Pages

Monday, September 29, 2008

ಮೊಸರನ್ನ


ನಮಸ್ಕಾರ.
ನಾನೀಗ ಬರೆಯಹೊರತಿರುವುದು ಅತ್ಯಂತ ಸುಲಭವಾದ ಅಡುಗೆ ವಿಧಾನ.
ಮೊಸರನ್ನ.ಸರಳವಾದ ಮತ್ತು ರುಚಿಕರವಾದ ಖಾದ್ಯ.ನಾನು ಮೊಸರನ್ನ ಮಾಡುವುದು ಮೂರು ಸಂದರ್ಭಗಳಲ್ಲಿ :೧. ನನಗೊಬ್ಬಳಿಗೆ ಮಾತ್ರ ಅಡಿಗೆ ಮಾಡಿಕೊಳ್ಳಬೇಕಾಗಿ ಬಂದಾಗ ೨)ಅಡಿಗೆ ಮಾಡಲು ಉದಾಸೀನ ಆದಾಗ ೩)ಹೊಸ ಶೈಲಿಯ ಅಡುಗೆ ಪ್ರಯೋಗ ಮಾಡಿದಾಗ.(ಅದು ಸರಿಯಾಗದಿದ್ದರೆ ಕಡೇ ಪಕ್ಷ ಮೊಸರನ್ನವಾದರೂ ಇರಲಿ ಅಂತ ) :)

ಸರಿ,ಮೊಸರನ್ನ ಮಾಡುವ ಪರಿ ಹೀಗಿದೆ.

ಬೇಕಾಗುವ ಸಾಮಗ್ರಿಗಳು :

ಅಕ್ಕಿ : ಎರಡು ಕಪ್
ನೀರು : ನಾಲ್ಕು ಕಪ್

ದಾಳಿಂಬೆ ಬೀಜ : ಅರ್ಧ ಹಿಡಿ
ಗೇರು ಬೀಜ :೧೦
ಎಣ್ಣೆ :ಎರಡು ಚಮಚ
ಮಜ್ಜಿಗೆ ಮೆಣಸು :೪
ಬೇವಿನ ಎಲೆ : ೧೦
ಸಾಸಿವೆ ,ಜೀರಿಗೆ,ಉದ್ದಿನ ಬೆಳೆ ತಲಾ ಒಂದು ಚಮಚ


೨ ಲೋಟ ಅಕ್ಕಿಯನ್ನು ತೊಳೆದು, ೪ ಲೋಟ ನೀರು ಹಾಕಿ, ಕುಕ್ಕರ್ ನಲ್ಲಿ ಇಟ್ಟು ಅನ್ನ ಮಾಡಿಕೊಳ್ಳಿ.( ಮೂರು ಸೀಟಿ ಬರುವ ತನಕ ಅಕ್ಕಿ ಬೇಯಬೇಕು.)


ಒಂದು ಸಣ್ಣ ಕಡಾಯಿಯಲ್ಲಿ, ಎಣ್ಣೆ,ಜೀರಿಗೆ,ಸಾಸಿವೆ,ಉದ್ದಿನ ಬೇಳೆ, ಸಾಸಿವೆ ಸಿಡಿಯುವ ತನಕ ಒಲೆಯ ಮೇಲೆ ಇಡಿ. ಬೇವಿನ ಎಲೆಯನ್ನು ಕೊನೆಗೆ ಹಾಕಿದರೆ ಒಳ್ಳೆಯದು. ಅದನ್ನು ಅನ್ನದ ಮೇಲೆ ಹಾಕಿ.ಈಗ ಮಜ್ಜಿಗೆ ಮೆಣಸನ್ನು ಕರಿದುಕೊಂಡು, ಅನ್ನಕ್ಕೆ ಹಾಕಿ. ಗೇರು ಬೀಜವನ್ನು ಕರಿದು, ಅನ್ನಕ್ಕೆ ಹಾಕಿ. ಗೇರು ಮತ್ತು ಮಜ್ಜಿಗೆ ಮೆಣಸನ್ನು ಪ್ರತ್ಯೇಕವಾಗಿ ಕರಿಯುವುದು ಒಳ್ಳೆಯದು. ಈಗ ಮೊಸರು , ದಾಳಿಂಬೆ ಬೀಜಗಳನ್ನು ಅನ್ನಕ್ಕೆ ಸೇರಿಸಿ.ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

ಈಗ ನೊಡಿ, ಮೊಸರನ್ನ ತಯಾರು.ತಡ ಏಕೆ, ಕೂಡಲೇ ತಿನ್ನಿ. :)

12 comments:

ಮಂಜು ಶಂಕರ್ said...

ಒಳ್ಳೆ ಲೇಖನ, ಆದ್ರೆ ಒಂದು ಸಂಶಯ - ಬೇವಿನ ಎಲೆನೋ ಅಥವಾ ಕರಿಬೇವಿನ ಎಲೆನೋ? :) :)

ಮಂಜು

sunaath said...

