Pages

Tuesday, April 26, 2011

ತಮಿಳು ಅಡಿಗೆ..

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’
ಸಖಿಯಲ್ಲಿ ಸ್ವಲ್ಪ ಸಮಯ ವಿವಿಧ ಪ್ರಾಂತ್ಯಗಳ ಅಡುಗೆ ವಿಧಾನವನ್ನು ಬರೆದಿದ್ದೆ. ಒಂದೊಂದಾಗಿ ಅವುಗಳನ್ನು ಬ್ಲಾಗ್ ನಲ್ಲಿ ಹಾಕುತ್ತೇನೆ..
ಈ ಸಲ ತಮಿಳು ಅಡುಗೆ ವಿಧಾನ ಇಲ್ಲಿದೆ..

-------------------------------------------
೧.ಅಡೈ
------------------------------------------
ಬೇಕಾಗುವ ಸಾಮಗ್ರಿಗಳು
ದೋಸೆ ಅಕ್ಕಿ : ಒಂದು ಲೋಟ
ಉದ್ದು : ಮುಕ್ಕಾಲು ಲೋಟ
ಕಡ್ಲೆ ಬೇಳೆ:ಮುಕ್ಕಾಲು ಲೋಟ
ತೊಗರಿ ಬೇಳೆ:ಮುಕ್ಕಾಲು ಲೋಟ
ಶುಂಠಿ: ಸಣ್ಣ ಚೂರು
ಕೆಂಪು ಮೆಣಸು :ನಾಲ್ಕು
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ :ಸ್ವಲ್ಪ

ವಿಧಾನ
೧.ಎಲ್ಲ ಬೇಳೆಗಳನ್ನು ನೀರಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ನೆನೆಸಿಡಿ. ಬಳಿಕ ಮೆಣಸು, ಶುಂಠಿ ಯ ಜತೆ ಚೆನ್ನಾಗಿ ರುಬ್ಬಿ ದೋಸೆ ಹಿಟ್ಟಿನ ಹದಕ್ಕೆ ಬರಬೇಕು.ಇದನ್ನು ೬- ೭ ಗಂಟೆಗಳ ಕಾಲ ಹಾಗೇ ಬಿಡಿ.
೨. ಬಳಿಕ ಈ ದೋಸೆ ಹಿಟ್ಟಿಗೆ ಉಪ್ಪು ಹಾಕಿ ಚೆನ್ನಾಗಿ ಕಲಕಿ.
೩. ದೋಸೆ ಕಾವಲಿಯನ್ನು ಬಿಸಿ ಮಾಡಿ, ದೋಸೆ ಹೊಯ್ಯಿರಿ. ಬೇಕಿದ್ದರೆ ಇದಕ್ಕೆ ತೆಂಗಿನ ತುರಿ,ಜೀರಿಗೆಯನ್ನು ಕೂಡ ಹಾಕಬಹುದು.


------------------------------------------
೨.ಪೊಂಗಲ್
------------------------------------------------


ಬೇಕಾಗುವ ಸಾಮಗ್ರಿಗಳು

ಅಕ್ಕಿ: ಒಂದು ಲೋಟ
ಹೆಸರು ಬೇಳೆ: ಕಾಲು ಲೋಟ
ಕಾಳು ಮೆಣಸು: ೧ ಚಮಚ
ಜ಼ೀರಿಗೆ: ಒಂದು ಚಮಚ
ಶುಂಠಿ ಚೂರು: ಎರಡು ಚಮಚ
ಇಂಗು: ಚಿಟಿಕೆ
ತುಪ್ಪ: ಎರಡು ಚಮಚ
ಗೋಡಂಬಿ: ೧೦-೧೫
ಬೇವಿನೆಲೆ: ೧೦ ಎಸಳು
ಉಪ್ಪು: ರುಚಿಗೆ ತಕ್ಕಷ್ಟು
ಹಸಿ ಮೆಣಸು: ೨
ನೀರು: ೬ ಲೋಟ


ವಿಧಾನ:
೧.ತುಪ್ಪ ಬಿಸಿ ಮಾಡಿ, ಜೀರಿಗೆ, ಕಾಳು ಮೆಣಸು, ಹಸಿ ಮೆಣಸು, ಇಂಗು, ಶುಂಠಿ, ಬೇವಿನೆಲೆ ಹಾಕಿ ಒಗ್ಗರಣೆ ತಯಾರಿಸಿ.
೨.ಇದಕ್ಕೆ ನೀರು ಹಾಕಿ, ತೊಳೆದ ಅಕ್ಕಿ ಮತ್ತು ಬೇಳೆ ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ.
೩.ಮೂರು ಸೀಟಿ ಆಗುತ್ತಿದ್ದಂತೆ ಒಲೆ ಆರಿಸಿ.
೪.ಅನ್ನ-ಬೇಳೆಯ ಮಿಶ್ರಣಕ್ಕೆ ಉಪ್ಪು ಮತ್ತು ತುಪ್ಪದಲ್ಲಿ ಹುರಿದ ಗೋಡಂಬಿ ಸೇರಿಸಿ ಕಲಸಿ.
೫.ಪೊಂಗಲ್ ತಯಾರು.

