
ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ಬರೆದ ಕವನ..
ಗೊಮ್ಮಟ ದೇವಾ
ಗೊಮ್ಮಟ ದೇವಾ
ಏತಕೆ ನಿಂತಿದ್ದಿ?
ಅಷ್ಟು ಹೊತ್ತಿಂದ ನಿಂತಿದ್ರೂನೂ
ಮೌನ ವಹಿಸಿದ್ದಿ
ಅಲ್ಲಿ ಇಲ್ಲಿ ಗಲಭೆ ಗೊಂದಲ
ನೋಡ್ತಾ ಇದ್ದೀಯಲ್ವಾ?
ಮನಸ್ಸಿಗೆ ತುಂಬಾ ಬೇಜಾರಾಗಿ
ಮಾತಾಡ್ತಾ ಇಲ್ವಾ?
ಉರಿಬಿಸಿಲಿಗೆ ನಿಂಗೆ
ಸೆಕೆ ಆಗಲ್ವಾ?
ಥಂಡಿ ಹವೆಗೆ ನೀ
ನಡುಗಿ ಹೋಗಲ್ವಾ?
ಅಂಜದೆ ಅಳುಕದೆ ಬದುಕ್ಬೇಕಂತ
ಸಾರ್ತಾ ಇದ್ದೀಯಾ?
ತ್ಯಾಗದ ಮಹಿಮೆಯ ಜಗಕೆ
ನೀನು ತೋರಿಸ್ತಿದ್ದೀಯ?
ಇಲ್ಲಿ ಎಲ್ಲಾ ಕಡೆನೂ ಇದೆ
ಭಾರೀ ಕಾಂಪಿಟಿಶನ್ನು
ನಾನೇ ಗೆದ್ದೇ ಗೆಲ್ಬೇಕಂತ
ಕಾಡ್ತಾ ಇರತ್ತೆ ಮನವನ್ನು||
ರಾಜ್ಯ ಸಿಕ್ರೂ ಬೇಡ ಅಂತ
ನೀನೇ ಅಂದ್ಯಂತೆ
ಗೆದ್ರೂ ಕೂಡ ನಿಂಗೆ
ಏನೂ ಬೇಡ್ವಂತೆ||
ಮಾಡ್ತಿದ್ದಾರಂತೆ ನಿಂಗೆ
ಮಸ್ತಕಾಭಿಷೇಕ
ಬರ್ತೀನಿ ನಿನ್ನ ನೋಡಕೆ
ನಂಗಿದೆ ಭಾರೀ ತವಕ||
ನೀ ಎಲ್ಲಾದ್ರೂ ಮೌನ ಬಿಟ್ರೆ
ಕೇಳ್ಬೇಕು ನಿಂಗೆ ಕ್ವೊಶ್ಚನ್ನು
ನಗ್ ನಗ್ತಾ ನೀ ಇರ್ತಿ ಹೇಗೆ
ಎಲ್ಲೆಡೆ ತುಂಬಿದ್ರೂ ಟೆನ್ಶಶನ್ನು||
8 comments:
ಬೆತ್ತಲೆ ನಿಂತ್ಕೊಂಡಿದಾನೆ ಮತ್ತೆ ಸೆಖೆ ಹೆಂಗ್ರೀ ಆಗೊತ್ತೆ?! ಬಾಹುಬಲಿ ನಿಮ್ ಪ್ರಶ್ನೆಗಳಿಗೆ ಉತ್ರ ಹೇಳ್ತಾ ಕೂತ್ರೆ ಮುಗೀತು ಕತೆ!
ಶಿಶುಕವಿತೆ ಚೆನ್ನಾಗಿದೆ. :)
:-)
ಸುಶ್ರುತರೇ,
ಪ್ರತಿಕ್ರಿಯೆಗೆ ಧನ್ಯವಾದಗಳು.
