Pages

Sunday, August 3, 2008

ಕಣಿಲೆ ಪಲ್ಯ




ಮಲೆನಾಡಿನಲ್ಲಿ ಮಳೆಗಾಲದ ಸಮಯ ಚಿಗುರುವ ಎಳೆ ಬಿದಿರು ವಿಧ ವಿಧದ ಖಾದ್ಯಗಳಾಗಿ ಪರಿವರ್ತನೆಯಾಗುತ್ತದೆ.
ಕಣಿಲೆಯ ಪಲ್ಯವನ್ನು ಮಾಡುವ ವಿಧಾನವನ್ನು ಇಲ್ಲಿ ವಿವರಿಸುತ್ತಿದ್ದೇನೆ.

ಹೆಚ್ಚಿದ ಕಣಿಲೆ :೩ ಕಪ್
ಎಣ್ಣೆ:ಸ್ವಲ್ಪ
ಸಾಸಿವೆ,ಜೀರಿಗೆ,ಅರಸಿನ,ಉದ್ದಿನ ಬೇಳೆ ತಲಾ ಒಂದು ಚಮಚ
ಕೆಂಪು ಮೆಣಸು : ೫
ಬೆಲ್ಲ : ಸ್ವಲ್ಪ (ಸಣ್ಣ ಅಡಿಕೆ ಗಾತ್ರದಷ್ಟು)
ಉಪ್ಪು :ರುಚಿಗೆ ತಕ್ಕಷ್ಟು

ವಿಧಾನ

ಕಣಿಲೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. (ಸುಮಾರು ೭-೮ ಸೀಟಿ ಬರುವ ತನಕ )
ಅಮೇಲೆ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ,ಜೀರಿಗೆ,ಮೆಣಸು,ಅರಸಿನ, ಉದ್ದು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಅದಕ್ಕೆ ಬೇಯಿಸಿದ ಕಣಿಲೆಯನ್ನು ಸೇರಿಸಿ. ಬೆಲ್ಲ,ಉಪ್ಪು ಹಾಕಿ, ಮಂದ ಉರಿಯಲ್ಲಿ ೧೦ ನಿಮಿಷ ಬೇಯಿಸಿ.

ಈಗ ಕಣಿಲೆಯ ಪಲ್ಯ ತಯಾರು.

ವಿ.ಸೂ. ಕಣಿಲೆಯನ್ನು ಕತ್ತರಿಸಿ ತಂದ ಕೂಡಲೇ ತಿನ್ನುವಂತಿಲ್ಲ. ಅದನ್ನು ಸಣ್ಣದಾಗಿ ಹೆಚ್ಚಿ, ನೀರಿನಲ್ಲಿ ಮೂರು-ನಾಲ್ಕು ದಿನ ನೆನೆ ಹಾಕಿದ ಬಳಿಕವಷ್ಟೇ ಬಳಕೆಗೆ ಯೋಗ್ಯವಾಗುತ್ತದೆ. ಕಣಿಲೆಯ ತೊಗಟೆಯನ್ನು ನಮ್ಮ ಕಡೆ ನೆಲದಲ್ಲಿ ಹೂತು ಹಾಕುತ್ತಾರೆ.ಕಾರ್‍ಅಣ ಜಾನುವಾರುಗಳು ತಿಂದು ಅವಕ್ಕೆ ಅಪಾಯವಾಗದಿರಲಿ ಎಂದು.

7 comments:

Sushrutha Dodderi said...

ಕಣಿಲೆ ಅಲ್ಲ ಅದು, 'ಕಳಿಲೆ'.

ಗುರು [Guru] said...

ಏನ್ರೀ ನೀವು...ಕಳಿಲೆನೋ...ಕಣಿಲೆನೋ...ಗೊತ್ತಿಲ್ಲ...ಆದರೆ ಅದರ ಬದಲಿಗೆ ಬೇರೆ ಏನಾದ್ರೂ ಹಾಕಿದ್ರೂ ಅದು ಒಂಥರಾ ಪಲ್ಯ ಆಗುತ್ತದೆ. ನನಗೇನೂ ವಿಶೇಷ ಕಾಣಿಸುತ್ತಿಲ್ಲ ಈ ಪಲ್ಯದಲ್ಲಿ.ಅಂದ ಹಾಗೆ ಇಷ್ಟು ದಿನ ಎಲ್ಲಿ ಹೋಗಿದ್ರಿ?

Archu said...

sush..
kaNile, kaLale, kaNile eno ondu...adra palya antoo super...
namma kade kaNile anta heLuttare adakke!!

guru,
ee palya uLida paLyagaLiginta bhinna hege?
1) kattarisida kaNale upayogakke baruvudu 3-4 dinagaLa nantara.

2) idakke huLi haakuvudilla..uppu,khaara (bekiddare bella ) ashte.

ishtu dina kaNile palya madodralli,tinnodralle busy aagidde :)

iti,
archana

Paru ... said...

Tumba chennagide palya..Lovely..

ಮನಸ್ವಿ said...

ನಾವು ಕಳಲೆ ಎಂದು ಕರೆಯುತ್ತೇವೆ, ಕಳಲೆ ಎಂದರೆ ಬಿದುರಿನ ಮೊಳಕೆ...ಲೇಖನ ಓದಿ ಬಾಯಲ್ಲಿ ನೀರೂರುತ್ತಿದೆ... ಕಳಲೆಯನ್ನು ಕಡಿಯುವುದು ಕಾನೂನು ಭಾಹಿರ! ಅದರ ಸಾಗಣೆಯನ್ನು ಕೂಡ ಸರಕಾರ ನಿಷೇದಿಸಿದೆ! ಆದರೆ ಒಂದು ಸಾರಿ ಕಳಲೆ ರುಚಿ ನೋಡಿದವರು ಯಾವ ಕಳಲೆಯನ್ನು ಬಿಡುವುದಿಲ್ಲ!! ಧನ್ಯವಾದಗಳು.. ಮಾಡುವ ವಿಧಾನ ಗೊತ್ತಿರಲಿಲ್ಲ.. ಅಮ್ಮ ಮಾಡಿಟ್ಟರೆ ತಿನ್ನೋಕೆ ಮಾತ್ರ ಗೊತ್ತಿತ್ತು.. !!!!!!!

Lakshmi said...

Nimma blog bahala chennagide Archanavre..Kannadadalli ella odi bahala santosha aythu..

shivu.k said...

ಬಾಯಲ್ಲಿ ನೀರೂರಿಸುತ್ತೀರಲ್ರೀ! ನನ್ನ ಹೆಂಡತಿಗೆ ಹೇಳಬೇಕು ಕಳಲೆ ಹುಡುಕಿ ತರಲು!
ನನ್ನ ಬ್ಲಾಗಿಗೆ ನಾಚಿಕೆಯಿಲ್ಲದ ಪಾರಿವಾಳ ಕುಟುಂಬ ಬಂದಿದೆ ನೋಡಿಬನ್ನಿ!
ಮತ್ತೊಂದು ಬ್ಲಾಗ್ "ಕ್ಯಾಮೆರಾ ಹಿಂದೆ" ನಲ್ಲಿ ಹೊಸ ಲೇಖನ ಬರೆದಿದ್ದೇನೆ ಓದಿ ಕಾಮೆಂಟಿಸಿ.
ಶಿವು.ಕೆ