-----------------------------------------------------
3.ಬೀನ್ಸ್ ಪರಪ್ಪು ಉಸ್ಲಿ
-------------------------------------------------------

ಬೇಕಾಗುವ ಸಾಮಗ್ರಿಗಳು
ತೊಗರಿ ಬೇಳೆ :ಅರ್ಧ ಲೋಟ
ಕಡ್ಲೆ ಬೇಳೆ : ಒಂದು ಹಿಡಿ
ಕೆಂಪು ಮೆಣಸು :ಎರಡು
ಹಸಿ ಮೆಣಸು : ಒಂದು
ಇಂಗು :ಚಿಟಿಕೆ
ಅರಸಿನ :ಚಿಟಿಕೆ
ಎಣ್ಣೆ :ಸ್ವಲ್ಪ
ಬೀನ್ಸ್ : ಎರಡು ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆಗೆ
ಎಣ್ಣೆ :ಸ್ವಲ್ಪ
ಸಾಸಿವೆ : ಅರ್ಧ ಚಮಚ
ಕೆಂಪು ಮೆಣಸು :ಎರಡು

ವಿಧಾನ:
೧.ಕಡ್ಲೆ ಬೇಳೆ ಮತ್ತು ತೊಗರಿ ಬೇಳೆಯನ್ನು ತೊಳೆದು ನೀರಿನಲ್ಲಿ ೩- ೪ ಗಂಟೆಗಳ ಕಾಲ ನೆನೆಸಿ.
೨.ಬೀನ್ಸನ್ನು ಸಣ್ಣಗೆ ಹೆಚ್ಚಿ,ಉಪ್ಪು ,ಅರಸಿನ ಹಾಕಿ ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಳ್ಳಿ.
೩.ನೆನೆದ ಕಡ್ಲೆ ಬೇಳೆ, ತೊಗರಿ ಬೇಳೆ, ೨ ಕೆಂಪು ಮೆಣಸು, ಒಂದು ಹಸಿ ಮೆಣಸು , ಉಪ್ಪು ,ಅರಸಿನ ಮತ್ತು ಇಂಗನ್ನು ತರಿ ತರಿಯಾಗಿ ರುಬ್ಬಿ.
೪.ರುಬ್ಬಿದ ಮಿಶ್ರಣವನ್ನು ಕುಕ್ಕರಿನಲ್ಲಿ ಸೀಟಿ ಇಲ್ಲದೆ ಹತ್ತು ನಿಮಿಷ ಬೇಯಿಸಿ. ಬಳಿಕ ಮಿಶ್ರಣವನ್ನು ಕುಕ್ಕರಿನಿಂದ ಹೊರತೆಗೆದು ,ಅದನ್ನು ಚೆನ್ನಾಗಿ ನಾದಿ.
೫. ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಕೆ೦ಪು ಮೆಣಸು ಹಾಕಿ .ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಅದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ,ಹೊಂಬಣ್ಣ ಬರುವ ತನಕ ಕದಡಿ .
೬.ಇದಕ್ಕೆ ಬೇಯಿಸಿದ ಬೀನ್ಸನ್ನು ಹಾಕಿ ಕಲಕಿ. ೩-೪ ನಿಮಿಷ ಹಾಗೇ ಬೇಯಿಸಿ.

-------------------------------------------------------------------------------
೪.ಮೊರು ಕೊಜ್ಹಂಬು
---------------------------------------------------------------------------------
ಬೇಕಾಗುವ ಸಾಮಗ್ರಿಗಳು
ಮೊಸರು : ಒಂದು ಲೋಟ
ಹೆಚ್ಚಿದ ಕುಂಬಳಕಾಯಿ : ಒಂದು ಲೋಟ
ಅರಸಿನ :ಚಿಟಿಕೆ
ನೆನೆಸಿದ ತೊಗರಿ ಬೇಳೆ : ಒಂದು ಚಮಚ
ಕೊತ್ತಂಬರಿ ಬೀಜ : ೨ ಚಮಚ
ಕಡ್ಲೆ ಬೇಳೆ : ಒಂದು ವರೆ ಚಮಚ
ಕೆಂಪು ಮೆಣಸು : ಒಂದು
ಮೆಂತೆ : ೪-೫ ಕಾಳು
ಎಣ್ಣೆ : ೨ ಚಮಚ
ತೆಂಗಿನ ತುರಿ : ೨ ಚಮಚ
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆ ಗೆ: ಸಾಸಿವೆ : ಒಂದು ಚಮಚ , ಬೆವಿನೆಲೆ : ೪, ಸ್ವಲ್ಪ ಎಣ್ಣೆ


