Pages

Sunday, December 14, 2008

ಇಂಗ್ಲೆಂಡ್ ಪ್ರವಾಸ ಕಥನ...

ಹೌದು..ಮತ್ತೊಮ್ಮೆ ಕಣ್ಣುಜ್ಜಿಕೊಂಡೆ..ನಾನು ನೋಡುತ್ತಿರುವುದು ಕನಸೋ ಅಥವಾ ನಿಜವೋ ಎಂದು ಅರಿಯಲು ಕೊಂಚ ಸಮಯವೇ ಬೇಕಾಯಿತು. ಹೌದು..ನಾನು ಇಂಗ್ಲೆಂಡಿನಲ್ಲೇ ಇದ್ದೇನೆ.’ಮೊನೊಪಲಿ’ ಎಂಬ ಆಟದಲ್ಲಿ ಬರುವ ಬೀದಿಗಳು,ರೈಲ್ವೇ ನಿಲ್ದಾಣಗಳು ಇವೆಲ್ಲಾ ನನ್ನ ಕಣ್ಣ ಮುಂದೆಯೇ ಇವೆ!! ಸೊನ್ನೆ ಡಿಗ್ರಿಯಷ್ಟು ಕೊರೆಯುವ ಚಳಿಯಲ್ಲಿ ಟೊಪ್ಪಿ,ಕೈಗವಸು,ಶೂ,ಕೋಟು ಹಾಕಿಯೇ ಜನ ಓಡಾಡುತ್ತಿದ್ದಾರೆ.

ಬಹುಷ: ಇಂಗ್ಲೆಂಡಿನ ಬಗ್ಗೆ ಕೇಳಿದಷ್ಟು ,ಛಾಯಾಚಿತ್ರಗಳನ್ನು ನೋಡಿದಷ್ಟು ನಾನು ಬೇರಾವ ದೇಶದ ಬಗ್ಗೆಯೂ ಮಾಡಿಲ್ಲ.ನನ್ನ ಆಪ್ತ ವರ್ಗದ ಹಲವರು ಅಲ್ಲಿ ನೆಲೆಸಿಬಂದವರೋ, ನೆಲೆಸಿರುವವರೋ ಆಗಿರುವ ಕಾರಣ ಮತ್ತು ಅವರೆಲ್ಲರೂ ಇಂಗ್ಲೆಂಡಿನ ಪ್ರ್‍ಏಕ್ಷಣೀಯ ಸ್ಥಳಗಳ ಬಗ್ಗೆ,ಅಲ್ಲಿಯ ಜನಜೀವನದ ಬಗ್ಗೆ ವರ್ಣಿಸಿದಾಗ ನನಗೂ ಅಲ್ಲಿ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕೆಂಬ ಆಸೆ ಮೂಡುತ್ತಿದ್ದದ್ದು ಸುಳ್ಳಲ್ಲ.

