Sunday, April 20, 2008
ತೊಂಡೆಕಾಯಿ ,ಗೋಡಂಬಿ ಪಲ್ಯ
ಬೇಕಾಗುವ ಸಾಮಗ್ರಿಗಳು:
ತೊಂಡೆಕಾಯಿ : ಅರ್ಧ ಕಿಲೋ
ತೆಂಗಿನಕಾಯಿ : ಅರ್ಧ
ಗೋಡಂಬಿ :ಎರಡು ಹಿಡಿ
ಬೆಲ್ಲ : ಒಂದು ಸಣ್ಣ ಚೂರು
ಉಪ್ಪು:ರುಚಿಗೆ
ಸಾಸಿವೆ : ಒಂದು ಚಮಚ
ಕೆಂಪು ಮೆಣಸು : ೪
ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ತಲಾ ಒಂದು ಚಮಚ
ವಿಧಾನ :
೧.ಒಂದು ಸಣ್ಣ ಕಡಾಯಿಯಲ್ಲಿ ಎಣ್ಣೆ,ಮೆಣಸು, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ಇವುಗಳನ್ನು ಹಾಕಿ ,ಒಲೆಯ ಮೇಲೆ ಇಡಿ.ಸಾಸಿವೆ ಚಟ ಪಟ ಅನ್ನುತಿದ್ದಂತೆ ಒಲೆ ಆರಿಸಿ.
೨.ತೆಂಗಿನಕಾಯಿ,ಮೆಣಸು,ಸಾಸಿವೆ ಇವನ್ನು ಒಟ್ಟಿಗೆ ತರಿ ತರಿಯಾಗಿ ರುಬ್ಬಿ.
೩.ತೊಂಡೆಕಾಯಿ ಹಾಗೂ ಗೋಡಂಬಿಯನ್ನು ಕುಕ್ಕರಿನಲ್ಲಿ ೩ ಸೀಟಿ ಬರುವ ತನಕ ಬೇಯಿಸಿ.
೩.ಈಗ ಒಲೆ ಉರಿಸಿ, ಈಗಾಗಲೇ ಮಾಡಿಟ್ಟ ಒಗ್ಗರಣೆ ಯ ಪಾತ್ರೆಗೆ ತೆಂಗಿನಕಾಯಿಯ ಮಿಶ್ರಣ ಹಾಗೂ ಬೇಯಿಸಿದ ತೊಂಡೆಕಾಯಿ,
ಗೋಡಂಬಿಯನ್ನು ಸೇರಿಸಿ.
೪.ಮಂದ ಉರಿಯಲ್ಲಿ ಸ್ವಲ್ಪ ಹೊತ್ತು ಹಾಗೆ ಬೇಯಿಸಿ.
೫.ಈಗ ಬೆಲ್ಲ ಹಾಗೂ ಉಪ್ಪು ಸೇರಿಸಿ.ಮತ್ತೂ ಎರಡು ನಿಮಿಷ ಬೇಯಿಸಿ.
ಘಮಘಮಿಸುವ ಪಲ್ಯ ತಯಾರು!!
ಇದು ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಖಾದ್ಯ.
Subscribe to:
Post Comments (Atom)
9 comments:
ಅರ್ಚನಾ, ತೊಂಡೆಕಾಯಿಯೂ ಇದೆ, ಗೋಡಂಬಿ ಕೂಡ ಇದೆ. ಇನ್ನೇಕೆ ತಡ ಅಲ್ವಾ? ನಿಮ್ಮೂರ ಅಡುಗೆ ನಮ್ಮನೆ ಕಿಚನಿನಲ್ಲಿ! ಇದನ್ನು ಗೇರುಬೀಜ ಹಾಕಿಯೂ ಮಾಡ್ತಾರಂತೆ, ಹೌದಾ?
ಅಡುಗೆ ಚಿತ್ರಗಳನ್ನು ಸಂಗ್ರಹಿಸಿರುವುದು ತುಂಬಾ ಚೆನ್ನಾಗಿದೆ. ನಾನೂ ಪ್ರಯತ್ನಿಸ್ತೀನಿ ಇನ್ನು ಮೇಲೆ :)
sritri,
ತೊಂಡೆಕಾಯಿಯೂ ಇದೆ, ಗೋಡಂಬಿ ಕೂಡ ಇದೆ. ಇನ್ನೇಕೆ ತಡ ಅಲ್ವಾ? ನಿಮ್ಮೂರ ಅಡುಗೆ ನಮ್ಮನೆ ಕಿಚನಿನಲ್ಲಿ!