ಇತಿ,
ಅರ್ಚನಾ
ನೀ ಎಲ್ಲಾದ್ರೂ ಮೌನ ಬಿಟ್ರೆ
ಕೇಳ್ಬೇಕು ನಿಂಗೆ ಕ್ವೊಶ್ಚನ್ನು
ನಗ್ ನಗ್ತಾ ನೀ ಇರ್ತಿ ಹೇಗೆ
ಎಲ್ಲೆಡೆ ತುಂಬಿದ್ರೂ ಟೆನ್ಶಶನ್ನು||
ಈ ಸಾಲುಗಳು ಕುಶಿ ಕೊಟ್ಟಿತು..
ಕಾರ್ಕಳ.ದಲ್ಲಿ ಗೋಮಟೇಶ್ವರ ಬೆಟ್ಟದ ಬದಿಯಲ್ಲೇ ನಮ್ಮ ಮನೆ ಇತ್ತು..
ಹಾಗಾಗಿ ಗೋಮಟೇಶ್ವರ ಮೂರ್ತಿ ನೋಡ್ತಾ ಬೆಳೆ.ದವ್ನು ನಾನು..
ಚಂದದ ಪದ್ಯ
ಒಳ್ಳೆ ಕವಿತೆ.
ಕವಿತೆಯೇನೋ ಮಕ್ಕಳಿಗೆ ಹೇಳೋ ಶೈಲಿಯಲ್ಲಿದೆ,
ಆದರೆ ದೊಡ್ಡವರು ಕಲಿಯಲು ಬಹಳಷ್ಟಿದೆ ;-)
--
ವಿಜೇಂದ್ರ, ಮಂಜು ಶಂಕರ್,
ಕವನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು..
chennagide!! nice one.......
majavag bardideera.
ವಿಜೇಂದ್ರ ಕಾರ್ಕಳದವ್ರು!! Good. ನಾನೂ ಕಾರ್ಕಳದಲ್ಲಿ ಬೆಳೆದವಳು, ನಮ್ಮೂರ ಗೊಮ್ಮಟನಲ್ಲದೆ, ಧರ್ಮಸ್ಠಳಕ್ಕೆ ಹೋಗಿ ನೆಲೆಸಿ ನಿಂತ ಗೊಮ್ಮಟನೂ ನನ್ನ ಬಾಲ್ಯದ ನೆನಪುಗಳ ಪಾಲುದಾರ. ಅವನ ರೂಪವನ್ನು ಶಿಲ್ಪಿಗಳು ತಿದ್ದುತ್ತಿದ್ದಾಗ, ಆ ಉದ್ದದ್ದ ತೋಳುಗಳಲ್ಲಿ ಕೂತು ತೆಗೆಸಿಕೊಂಡ ಚಿತ್ರ ಅಮ್ಮನ ಮನೆಯ ಆಲ್ಬಂ'ನಲ್ಲಿ ಇನ್ನೂ ಇರಬೇಕು. ಆ ನೆನಪುಗಳೇ ಮಧುರ...
೨೦೦೨'ರಲ್ಲಿ ಅದೇ ನಮ್ಮೂರ ಗೊಮ್ಮಟನಿಗೆ ಮಸ್ತಕಾಭಿಷೇಕದ ಪ್ರಯುಕ್ತ "ಅಟ್ಟಳಿಗೆ" ಕಟ್ಟಿದ್ದಾಗ ಅವನ ನೆತ್ತಿಯನ್ನೂ ಸವರಿ ಬಂದಿದ್ದೆವು, ಮಕ್ಕಳಿಗಾದ ಪುಳಕ ನೋಡಿ ಖುಷಿಗೊಂಡಿದ್ದೆವು.
ಇಂಥ ನೆನಪಿನ ಮೆರವಣಿಗೆಗೆ ನಂದಿ ಹಾಡಿದ ಪದ್ಯಕ್ಕೆ ವಂದನೆಗಳು.
ಶ್ರೀ..ಥಾಂಕ್ಸ್..
ಸುಪ್ತದೀಪ್ತಿ,
ಧನ್ಯವಾದಗಳು ನಿಮ್ಮ ನೆನಪುಗಳನ್ನು ಹಂಚಿಕೊಂಡದ್ದಕ್ಕೆ!!
Post a Comment