ಕಡೆಗೂ ನನ್ನ ಆಸೆ ಈಡೇರುವ ದಿನ ಬಂದೇ ಬಿಟ್ಟಿತು.ಕಂಪನಿ ಕೆಲಸದ ನಿಮಿತ್ತ ನನ್ನ ಇಂಗ್ಲೆಂಡ್ ಪ್ರವಾಸ ನಿಶ್ಚಯವಾಯಿತು.ಸ್ವಾಮಿ ಕಾರ್ಯ,ಸ್ವಕಾರ್ಯ ಎರಡನ್ನೂ ಒಟ್ಟಿಗೇ ಮಾಡುವ ಹಂಬಲ ನನ್ನದು.ಹಾಗಾಗಿ ಕಿರುಅವಧಿಯ ಪ್ರವಾಸದಲ್ಲೇ ಆಫ಼ೀಸು ಕೆಲಸದ ಜತೆಗೆ ಸಾಕಷ್ಟು ಪ್ರ್‍ಏಕ್ಷಣೀಯ ಸ್ಥಳಗಳನ್ನು ಸಂದರ್ಶಿಸುವ ಮತ್ತು ನನ್ನ ಆತ್ಮೀಯ ಸ್ನೇಹಿತೆಯೋರ್ವಳನ್ನು ಭೇಟಿಯಾಗುವ ಕಾರ್ಯಕ್ರಮಗಳನ್ನು ಯೋಜಿಸಿದೆ.ಎರಡು ದಿನಗಳ ಬಿಡುವು ಮಾಡಿಕೊಂಡು ಲಂಡನ್ ಸುತ್ತಿದೆ.ಬಿಗ್ ಬೆನ್,ಟವರ್ ಬ್ರಿಡ್ಜ್,ಬಂಕಿಂಗ್ ಹಾಮ್ ಅರಮನೆ,ಲಂಡನ್ ಐ ,ಮೇಡಮ್ ಟುಸಾಟ್ಸ್ ಇವುಗಳನ್ನು ಸಂದರ್ಶಿಸಿದೆ.ಹತ್ತು ಹಲವು ಚರ್ಚುಗಳೂ,ಸುಂದರ ವಾಸ್ತುವಿನ್ಯಾಸದ ಕಟ್ಟಡಗಳೂ ನನ್ನ ಮನಸ್ಸನ್ನು ಸೆಳೆದವು.ಕ್ರಿಸ್ಮಸ್ ಗೆ ಈಗಾಗಲೇ ನಗರವು ಸಜ್ಜುಗೊಂಡಿತ್ತು.ಎಲ್ಲಿ ನೋಡಿದರೂ ಕ್ರಿಸ್ಮಸ್ ಟ್ರೀ ಅಲಂಕಾರ !! ಅಂಗಡಿಗಳೆಲ್ಲವೂ ಝಗಮಗಿಸುವ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ!!ಇಂಗ್ಲೆಂಡ್ ಗೆ ಹೋಗುವ ಮುನ್ನ ನನ್ನ ಮನಸ್ಸಲ್ಲಿ ಇದ್ದ ಕೊಂಚ ಗೊಂದಲ ಮೂಡಿಸಿದ್ದ ವಿಷಯಗಳೆಂದರೆ ೧)ವಿಪರೀತ ಚಳಿ :ಬೆಂಗಳೂರಿನ ೧೮-೨೦ ಡಿಗ್ರಿಗಳಷ್ಟು ತಾಪಮಾನದಲ್ಲೇ ಚಳಿ ಎಂದು ಗಟ್ಟಿ ಹೊದಿಕೆ ಹೊದ್ದು ಮಲಗುವ ನಾನು ,೦ ಡಿಗ್ರಿಯ ತಾಪಮಾನದಲ್ಲಿ ವಾಸಮಾಡುವುದು ಹೇಗೆ ಎಂದು. ಸಾಕಷ್ಟು ಬೆಚ್ಚನೆಯ ವಸ್ತ್ರಗಳು ಚಳಿಯಿಂದ ನನ್ನನ್ನು ರಕ್ಷಿಸಿಕೊಳ್ಳಲು ನೆರವಾದವು.ಹೋಟೆಲ್,ಕಛೇರಿ ಗಳಲ್ಲಿ ಹೀಟರ್ ಇದ್ದ ಕಾರಣ ಏನೂ ತೊಂದರೆ ಆಗಲಿಲ್ಲ. ೨) ಇನ್ನೊಂದು ವಿಷಯವೆಂದರೆ ಲಂಡನ್ ನ ಸಂಚಾರಿ ವ್ಯವಸ್ಥೆ. ಇಲ್ಲಿ ಟ್ಯೂಬ್ (ಭೂಮಿಯೊಳಗೆ ಚಲಿಸುವ ವಾಹನ),ಟ್ರೈನ್, ಬಸ್ಸು ಇವೆಲ್ಲವೂ ನನಗೆ ಕೊಂಚ ಹೆದರಿಕೆ ಹುಟ್ಟಿಸಿದ್ದವು.ನಾನು ಟ್ರೈನ್ ನಿಂದ ಹೊರಗೆ ಬರುವ ಮುಂಚೆಯೇ ಬಾಗಿಲು ಮುಚ್ಚಿಕೊಂಡರೆ ಏನು ಮಾಡಲಿ ? ನಕಾಶೆ ಓದುವಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿರುವ ನನಗೆ ಟ್ಯೂಬ್ ನ ನಕಾಶೆಯನ್ನು ಓದಿ ಅದರಲ್ಲಿ ಸಂಚರಿಸಲಾದೀತೆ ಇತ್ಯಾದಿ ನನಗಿದ್ದ ಸಂಶಯಗಳು.ಆದರೆ ಅಲ್ಲಿ ಹೋದ ಮೇಲೆ ನನಗೆ ಅತೀವ ಆತ್ಮವಿಶ್ವಾಸ ಮೂಡಿ,ಲಂಡನ್ ನ ಎಲ್ಲಾ ರೀತಿಯ ಸಾರಿಗೆ ವ್ಯವಸ್ಥೆಗಳಲ್ಲೂ ಸಂಚಾರ ಮಾಡಿದೆ!! ನನಗೆ ಈಗಲೂ ಅದು ಹೇಗೆ ಸಾಧ್ಯವಾಯಿತು ಎಂದು ನಂಬಲಾಗುತ್ತಿಲ್ಲ!!ನನ್ನ ಮುಂದಿನ ಭೇಟಿ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯಕ್ಕೆ. ಆಕ್ಸ್ ಫರ್ಡ್ ಎನ್ನುವುದು ಒಂದು ಪುಟ್ಟ ಊರು. ಊರು ತುಂಬಾ ಕಾಲೇಜುಗಳು. ಎಲ್ಲಿ ನೋಡಿದರೂ ವಿದ್ಯಾರ್ಥಿಗಳು.ಕಾಲೇಜು ಕಟ್ಟಡಗಳೆಲ್ಲವೂ ಹಳೆಯ ಕಾಲದ ವಾಸ್ತುವಿನ್ಯಾಸವನ್ನು ಹೊಂದಿದ್ದವು. ನನಗ್ಯಾಕೋ ನಾನೊಂದು ಬೇರೆಯೇ ಪ್ರಪಂಚಕ್ಕೆ ಬಂದಂತೆ ಅನಿಸಿತು. ಚಿಕ್ಕದಾಗಿ,ಚೊಕ್ಕದಾಗಿ ಇರುವ ಈ ಸುಂದರ ಊರು ನನ್ನನ್ನು ಬಹಳಷ್ಟು ಆಕರ್ಷಿಸಿತು.

