಗಳೂರ ರಸ್ತೆ ಕಿವುಡು ||

ಮರಗಳು ಉರುಳಿದರೂ
ಬುವಿ ಧಗೆಯೇರಿದರೂ
ಬೆಂಗಳೂರ ರಸ್ತೆ ಕುರುಡು ||


ಹೊಗೆಯುಗುಳುವ ವಾಹನ
ವಾಸನೆಯ ಒಳಚರಂಡಿ
ಮಾರ್ಗಕ್ಕೆ ಮೂಗಿದೆಯೇ ?


ರಸ್ತೆಯ ಡಾಮರು ಕಿತ್ತರೂ
ಕೆಸರು ಜತೆಗೂಡಿದರೂ
ರಸ್ತೆಗೆ ಸ್ಪರ್ಶ ಜ್ಞಾನವಿದೆಯೇ?

ಪ್ರತಿ ದಿನವೂ ಇದೇ ರಸ್ತೆಯಲ್ಲಿ ಸಾಗುವ
ಮುಂದೆಯೂ ಸಾಗಲಿರುವ
ಪ್ರತಿ ಸಲವೂ ಇದೇ ವಿಷಯ ಕೊರೆಯುವ
ನನಗೆ ತಲೆ ಇದೆಯೇ ?

13 comments:

Harisha - ಹರೀಶ said...

ಹಿ ಹ್ಹಿ ಹ್ಹಿ :-)

ಇದನ್ನು ಬರ್ದಿದೀರ ಅಂದ್ಮೇಲೆ ತಲೆ ಇರಲೇ ಬೇಕು. ಚೆನ್ನಾಗಿದೆ

Lakshmi Shashidhar Chaitanya said...

he he...oLLe doubt.

shivu.k said...

ಬೇರೇನು ವಿಷಯ ಸಿಗದೆ ಹೋಗಿ ಹೋಗಿ ರಸ್ತೆ ಮೇಲೆ ಬರೆದಿದ್ದೀರಿ ಅಂದ್ರೆ ನಿಮಗೆ ತಲೆ ಚೆನ್ನಾಗಿಯೇ ಇರಬೇಕು !

sunaath said...

ಸೂsssಪರ್ ಕವನ.
ರಸ್ತೆ ಕಟ್ಟಿದವರಿಗೆ ಪಂಚೇಂದ್ರಿಯಗಳೇ ಇಲ್ಲ.
ರಸ್ತೆಗೆ ಎಲ್ಲಿಂದ ಬರಬೇಕು?

ಅನಿಕೇತನ ಸುನಿಲ್ said...

Ha ha ha...tumba chennagide ri...:) Sunil.

Siddharth Gandhi said...

Thought of flicking some recipe but I don't understand a word!

Sid

Santhosh Rao said...

chendada kavana.. :)

Unknown said...

Hi. Nice...

Unknown said...

nIce...

ಪಯಣಿಗ said...

ಇಲ್ಲ!
ತಲೆ
ರಸ್ತೆಗೆ.
ನನಗೆ?
ಗೊತ್ತಿಲ್ಲ!

shivu.k said...

ಅರ್ಚನ,
ನನ್ನ ಬ್ಲಾಗಿಗೆ ಬಂದು ಕಾಮೆಂಟ್ ಮಾಡಿದ್ದೀರಿ ತುಂಬಾ ಥ್ಯಾಂಕ್ಸ್. ಹೀಗೆ ಬರುತ್ತಿರಿ....

Unknown said...

ಇಷ್ಟೊಂದು ಒಳ್ಳೆ ಕವನ ಬರ್ದಿದ್ದಿಯ ಅಂದ್ಮೇಲೆ ನಿಂಗೆ ಖಂಡಿತ ತಲೆ ಇದೆ... ಓದಿ ಅರ್ಥ ಮಾಡ್ಕೊಂಡಿದ್ದೀನಿ ಅಂದ್ರೆ ನಂಗೂ ತಲೆ ಇದೆ ಅನ್ಸುತ್ತೆ... ಆದ್ರೆ ನಮ್ಮನ್ನಳೋ ರಾಜಕಾರಣಿಗಳಿಗೆ??? ನನಗ್ಯಾಕೋ ಸ್ವಲ್ಪ ಅನುಮಾನ...
ಇರ್ಲಿ ಅವ್ರಿಗ್ ತಲೆ ಇಲ್ಲದ್ದಕ್ಕೆ ತಾನೆ ಇಂಥ ಕವನ ಬರಿಯೋಕೆ ನಿಂಗೆ ಚಾನ್ಸ್ ಸಿಕ್ಕಿದ್ದು... ಅವರಿಗೂ ಥ್ಯಾಂಕ್ಸ್ ... ನಿಂಗೂ ಥ್ಯಾಂಕ್ಸ್... :-)

Dkrbhat said...

ಹೆಬ್ಬಾರ್ರೆ,



ಎಷ್ಟೇ ಜನ ಓಡಾಡಿದರೂ
ಎಷ್ಟೇ ವಾಹನ ಗುದ್ದಾಡಿದರೂ
ಬೆಂಗಳೂರ ರಸ್ತೆ ಮೂಕ ||
ಬೆಂಗಳೂರ ಬಂದು ಮೂಕ || (Bandhu - I dont knowhow to type it)

ಹಾರ್ನುಗಳ ಕಿರಿಕಿರಿ
ಜನರ ಚರಿಪಿರಿ
ಬೆಂಗಳೂರ ರಸ್ತೆ ಕಿವುಡು ||
ಬೆಂಗಳೂರ ಜನ ಕಿವುಡು ||

ಮರಗಳು ಉರುಳಿದರೂ
ಬುವಿ ಧಗೆಯೇರಿದರೂ
ಬೆಂಗಳೂರ ಜನ ಕುರುಡು ||

ರಸ್ತೆಯ ಡಾಮರು ಕಿತ್ತರೂ
ಕೆಸರು ಜತೆಗೂಡಿದರೂ
ರಸ್ತೆಗೆ ಸ್ಪರ್ಶ ಜ್ಞಾನವಿದೆಯೇ?
ಹೊಂಡ ಸಿಟಿಯಂತೂ ಕಮ್ಮಿಯಿಲ್ಲ ||

ಹೊಂಡಗಳ ನಗರಕ್ಕೆ
ಹೊಂಡ ಸಿಟಿಯಲ್ಲಿ ಬರುವ
ಮಾನವನ ಮನವ ಬಲ್ಲೆಯ ?