---hegaitu palya ?
ಇದನ್ನು ಗೇರುಬೀಜ ಹಾಕಿಯೂ ಮಾಡ್ತಾರಂತೆ, ಹೌದಾ?
----idu tonde,gerubeeja palya :) gerubeejada badalige nenesi beyisida kadaleyannoo haakabahudu.. namma kadeya bhaasheyalli (tuLu )
heLuvudaadare kadle manoLi :)
ಅಡುಗೆ ಚಿತ್ರಗಳನ್ನು ಸಂಗ್ರಹಿಸಿರುವುದು ತುಂಬಾ ಚೆನ್ನಾಗಿದೆ. ನಾನೂ ಪ್ರಯತ್ನಿಸ್ತೀನಿ ಇನ್ನು ಮೇಲೆ :)
----khandita..sangrahisi ,nanna jate share maadi.. naanoo photogaLannu nodi anandisuttene.
thanks for your comments.
cheers,
archana
ಹ್ಹ ಹ್ಹ :) ಇದಕ್ಕೆ ಹಾಕಿರೋ ಪದಾರ್ಥಗಳನ್ನ ನೋಡೀಪ್ಪಾ! ಗೋಡಂಬಿ, ಮೇಲರ್ಧ ತೆಂಗಿನಕಾಯಿ ;) ಇನ್ನು, ಚೆನ್ನಾಗಿಲ್ಲದಿರೋಕ್ಕೆ ಹೇಗೆ ಸಾಧ್ಯ? (ಕೊಲೆಸ್ಟ್ರಾಲ್ ವಿಷಯ ಮರೆತು ಚೆನ್ನಾಗಿ ಅನ್ನಕ್ಕೆ ಸೇರಿಸಿ ಕಲೆಸಿ ಹೊಡೆಯೋಕ್ಕೆ ದಾರಿ ಮಾಡ್ಕೊಡ್ತಿದೆ ನೀವು ಹಾಕಿರೋ ಚಿತ್ರ :)
ಅರ್ಚನಾ,
ನಿಮ್ಮ ಅಡುಗೆ(ಅಡಗು) ತಾಣದಲ್ಲಿ ನಮ್ಮ ಉತ್ತರ ಕರ್ನಾಟಕ, ಮಧ್ಯಕರ್ನಾಟಕಕ್ಕೂ 'ಒಳ ಮೀಸಲಾತಿ' ನೀಡಿದ್ದರೆ ಚೆನ್ನಾಗಿರ್ತಿತ್ತು..!
:-)
ee palya andhra-kade hechu madthare alwe?
ಮಣೊಳಿ ಇದ್ದರೆ ಹೊಟ್ಟೆ ತುಂಬಾ ಉಣೊಳಿ...
ನೀವೇನೇ ರುಚಿರುಚಿಯಾದ ಅಡುಗೆ ಮಾಡಿ... ಆದ್ರೆ ಆ ಫೋಟೋ ಮಾತ್ರ ಹಾಕ್ಬೇಡಿ...
ಯಾಕಂದ್ರೆ ಹಸಿವು ಹೆಚ್ಚಾಗುತ್ತೆ, ಬಾಯಿ ನೀರೂರುತ್ತೆ.
I am Guruprasad here from Mangalore..settled in Bangalore. I saw ur blog....it is very much useful for my wife. Please keep on posting new items, which is cheap and best(?????)....And also visit my Blog... http://kannadaputhra.blogspot.com
hi archana..
ee palyana nam office canteenalli varakkomme madta eddru ega adara receipe nan siktu.. everytime yochistidde heg madtare anta...
nw even ill try this in my kitchen..
any ways thnk u..
@hamsanandi,
ellaaroo maduvudu hottegaagi..
alwa..iddashti dina bage bageya aduge maadi saviyabeku!!
alwa?
@ganesh,
khandita!!
jgd,
nange andhra da bagge hecchu gottilla..namma oora kade antoo maadtare!!
asatya anveshi,
haan..manoLi idre hotte tumbaa uNoLi :)
ಹಸಿವು ಹೆಚ್ಚಾಗುತ್ತೆ, ಬಾಯಿ ನೀರೂರುತ್ತೆ ---haage aagali!! ;)
@guru,radha,
tks for visiting my blog and enjoying it!! :)
happy reading and happy eating!!
Post a Comment