ಮತ್ತೆ ಸ್ವಲ್ಪ ದಿನಗಳ ಕಾಲ ನಾನು ಕಚೇರಿ ಕೆಲಸದಲ್ಲಿ ಮಗ್ನಳಾದೆ.ನಾನು ವಾಸಮಾಡಿದ್ದ ಊರಿನ ಹೆಸರು ’ರೆಡ್ಡಿಂಗ್ ’. ಒಂದು ಪುಟ್ಟ ಊರು. ಅದೂ ಸಹ ಬಹಳ ಸುಂದರವಾಗಿತ್ತು. ನನಗೆ ಅದು ಕಲಾವಿದ ಬಿಡಿಸಿದ ಒಂದು ಚಂದದ ಚಿತ್ರದಂತೆ ಭಾಸವಾಗುತ್ತಿತ್ತು.
ಕೆಲವೊಂದು ಆಂಗ್ಲ ಭಾಷಾ ಚಲನಚಿತ್ರಗಳಲ್ಲಿ ನೋಡಿದ್ದ ಊರುಗಳಂತೆ...ಎಲ್ಲವೂ ಅಚ್ಚುಕಟ್ಟು..ಎಲ್ಲೆಡೆಯೂ ಸ್ವಚ್ಛತೆ...ಶಿಸ್ತು..ನನಗೇಕೋ ನಾನೊಂದು ಕನಸಿನ ಲೋಕಕ್ಕೆ ಬಂದಂತೆ ಭಾಸವಾಗುತ್ತಿತ್ತು.ರೆಡ್ಡಿಂಗ್ ನಲ್ಲಿ ಇರುವ ’ಥೇಮ್ಸ್ ವ್ಯಾಲಿ ಪಾರ್ಕ್’ :ಥೇಮ್ಸ್ ನದಿಯ ದಂಡೆಯ ಮೇಲೆ ಇರುವ ಹಲವಾರು ಸಾಫ಼್ಟ್ ವೇರ್ ಕಂಪನಿಗಳ ಸಮೂಹ. ನನಗೆ ವಿಶಿಷ್ಟ ಎನಿಸಿದ್ದು : ಅಲ್ಲಿಯ ಕಟ್ಟಡಗಳು ಹೆಚ್ಚೆಂದರೆ ೩ ಮಹಡಿಗಳಷ್ಟೇ ಎತ್ತರ!!
ಕಛೇರಿ ಕೆಲಸದ ನಂತರ ನನ್ನ ಮುಂದಿನ ಪಯಣ ಬ್ಲಾಕ್ ಪೂಲ್ ನಲ್ಲಿರುವ ನನ್ನ ಸ್ನೇಹಿತೆಯ ಮನೆಗೆ. ರೆಡ್ಡಿಂಗ್ ನಿಂದ ಲಂಡನ್ ಗೆ ನನ್ನ ಲಗ್ಗೇಜುಗಳ ಜತೆ ಸಾಗಿದೆ.ಲಂಡನ್ ಸ್ಟೇಶನ್ ನಲ್ಲಿ ನನ್ನ ಸ್ನೇಹಿತೆಯ ಪತಿ ಕಾಯುತ್ತಿದ್ದರು.ನನ್ನ ಸ್ಯೂಟ್ ಕೇಸ್ ಗಳನ್ನು ಅವರಿಗೆ ವರ್ಗಾಯಿಸಿದೆ.. ನಾನೊಬ್ಬಳೇ ಲಂಡನ್ ಸುತ್ತುವಾಗ ಇದ್ದ ಆತಂಕ,ನಕಾಶೆಗಳನ್ನು ಓದುವ ಕೆಲಸ ಯಾವುದೂ ನನ್ನ ಜತೆಗಿರಲಿಲ್ಲ.ಪುಟ್ಟ ಬ್ಯಾಗ್ ಗಳನ್ನು ನಾನು ಹಿಡಿದುಕೊಂಡು ಅವರನ್ನು ಹಿಂಬಾಲಿಸಿದೆ. ದಿಕ್ಕು ಸೂಚನಾ ಫಲಕಗಳನ್ನು ಓದುವ ಗೋಜಿಗೂ ಹೋಗಲಿಲ್ಲ!! ನನ್ನ ಲಂಡನ್ ಪ್ರವಾಸದಲ್ಲಿ ನಿರಾತಂಕದಿಂದ ಇದ್ದ ಕ್ಷಣಗಳವು!!:)

