Sunday, April 13, 2008
ಉದರ ನಿಮಿತ್ತಂ ಬಹುಕೃತ ಪಾಕಂ
ಅದೊಂದು ಕಾಲವಿತ್ತು. ನನಗೆ ಅನ್ನ ಸಾರು ಮಾಡುವುದಿರಲಿ ನೀರು ಬಿಸಿ ಮಾಡಲು ಸಹ ಬರುತ್ತಿರಲಿಲ್ಲ! ವಿದ್ಯಾಭ್ಯಾಸದ ಹೆಚ್ಚಿನ ಸಮಯವನ್ನು ಹಾಸ್ಟೆಲ್ ವಾಸದಲ್ಲಿ ಕಳೆದುದರಿಂದಲೊ ಏನೊ, ಮನೆಗೆ ಹೋದಾಗಲೂ ಅಡುಗೆ ಮಾಡುವ ಅವಶ್ಯಕತೆ ಇಲ್ಲದಿದ್ದುದರಿಂದಲೊ ಏನೊ, ನನ್ನ ಗಮನ ಅಡುಗೆಮನೆಯತ್ತ (ಐ ಮೀನ್, ಅಡುಗೆ ಮಾಡಲಿಕ್ಕೆ) ಹರಿದದ್ದೇ ಇಲ್ಲ! ತಿನ್ನಲಿಕ್ಕಾದರೆ ರೆಡಿ ಇದ್ದೇನಲ್ಲ... ದೊಡ್ಡ ಬಟ್ಟಲಮ್ಮ ದೊಡ್ಡ ಬಟ್ಟಲು!
ನನ್ನ ಇಂಜನಿಯರಿಂಗ್ ಶಿಕ್ಷಣ ಮುಗಿದು, ಮದುವೆಯಾದ ಮೇಲೆ ಅಡುಗೆ ಕಲಿಯುವುದು ಅನಿವಾರ್ಯವಾಯಿತು. ಆಗ ಶುರುವಾಯಿತು ನೋಡಿ... "ಕೆಲವಂ ಬಲ್ಲವರಿಂದ ಕಲ್ತು... ಕೆಲವಂ ಶಾಸ್ತ್ರಗಳಮ್ ಓದುತಲಿ... ಕೆಲವಂ ದೂರದರ್ಶವಂ ನೋಡುತಲಿ..." ಅಡುಗೆಮನೆಯಲ್ಲಿ ನನ್ನ ನಿತ್ಯ ಪ್ರಯೋಗಗಳು!! ನನ್ನ ಬಡಪಾಯಿ ಗಂಡ (ತುಂಬ ಪ್ರೀತಿಸ್ತಾರೆ ಕಣ್ರೀ ನನ್ನನ್ನು!) ನನ್ನೀ ಪ್ರಯೋಗಗಳ ಗಿನ್ನಿ ಪಿಗ್ ಎಂದು ಬೇರೆ ಹೇಳಬೇಕಿಲ್ಲ ತಾನೆ?
ನನ್ನ ಪಾಕಪ್ರಾವೀಣ್ಯವನ್ನು ದಾಖಲೆಯಾಗಿರಿಸುವುದಕ್ಕಾಗಿ ನನ್ನ ಪಾಕಕಲಾ ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇನೆ. ಆ ಚಿತ್ರಗಳದೊಂದು "ಕೊಲಾಜ್" ಮಾಡಿದ್ದೇನೆ. ಅದಕ್ಕೆ "ಉದರ ನಿಮಿತ್ತಂ ಬಹುಕೃತ ಪಾಕಂ" ಎಂಬ ಟೈಟಲ್ ಕೊಟ್ಟು ನಿಮಗೀಗ ಆ ಚಿತ್ರಗಳನ್ನಿಲ್ಲಿ ತೋರಿಸುತ್ತಿದ್ದೇನೆ.
Subscribe to:
Post Comments (Atom)
6 comments:
ನನ್ನ ಗಮನ ಅಡುಗೆಮನೆಯತ್ತ (ಐ ಮೀನ್, ಅಡುಗೆ ಮಾಡಲಿಕ್ಕೆ) ಹರಿದದ್ದೇ ಇಲ್ಲ!