ವಿಧಾನ
೧.ತೊಗರಿ ಬೇಳೆ ಯನ್ನು ನೀರಿನಲ್ಲಿ ೨೦ ನಿಮಿಷ ನೆನೆಸಿಡಿ
೨. ಕೊತ್ತಂಬರಿ,ಮೆಂತೆ,ಕೆಂಪು ಮೆಣಸು ಕಡ್ಲೆ ಬೇಳೆ ಯನ್ನು ಎಣ್ಣೆಯಲ್ಲಿ ಹುರಿಯಿರಿ.
೩.ನೆನೆದ ತೊಗರಿ ಬೇಳೆ ಮತ್ತು ಹುರಿದ ಸಾಮಗ್ರಿಗಳನ್ನು ತೆಂಗಿನ ತುರಿಯ ಜತೆ ನುಣ್ಣಗೆ ರುಬ್ಬಿ.
೪.ಕುಂಬಳಕಾಯಿಯನ್ನು ಹೆಚ್ಚಿ ಅರ್ಧ ಲೋಟ ನೀರು, ಅರಸಿನ, ಇಂಗಿನ ಜತೆ ಬೇಯಿಸಿ.
೫.ಇದಕ್ಕೆ ಉಪ್ಪು,ರುಬ್ಬಿದ ಮಿಶ್ರಣವನ್ನು ಮತ್ತು ಮೊಸರನ್ನು ಹಾಕಿ ಚೆನ್ನಾಗಿ ಕಲಕಿ. ೫ ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ.
೬. ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ, ಸಾಸಿವೆ, ಬೇವಿನೆಲೆ ಹಾಕಿ ಒಗ್ಗರಣೆ ತಯಾರಿಸಿ, ಬೇಯುತ್ತಿರುವ ಮಿಶ್ರಣಕ್ಕೆ ಹಾಕಿ.

---------------------------------------------
೫.ಸಕ್ಕರೆ ಪೊಂಗಲ್
------------------------------------


ಇದು ತಮಿಳುನಾಡಿನ ವಿಶೇಷ ಅಡುಗೆ

ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ತುಪ್ಪ: ೪ ಚಮಚ
ಹೆಸರು ಬೇಳೆ: ೪ ಚಮಚ
ಹಾಲು: ಒಂದು ಲೋಟ
ಬೆಲ್ಲ : ೧.೫ ಲೋಟ
ಗೋಡಂಬಿ: ೧೦
ಒಣ ದ್ರಾಕ್ಷಿ: ೧೦
ಏಲಕ್ಕಿ ಪುಡಿ: ಸ್ವಲ್ಪ

ವಿಧಾನ

೧.ಕುಕ್ಕರಿನಲ್ಲಿ ಅಕ್ಕಿ, ಹೆಸರು ಬೇಳೆ ಇವುಗಳನ್ನು ಹಾಲು+ನೀರಿನ ಜತೆ ೧:೪ ಅನುಪಾತದಲ್ಲಿ ಬೇಯಿಸಿಕೊಳ್ಳಿ.
೨.ಒಂದು ಪಾತ್ರೆಯಲ್ಲಿ ೧.೫ ಲೋಟ ನೀರಿಗೆ ಬೆಲ್ಲವನ್ನು ಹಾಕಿ ಬಿಸಿ ಮಾಡಿ.
೩.ಬೆಲ್ಲದ ಪಾಕವಾಗುತ್ತಿದ್ದಂತೆ (ಅಂದರೆ ನೀರಿನಲ್ಲಿ ಸಂಪೂರ್ಣವಾಗಿ ಬೆಲ್ಲ ಕರಗುತ್ತಿದ್ದಂತೆ ), ಅದಕ್ಕೆ ಅನ್ನ-ಹೆಸರುಬೇಳೆಯ ಮಿಶ್ರಣವನ್ನು ಹಾಕಿ.
೪.೨-೩ ನಿಮಿಷ ಕಲಕುತ್ತಿರಿ. ಈಗ ತುಪ್ಪದಲ್ಲಿ ಹುರಿದ ದ್ರಾಕ್ಷೆ, ಗೋಡಂಬಿಯನ್ನು ಸೇರಿಸಿ.
೫.ಏಲಕ್ಕಿ ಪುಡಿಯನ್ನು ಉದುರಿಸಿ.