Pages

Thursday, March 24, 2011

ವರ್ಲಿ ಚಿತ್ರಕಲೆ ಮತ್ತೊಮ್ಮೆ

ಈ ಹಿಂದೆ ವರ್ಲಿ ಚಿತ್ರಗಳ ಬಗ್ಗೆ ಒಂದು ಲೇಖನ ಬರೆದಿದ್ದೆ. ಆ ಲೇಖನ ( ಇಲ್ಲಿದೆ. )

ಈ ಸಲ ನಾನು ವರ್ಲಿ ಚಿತ್ರಗಳ ಪ್ರಮುಖ ಪ್ರಕಾರವಾದ ಟರ್ಪಾ ನೃತ್ಯದ ಚಿತ್ರ ಅಭ್ಯಾಸ ಮಾಡಿದೆ. ಒಂದು ಪ್ರಯತ್ನ ಇಲ್ಲಿದೆ.


ಟರ್ಪಾ ಎನ್ನುವುದು ಒಂದು ರೀತಿಯ ಕೊಳವೆಯ ಆಕೃತಿಯ ವಾದ್ಯ. ಅದನ್ನು ಊದುವವನ ಸುತ್ತ ಜನರು ವೃತ್ತಾಕಾರವಾಗಿ ಸುತ್ತುವರೆದು ನೃತ್ಯ ಮಾಡುತ್ತಾರೆ.ವೃತ್ತ ಆಕೃತಿಯು ಸೂರ್ಯ ,ಚಂದ್ರರಿಂದ ಪ್ರೇರಣೆ ಪಡೆದು ರಚಿಸಿದ ಆಕೃತಿ. ವೃತ್ತ ಎನ್ನುವುದು ವರ್ಲಿ ಜನರಲ್ಲಿ ಜೀವನವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಸಾವು, ಬದುಕಿನ ಕೊನೆಯಲ್ಲ. ಅದು ಇನ್ನೊಂದು ಹೊಸ ಬದುಕಿನ ಆರಂಭ. ವೃತ್ತಕ್ಕೆ ಆದಿಯೂ ಇಲ್ಲ. ಅಂತ್ಯವೂ ಇಲ್ಲ. ಒಟ್ಟಿನಲ್ಲಿ ಹೇಳುವುದಾದರೆ ವರ್ಲಿ ಚಿತ್ರಗಳಲ್ಲಿ ಪ್ರಕೃತಿಯ ಜತೆಗೆ ಮಿಳಿತವಾಗಿರುವ ಬದುಕು ಎದ್ದು ತೋರುತ್ತದೆ.

ಅಂದ ಹಾಗೆ ಈ ಚಿತ್ರದಲ್ಲಿ ಟರ್ಪಾ ನೃತ್ಯಕ್ಕೆ ಜನ ತಯಾರಾಗುತ್ತಿದ್ದಾರೆ ಅಷ್ಟೆ. ಇನ್ನೂ ವೃತ್ತಾಕಾರ ಪೂರ್ತಿಯಾಗಿ ರೂಪುಗೊಂಡಿಲ್ಲ .

5 comments:

AntharangadaMaathugalu said...

ಅರ್ಚನಾ...
ವೃತ್ತ ಪೂರ್ತಿಯಾದ ಮೇಲೆ.. ಮತ್ತೆ ಹಾಕಿ. ನಂಗೆ ತುಂಬ ಇಷ್ಟವಾಯಿತು....


ಶ್ಯಾಮಲ

sunaath said...

ಅರ್ಚನಾ,
ಚಿತ್ರವನ್ನು ನೋಡಿ ತುಂಬಾ ಖುಶಿಯಾಯಿತು. ಚಿತ್ರ ಹಾಗು ವಿವರಣೆಗಾಗಿ ಅನೇಕ ಧನ್ಯವಾದಗಳು.

Archu said...

ಥಾಂಕ್ಯೂ ಶ್ಯಾಮಲಾ. ಖಂಡಿತ, ಚಿತ್ರ ಬರೆದ ಮೇಲೆ ಬ್ಲಾಗ್ ನಲ್ಲ ಹಾಕುತ್ತೇನೆ.

ಸುನಾಥ ಕಾಕಾ,
ಥಾಂಕ್ಯೂ ವೆರಿ ಮಚ್ :)

ಸಾಗರದಾಚೆಯ ಇಂಚರ said...

Archana,
great
olle talent

Unknown said...

Very good...I liked all the paintings...gud talent... :)