ಮೊಸರನ್ನ ಅಂದ್ರೆ ಬರಿ ಮೊಸರು ಮತ್ತು ಅನ್ನ ಮಾತ್ರ ಎಂದು ನಾನು ತಿಳಿದಿದ್ದೆ!

shivu.k said...

ಮೊಸರನ್ನ ತುಂಬಾ ಚೆನ್ನಾಗಿದೆ. ನಾನು ಪ್ರಯೋಗ ಮಾಡಿದೆ. ನನ್ನ ಶ್ರಿಮತಿ ಇಲ್ಲದ ದಿನ. Thanks.

ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನನ್ನದು ಫೋಟೊಗ್ರಫಿ ಪ್ರಪಂಚ. ನೀವು ನನ್ನ ಬ್ಲಾಗಿನೊಳಗೆ ಕಾಲಿಟ್ಟರೇ ಅಲ್ಲಿ ನಿಮಗಿಷ್ಟವಾದ ಛಾಯಾಚಿತ್ರಗಳು ಅದರ ಕುರಿತಾದ ಲೇಖನಗಳು ಸಿಗಬಹುದು. ಬನ್ನಿ.

ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com/
ಹೊಸ ರೀತಿಯ ವಿಚಾರದ ಬರವಣಿಗೆಯ ನನ್ನ ಬ್ಲಾಗಿ ವಿಳಾಸ:
http://camerahindhe.blogspot.com/

jomon varghese said...

ಕಡೇ ಪಕ್ಷ ಮೊಸರನ್ನವಾದರೂ ಇರಲಿ ಅಂತ ) :) ನಾನೂ ನಿಮ್ಮ ರೆಸಿಫಿಯನ್ನು ಓದಿ ಕಲಿತುಕೊಂಡಿದ್ದೀನಿ. ಒಮ್ಮೆ ಪ್ರಯೋಗ ಮಾಡಿದ ನಂತರ ಬ್ಲಾಗಿನಲ್ಲಿ ಬರೆಯುವೆ.

ತೇಜಸ್ವಿನಿ ಹೆಗಡೆ said...

ತುಂಬಾ ಚೆನ್ನಾಗಿದೆ ನಿಮ್ಮ ಬರಹ. ಅಡುಗೆಯ ಪರಿಮಳವೇ ಹೆಚ್ಚು ತುಂಬಿಕೊಂಡಿದೆ :)

ಮೊಸರನ್ನ ಗೊತ್ತಿತ್ತು. ಆದರೆ ಮಜ್ಜಿಗೆ ಮೆಣಸು ಹಾಕುವುದು ತಿಳಿದಿರಲಿಲ್ಲ. ಮಾಡಿ ನೋಡುವೆ. ಆಕರ್ಷಕ ಚಿತ್ರದ ಜೊತೆಗೆ ನಿರೂಪಣೆಯೂ ಸೇರಿ ಬಾಯಲ್ಲಿ ನೀರೂರಿಸುತ್ತಿದೆ..

ಸುಪ್ತದೀಪ್ತಿ suptadeepti said...

ಮೊಸರೇ ಇಲ್ಲದ ಮೊಸರನ್ನ!!??
ಇದನ್ನು ನಾನು ಕೇಳಿದ್ದು/ ಓದಿದ್ದು ಇದೇ ಮೊದಲು...
ಚೆನ್ನಾಗಿರತ್ತಾ?

ಸುಪ್ತದೀಪ್ತಿ suptadeepti said...

ಮೊಸರನ್ನಕ್ಕೆ ಮೊಸರು ಇನ್ನೂ ಬಿದ್ದೇ ಇಲ್ಲ!!

Unknown said...

chennagide, mosare haakilla? mosaranna hegayitu?!

Mahableshwar Hegde said...

Oh..no...I hope there is nothing much new in atricle...all most all peaples know how to do Curd rice..better than the way u expained...please dont write all these stupid blogs....as u already visited UK...we expect good one..This is all the examples for technological misleading...the motive behing the invention of Blog..is not these..mosaranna and..and gojju..Please Grow up...

Mial me...getmabu@gmail.com

Archu said...

Hi all
Thanks for your comments.

Mahabaleshwar
Appreciate your feedback. But I think that I would still put in what I like in here. I do this because "I" feel happy about it. At the end of the day, "I" care about my own happiness and nothing else. Some individuals get happy by writing derogatory comments like you have written and I am happy that I gave them the opportunity to do so!! I would again say that in this democratic country "everybody has a supreme right to express whatever he feels and you have every divine right to oppose it or endorse it" But in doing so, you will have to restrain yourself to some limits and not get into anything personal like you have done. You should have just written that "this is a very simple dish and does not need an article". I wish you would have stopped at just that....You need not tell me to "GROW UP"..i would just say MIND YOUR OWN BUSINESS.

Bye.

Unknown said...

Archana avare,
Kadai annokintha BaaNale antha upayogisi. Summane bere bhaasha padagaLa baLake beda antha aSHTe.

Archu said...

you can search in this online dictionary : it says kadaayi is a kannada word..


http://www.kannadakasturi.com