ಲಂಡನ್-->ಪ್ರೆಸ್ಟನ್-->ಬ್ಲಾಕ್ ಪೂಲ್ ಗೆ ತಲುಪಿದೆ. ನನ್ನ ಸ್ನೇಹಿತೆ ಬಿಸಿಬೇಳೆ ಭಾತ್,ಅನ್ನ,ತಂಬುಳಿ,ಪಾಯಸ ತಯಾರಿಸಿ ನನಗಾಗಿ ಕಾಯುತ್ತಿದ್ದಳು. ಇಷ್ಟು ದಿನಗಳ ಪ್ರವಾಸದ ಸಮಯದಲ್ಲಿ ಬರೀ ತರಕಾರಿ,ಬ್ರ್‍ಎಡ್,ಪಿಜ಼ಾಗಳನ್ನೇ ಕಂಡ ನನಗೆ ಆಕೆ ತಯಾರಿಸಿದ ಖಾದ್ಯಪದಾರ್ಥಗಳನ್ನು ಕಂಡು ಬಾಯಿಯಲ್ಲಿ ನೀರೂರಿತು :) ನನ್ನ ಗೆಳತಿಗೆ ನಾನು ’ಬೆಸ್ಟ್ ಕುಕ್ ’ ಎಂಬ ಬಿರುದನ್ನು ಘೋಷಿಸಿದೆ. ಅಷ್ಟೊಂದು ರುಚಿಕರವಾಗಿ ಅಡುಗೆ ತಯಾರಿಸಿದ್ದಳು!!ನನಗೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿತು!!
ಮರುದಿನ ನಾವು ಮಾಂಚೆಸ್ಟರ್ ನ ಶೋಪಿಂಗ್ ಸೆಂಟರ್ ಗೆ ಹೋದೆವು. ಟ್ರಾಫರ್ಡ್ ಸ್ಕ್ವಾರ್ ಎನ್ನುವುದು ಅದರ ಹೆಸರು. ಇಡೀ ದಿನ ಅಲ್ಲಿ ಸುತ್ತಾಡಿ ಬಂದೆವು. ನನ್ನ ಪ್ರವಾಸದಲ್ಲಿ ನಾನು ಬಹಳಷ್ಟು ಖುಶಿ ಪಟ್ಟ ಸ್ಥಳ ’ಲೇಕ್ ಡಿಸ್ಟ್ರಿಕ್ಟ್. ನಾನು ಇಷ್ಟರವರೆಗೆ ಹಿಮ ಕವಿದ ಪ್ರದೇಶವನ್ನು ಕಂಡಿರಲಿಲ್ಲ. ಸುತ್ತಮುತ್ತಲೂ ಹಿಮದ ಚಾದರ ಹರಡಿದರೆ ಅದು ಹೇಗೆ ಕಂಡೀತೆಂದು ಛಾಯಾಚಿತ್ರಗಳಲ್ಲಿ ಮಾತ್ರ ಕಂಡಿದ್ದೆ. ಹಿಮವನ್ನು ನನ್ನ ಕಣ್ಣಾರೆ ಕಂಡಾಗ ನನಗಾದ ಆನಂದಕ್ಕೆ ಪಾರವೇ ಇರಲಿಲ್ಲ. ಅಷ್ಟು ಚಳಿ ಕೊರೆಯುತ್ತಿದ್ದರೂ ಹಿಮವನ್ನು ಕೈಯಲ್ಲಿ ಹಿಡಿದುಕೊಂಡು ಛಾಯಾಚಿತ್ರ ತೆಗೆದುಕೊಳ್ಳಲು ಮರೆಯಲಿಲ್ಲ.ನಾನು ಅತೀವ ಹರ್ಷಿಸಿದ ಸಮಯ ಅದು!!