ಅಂತ ಹೇಳಿದ್ರಲ್ಲಾ.... ಅದೆಂತ ಮೀನ್ ಅಡುಗೆ? ನೆಕ್ಸ್ಟ್ ಐಟಂ ಅದುವೇ ಇರತ್ತೆ ಅಂತ ಜನ ನಿರೀಕ್ಷಿಸ್ತಾರೆ :)
ರೀ, ಊಟ ಹಾಕ್ರೀ ಅಂದ್ರೆ, ಸುಮ್ನೆ ತೋರಿಸ್ತೀರಲ್ಲ್ರೀ.. ಈಗ ಕಣ್ ತುಂಬಿತು, ಹೊಟ್ಟೆ ತುಂಬ್ಲಿಲ್ಲ..
ಕೆಲವಂ ಬಲ್ಲವರಿಂದ ಕಲ್ತು... ಕೆಲವಂ ಶಾಸ್ತ್ರಗಳಮ್ ಓದುತಲಿ... ಕೆಲವಂ ದೂರದರ್ಶವಂ ನೋಡುತಲಿ...
ಹೆಹ್ಹೆಹ್ಹೆ ನಂದು ಅದೇ ಕಥೆ ಆಗಿದೆ... ಎರಡು ವಾರ ಆಯ್ತು ಅಡಿಗೆ ಮಾಡ್ಲಿಕ್ಕೆ ಆರಂಭ ಮಾಡಿ..
ನಿನ್ನ ಹೆಂಡರಿಯಾಗಿ ಪಡೆದ ಆ ಮನಷ್ಯ ನಿಜವಾಗಲು ಏಳೇಳು ಜನ್ಮದ ಪುಣ್ಯಮಾಡಿರಬೇಕು. ಅರ್ಚನ ನಮಗೂ ಒಮ್ಮೊಮ್ಮೊ ಆಹ್ವಾನ ಕೊಟ್ಟರೆ ನಿಮ್ಮ ಜೊತೆಗೆ ನಾವು ಉದರ ಸಂತೃಪ್ತಿ ಮಾಡಿಕೊಳ್ಳ ಬಹುದು. ತುಂಬಾ ಚನ್ನಾಗಿದೆ ನಿಮ್ಮ ಛಾಯಾ ಚಿತ್ರಗಳು. ಬಾಯಲ್ಲಿ ನೀರೂರಿ ಬೆಸಿಗೆಯಲ್ಲೂ ಪ್ರವಾಹ ಉಕ್ಕಿ ಬಂದಿದೆ ಇಲ್ಲಿ.
ಧನ್ಯವಾದಗಳೊಂದಿಗೆ
ಕುಮಾರಸ್ವಾಮಿ
http://www.gubbacchi-goodu.blogspot.com/
http://baaladaari.blogspot.com/
@asatya anveshigaLe,
meen adge alla maharayre..shuddha sasyaahari kaNree naanu :)
karthik,
haakONa..adakkenante..adre nimge nimma arogyada bagge kaaLaji ide taane ;)
harish,
hege nadeetide adige?
adakke 'kelavam internet nodutali' anta serisikoLLi :)
kumara swami,
papaano punyano avare heLbeku!! ishtella prayogagaLannu sahiskota iddaralla :)
khanditaa banni..adre nimge nimma arogyada bagge kaaLaji ilwa ;)
comments baredaddakke thanks.
cheers,
archana
ನಿಮ್ಮೆಜಮಾನರು ಪುಣ್ಯಮಾಡಿದ್ದರು ಕಾಣಿಸುತ್ತದೆ, ಅದಕ್ಕಾಗಿ ನಿಮಗೆ ಮೀನು ಅಡುಗೆಯ ಮೇಲೆ ನಿಮಗೆ ಗಮನ ಹರಿಯಲಿಲ್ಲ............ ಕೇವಲ ತಮಾಷೆಗಾಗಿ ಹೇಳಿದ್ದು.. jokes apart
ಚನ್ನಾಗಿದೆ ಎಲ್ಲ ಬರಹಗಳು... ಚಿತ್ರಗಳು ಬಾಯಲ್ಲಿ ನೀರುರಿಸುತ್ತಿವೆ!
Post a Comment