Pages

Tuesday, March 27, 2007

ಹೋಳಿಯ ರಂಗು ...

ಮುಸುಕು ಕವಿದ ಬಾಳಿನಲಿ
ಬಣ್ಣ ಬಣ್ಣದ ಓಕುಳಿ
ರಂಗು ರಂಗಿನ ಹೊಸ ಲೋಕ
ಸೃಷ್ಟಿಸುತಿದೆ ಈ ಹೋಳಿ||

ಹೋಲಿಕಾಳ ದಹನವಾಯ್ತು
ಪಾರಾದ ಪ್ರಹ್ಲಾದ ಮೃತ್ಯುವಿನಿಂದ
ದುಷ್ಟ ಶಿಕ್ಷೆ ಶಿಷ್ಟ ರಕ್ಷೆಯ ನೆನಪಿನ
ಜತೆ ಹೋಳಿ ತರುತಿದೆ ಆನಂದ||

ಕೆಲವೆಡೆ ಸಂಭ್ರಮದ ಹೋಳಿ
ಕಾಮದಹನದ ಸಂಕೇತ
ಮನದೊಳಗಾಗಲಿ ದುರಾಸೆಯ ಭಸ್ಮ
ಇರಲಿ ಆಸೆ ಪರಿಮಿತ||

ಒಂದೆಡೆ ಉಗ್ರರ ದಾಳಿ
ಮತ್ತೊಂದೆಡೆ ಗಲಭೆ ಗೊಂದಲ
ಏತಕೆ ಇವೆಲ್ಲ? ಕೊಂಚ ತಾಳಿ..
ವಿಶ್ವ ಮೈತ್ರಿಯೆ ಹೊಳಿಯ ಹಂಬಲ||

ದ್ವೇಷ ಅಸೂಯೆಯ ಬಣ್ಣಗಳು
ಬೇಕೆ ನಮ್ಮ ಬಾಳಿಗೆ?
ಪ್ರೀತಿ, ಮಮತೆಯ ರಂಗು ಇದ್ದರೆ
ಸಾಕು, ಪ್ರತಿ ಗಳಿಗೆ||

16 comments:

Jagali bhaagavata said...

ಕವನದ ಆಶಯ ಚೆನ್ನಾಗಿದೆ.

Sushrutha Dodderi said...

ದ್ವೇಷ ಅಸೂಯೆಯ ಬಣ್ಣಗಳು
ಬೇಕೆ ನಮ್ಮ ಬಾಳಿಗೆ?
ಪ್ರೀತಿ, ಮಮತೆಯ ರಂಗು ಇದ್ದರೆ
ಸಾಕು, ಪ್ರತಿ ಗಳಿಗೆ||

ಹೌದು, ದ್ವೇಷ ಅಸೂಯೆಗಳು ದಹಿಸಲಿ. ಒಳ್ಳೆಯ ಕವನ.

Archu said...

ಜಗಲಿ ಭಾಗವತರಿಗೆ,
ಪ್ರತಿಕ್ರಿಯೆಗೆ ಧನ್ಯವಾದಗಳು..
ನಿಮ್ಮ ಬ್ಲೊಗ್ ತೆರೆದು ಓದಲು ಶುರು ಮಾಡಿದ್ದೇನೆ..

ಸುಶ್ರುತರೇ....

ತುಂಬಾ ಥಾಂಕ್ಸ್..ಕವನ ಮೆಚ್ಚಿಕೊಂಡದ್ದಕ್ಕೆ.

Enigma said...

kavan chenagi mudibandide

Archu said...

@enigma
ಧನ್ಯವಾದಗಳು..

ಶ್ರೀನಿಧಿ.ಡಿ.ಎಸ್ said...

ದ್ವೇಷ ಅಸೂಯೆಯ ಬಣ್ಣಗಳು
ಬೇಕೆ ನಮ್ಮ ಬಾಳಿಗೆ?
-ಒಳ್ಳೆಯ ಸಾಲುಗಳು , ಖುಶಿ ಕೊಟ್ಟಿತು.
ಹೀಗೇ ಬರೆಯುತ್ತಿರಿ.

Parisarapremi said...

ಸೊಗಸಾಗಿದೆ ಕವನ...

Vijendra ( ವಿಜೇಂದ್ರ ರಾವ್ ) said...
This comment has been removed by the author.
Vijendra ( ವಿಜೇಂದ್ರ ರಾವ್ ) said...

ಹೌದು.. ಬೇಡ ದ್ವೇಷ ಅಸೂಯೆಯ ಬಣ್ಣಗಳು ನಮ್ಮ ಬಾಳಿಗೆ?
ಇರಲಿ ಪ್ರೀತಿ, ಮಮತೆಯ ರಂಗು ಎಲ್ಲಾ ಕಡೆ ..

ಕವನ ತುಂಬಾ ಚೆನ್ನಾಗಿತ್ತು

Datta3 said...

ಕವನ ಹಾಗೂ
ಬ್ಲಾಗ್ ನ ಎಲ್ಲಾ ಬರಹಗಳೂ ಚೆನ್ನಾಗಿವೆ.
ಇಷ್ಟು ಸುಂದರವಾದ ಬ್ಲಾಗ್ ರಚನೆ ತುಂಬಾ ಒಳ್ಳೆ ಪ್ರಯತ್ನ.
ಯಶಸ್ಸು ಸದಾ ಜೊತೆಗಿರಲಿ
ದತ್ತು

Archu said...

ಶ್ರೀ, ಪರಿಸರ ಪ್ರೇಮಿ,ವಿಜೆಂದ್ರ , ದತ್ತು
ಎಲ್ಲರಿಗೂ ಧನ್ಯವಾದಗಳು..

Unknown said...

Hi Archana,

This is Saritha from Mangalore.. i hope u remember me......nice poem..

keep shining

best regards
Saritha Charan

Unknown said...

Hi Archana..

This is Saritha frm Mangalore

Excellent words

Keep shining

regards
Saritha Charan

Jagali bhaagavata said...

ಹೋಳಿ ಇನ್ನೂ ಮುಗೀಲಿಲ್ವಾ? ಒಂದ್ ಸರ್ತಿ ಹಾಗೆ ಇಲ್ಲಿ entry ಕೊಡಿ ನೋಡೋಣ.

ರಾಘು - ಬ್ಲಾಗು said...

Archana nimma kavana.. thumba chenagide. thank u.

Archu said...

thanks raghavendra..