Pages

Friday, March 21, 2008

ನಿನ್ನೆ ರಾತ್ರಿಯ ಊಟ....



ನಿನ್ನೆ ರಾತ್ರಿಯ ಊಟಕ್ಕೆ ಮಾಡಿದ ಅಡುಗೆ ಇದು..


ಸಾಂಬ್ರಾಣಿ ಎಲೆಯ ಸಾರು :

ಬೇಕಾಗುವ ಸಾಮಗ್ರಿಗಳು:

ಸಾಂಬ್ರಾಣಿ ಎಲೆ : ಎರಡು ಹಿಡಿ
ನೀರುಳ್ಳಿ :ಒಂದು
ತುಪ್ಪ :ಎರಡು ಚಮಚ

ಉದ್ದು,ಅರಿಸಿನ,ಸಾಸಿವೆ ,ಜೀರಿಗ,ಎಣ್ಣೆ, : ತಲಾ ಒಂದು ಚಮಚ
ಕೆಂಪು ಮೆಣಸು : 3

ಹುಣಸೆ ರಸ :4 ಚಮಚ
ಬೆಲ್ಲ :ಮಧ್ಯಮ ಗಾತ್ರದ ಚೂರು
ಉಪ್ಪು :ರುಚಿಗೆ ತಕ್ಕಷ್ಟು


ಮೊದಲಿಗೆ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳನ್ನು ತುಪ್ಪದಲ್ಲಿ ಹುರಿದುಕೊಳ್ಳಿ.
ನೀರಿಗೆ ಹುರಿದ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳನ್ನು ಸೇರಿಸಿ, ಕುದಿಯಲು ಬಿಡಿ.
ಇದಕ್ಕೆ ಹುಣಸೆ ರಸ ಹಾಗೂ ಬೆಲ್ಲವನ್ನು ಸೇರಿಸಿ.
ಕುಡಿಯುತ್ತ ಬಂದಂತೆ ಉಪ್ಪನ್ನು ಹಾಕಿ.
ಆಮೇಲೆ ಒಲೆಯಿಂದ ಇಳಿಸಿ.

ಈಗ ಒಂದು ಸಣ್ಣ ಕಡಾಯಿಯಲ್ಲಿ ಎಣ್ಣೆ,ಮೆಣಸು, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ಇವುಗಳನ್ನು ಹಾಕಿ ,ಒಲೆಯ ಮೇಲೆ ಇಡಿ.

ಸಾಸಿವೆ ಸಿದಿಯುತ್ತಿದ್ದಂತೆ ಒಲೆಯಿಂದ ಇಳಿಸಿ,ಕುದಿಸಿದ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳ ಮಿಶ್ರಣಕ್ಕೆ ಹಾಕಿ.

ಈ ಸಾರು ಬಹಳ ರುಚಿ.ಅನ್ನಕ್ಕೆ ಬಹಳ ಒಳ್ಳೆಯ ಜತೆ!! :)

ಈ ಅಡುಗೆ ವಿಧಾನ ತಿಳಿಸಿದ ಶಶಾಂಕನಿಗೆ ಥ್ಯಾಂಕ್ಸ್.

5 comments:

Sushrutha Dodderi said...

ನೀ ಬರೀ ಫೋಟೋಸ್ ಹಾಕಿ ಬಾಯಲ್ಲಿ ನೀರು ಬರಿಸು.. ಮನೆಗೆ ಊಟಕ್ಕೆ ಮಾತ್ರ ಕರೀಬೇಡ.. Gurrrr! :x

Archu said...

sushruta,
gurrannabedavo maharaya..
yaavaga manege barbeku ansatto avaga baa :)

---archana

Unknown said...

ಹಳೆಯ ಅಡುಗೆಯ ಪ್ರಯೋಗ ಮತ್ತು ಅದನ್ನು ಬ್ಲಾಗಿನಲ್ಲಿ ವಿನಿಮಯ ಮಾಡಿಕೊಂಡದ್ದು ವಿಶೇಷ.....ಅಲ್ಲವೇ?

Unknown said...

ಹಳೆಯ ಅಡುಗೆಯ ಪ್ರಯೋಗ ಮತ್ತು ಅದನ್ನು ಬ್ಲಾಗಿನಲ್ಲಿ ವಿನಿಮಯ ಮಾಡಿಕೊಂಡದ್ದು ವಿಶೇಷ.....ಅಲ್ಲವೇ?

Nanda Kishor B said...

ಸಾಂಬ್ರಾಣಿಗೆ ಇಂಗ್ಲೀಷಿನಲ್ಲಿ ಏನೆನ್ನುತ್ತಾರೆಂದು ಹುಡುಕುತ್ತಾ ಬಂದ ನನಗೆ,
ಒಳ್ಳೆಯ ಅಡಿಗೆ ಪುಸ್ತಕ ಸಿಕ್ಕಿದ ಹಾಗಾಯಿತು.
ನಾಳೆ ಮದ್ಯಾಹ್ನಕ್ಕೆ ಇದೇ ಇನ್ನು..

ಧನ್ಯವಾದ ಅರ್ಚನಾ ಅವರೇ,