Pages

Wednesday, May 23, 2007

ನಾಳೆಗಳ ನಿರೀಕ್ಷೆಯಲ್ಲಿ...


ಈ ಚಿತ್ರ ಕಿಶೋರ್ ಅವರು ಬರೆದದ್ದು.

ಅಕ್ಕ ತಮ್ಮನ ಜೋಡಿ ನಿಂತಿಹುದು
ಮೆಟ್ಟಿಲಿನ ಬಳಿಯಲ್ಲಿ
ಹುಸಿಮುನಿಸು -ತಮ್ಮನ ಜತೆಗೆ
ಮುಗುಳುನಗೆ -ಅಕ್ಕನ ಮೊಗದಲ್ಲಿ||

ನೋಡು ತಮ್ಮಾ ಏರಬೇಕಾದ ದಾರಿಯೆಡೆಗೆ
ಒಮ್ಮೆ ತಿರುಗಿ ನೋಡು..
ಮುಖತಿರುಗಿಸಿದರೆ ಹೇಗೆ ? ನಮ್ಮ ನಾಳೆಗಳು
ಇರುವುದಲ್ಲಿ! ಅತ್ತ ಓಡು..||

ಒಂದರ ನಂತರ ಇನ್ನೊಂದು
ಹತ್ತಬೇಕು ಮೆಟ್ಟಲು
ಸತತ ಪ್ರಯತ್ನ , ಛಲ ಬೇಕೇ
ಬೇಕು ಗುರಿ ಮುಟ್ಟಲು||

ನೋವೊ ನಲಿವೋ ಪಯಣಿಸುತಿರಬೇಕು
ಪಯಣಕೆ ಹೆದರಬೇಡ,ನೀ ಮುಂದೆ ಸಾಗು
ನ್ಯಾಯ ಮಾರ್ಗದಲಿಮುನ್ನಡೆದರೆ ಸಾಕು
ಧೈರ್ಯದಿಂದಲೆ ನೀ ಮುನ್ನಗ್ಗು||

ಬೇರೆಬೇರೆಯಾದರೂ ನಮ್ಮ ಪಯಣದ ಹಾದಿ
ಜತೆಗಿರುವೆ ನಾ , ನೆನಪಾದಾಗಲೆಲ್ಲ
ನಮ್ಮ ಒಡನಾಟ,ಪ್ರೀತಿ ಮರೆಯಾಗದು
ಮಮತೆ ಇಹುದು ಹೃದಯದದೊಳಗೆಲ್ಲ||

9 comments:

Kuldeep Dongre said...

kavana tumba chennagide.

Anonymous said...

chennagide, ellarigu spoorthi kodo hagide.

Devadatta Bhat said...

ಅಕ್ಕ ಯಾವಾಗಲೂ ತಮ್ಮನಿಗೆ ದಾರಿದೀಪ.
ತಮ್ಮನಿಗೆ ಸ್ಪೂರ್ತಿ ನೀಡುವ ಅಕ್ಕನ ಚಿತ್ರಣ ಕವನಗಳಲ್ಲಿ ಬಹಳ ಕಡಿಮೆ.
ಎಲ್ಲರೋ ಅಕ್ಕ ತಮ್ಮನ ಮೇಲೆ ಸೆಂಟಿಮೆಂಟಲ್ ಆಗಿ ಬರೆಯೋದೇ ಜಾಸ್ತಿ!
ನಿಮ್ಮದು ಒಂಥರಾ ಹೊಸ ಪ್ರಯತ್ನ.
ಚೆನ್ನಾಗಿದೆ!!

archana-hegde said...

cholo iddu....

Unknown said...

soooper iddu. keep it up

pavs said...

Bahala chennagide...
oduvaga dhanathmaka bhavane bantu.

ಉಮಾಶಂಕರ್ ಯು. said...
This comment has been removed by the author.
ಉಮಾಶಂಕರ್ ಯು. said...

ತಮ್ಮನನ್ನು ಹುರಿದುಂಬಿಸುವ ರೀತಿ ಚೆನ್ನಾಗಿದೆ ...

ನೋವೊ ನಲಿವೋ ಪಯಣಿಸುತಿರಬೇಕು
ಪಯಣಕೆ ಹೆದರಬೇಡ,ನೀ ಮುಂದೆ ಸಾಗು
ನ್ಯಾಯ ಮಾರ್ಗದಲಿ ಮುನ್ನಡೆದರೆ ಸಾಕು
ಧೈರ್ಯದಿಂದಲೆ ನೀ ಮುನ್ನಗ್ಗು||

ಮನುಷ್ಯನಿಗೆ ಹೇಡಿತನಕ್ಕಿಂತ ದೊಡ್ಡ ಅಂಗವೈಕಲ್ಯತೆ ಯಾವುದು ಕೂಡ ಇಲ್ಲ ....

Archu said...

kuldeep, srini,deva, archana hegade,rahul,pavana,umaashankar...

ellarigoo thanks kavana mecchikondaddakke ..

iti,
archana