ಲೇಕ್ ಡಿಸ್ಟ್ರಿಕ್ಟ್ ಹೆಸರೇ ಸೂಚಿಸುವಂತೆ ಅನೇಕ ಸರೋವರಗಳನ್ನು ಹೊಂದಿರುವ ಊರು. ಹಿಮದ ಹೊದಿಕೆ ಹೊದ್ದಿರುವ ,ಚಂದದ ಚಿತ್ರ ಅದು.ಜನಸಂಖ್ಯೆಯಂತೂ ತೀರಾ ಕಡಿಮೆ.ಚಳಿಗೆ ಇಡೀ ಊರೇ ನಿದ್ದೆಯಲ್ಲಿರುವಂತೆ ಕಾಣುತ್ತದೆ.ಅಲ್ಲಿಯ ಸೌಂದರ್ಯವನ್ನು ಬಣ್ಣಿಸಲು ನನ್ನ ಲೇಖನಿಗೆ ಶಕ್ತಿ ಸಾಲದು ಎನಿಸುತ್ತಿದೆ. ಅಷ್ಟೊಂದು ಸೊಗಸು.ಒಟ್ಟಿನಲ್ಲಿ ನನ್ನ ಇಂಗ್ಲೆಂಡ್ ಪ್ರವಾಸವು ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ "short,sweet and cold "!! :)

24 comments:

pammu said...

Excellent.....so proud of u Archu akka....

unnamed said...

Nice Blog.
Nice sentence formation. makes me nervous if think of my language

Gururaja Hebbar.

Vaishali said...

anthoo nanage 'best cook' award sikkiddu jagatthigE tiLiyuvantaayithu ninna blog ninda :) very nice article, in ur own words 'short and sweet'. keep posting

love,
vaishali

Anil said...

ತುಂಬಾ ಸೊಗಸಾಗಿದೆ ನಿಮ್ಮ ಪ್ರವಾಸ ಕಥನ

Harish - ಹರೀಶ said...

ತುಂಬಾ ಆಪ್ತವಾಗಿ ಬರೆದು ಸಂಕ್ಷಿಪ್ತವಾಗಿಯೇ ಇಂಗ್ಲೆಂಡ್ ಸುತ್ತಿಸಿ ಬಿತ್ತಿದ್ದೀರಿ.. ಹೀಗೇ ಬರೆಯುತ್ತಿರಿ.. :-)

shivu K said...

ಅರ್ಚನಾ ಮೇಡಮ್,
ನಿಮ್ಮ ಇಂಗ್ಲೆಂಡ್ ಪ್ರವಾಸ ಕಥನಾ ಚೆನ್ನಾಗಿದೆ.. ಓದುತ್ತಿದ್ದರೆ ಮತ್ತು ಫೋಟೊ ನೋಡುತ್ತಿದ್ದರೆ ನನಗೆ ಮತ್ತಷ್ಟು ಚಳಿಯಾಯಿತೇನೊ ಅನ್ನಿಸಿತು.. ನಿಮ್ಮ ಬ್ಲಾಗ್ ಚೆನ್ನಾಗಿದೆ. ಇತ್ತೀಚೆಗೆ ಬಂದಿರಲಿಲ್ಲ. ಮುಂದೆ ದಿನಾ ಬರುತ್ತೀನಿ... ನೀವು ನನ್ನ ಬ್ಲಾಗಿಗೆ ಬಿಡುವು ಮಾಡಿಕೊಂಡುಬನ್ನಿ. ಅಲ್ಲಿರುವ ಫೋಟೊಗಳು ಮತ್ತು ಲೇಖನಗಳು ನಿಮಗಿಷ್ಟವಾಗಬಹುದು....ಬರುತ್ತಿರಲ್ಲಾ.....

sunaath said...

ಅರ್ಚನಾ,
ಕನಸಿನ ಪ್ರಯಾಣವನ್ನು ಸುಖಕರವಾಗಿ ಮುಗಿಸಿಕೊಂಡು ಬಂದಿದ್ದಕ್ಕಾಗಿ ಅಭಿನಂದನೆಗಳು.
ನಿನ್ನ ಎಲ್ಲ ಕನಸುಗಳೂ ನನಸಾಗಲಿ ಎಂದು ಹಾರೈಸುವೆ.

pavs said...

chennagide archana..:-)

ಸುಪ್ತದೀಪ್ತಿ suptadeepti said...

ಇನ್ನೂ ಆರು ತಿಂಗಳಾಗುತ್ತಿದೆಯಷ್ಟೇ ನಾವು ಲಂಡನ್ ನಗರ ಸುತ್ತಿ; ಆಗಲೇ ನಿನ್ನ ಸಚಿತ್ರ ವರದಿ. ಓದಿ ಸಂತೋಷ ಆಯ್ತು.
ಕನಸನ್ನು ನನಸಾಗಿಸಿಕೊಂಡಿದ್ದೀ. ಗುಡ್. ನಿನ್ನ ಉಳಿದ ಕನಸುಗಳೂ ಬೇಗನೇ ನನಸಾಗಲಿ. ಅವೆಲ್ಲದರ ಖುಷ್-ಖುಷೀ ವರದಿ ಚಿತ್ರ ಸಮೇತ ನಮಗೂ ಸಿಗಲಿ ಎಂದೇ ಹಾರೈಸುವೆ.

ಸುಶ್ರುತ ದೊಡ್ಡೇರಿ said...

ನೈಸ್ ಕಣೇ. ನಂಗೇನ್ ತಂದಿದೀಯಾ ಲಂಡನ್ನಿಂದ? ;)

Sunil said...

Hi Archanaji tumba chennagide nimma pravaasa kathana...khushiyaaytu odi....matte matte hogibanni..matte nammannoo karedukodu hogi..baravanigeyalli :)
Take care,keep writing,
Sunil

Pejathaya said...

ತುಂಬ ಚೆನ್ನಾಗಿ ಬರೆದಿದ್ದೀರಾ! ಫೋಟೋಗಳು ಬಹಳ ಚೆನ್ನಾಗಿವೆ. ಉತ್ತಮ ಪ್ರವಾಸ ಲೇಖನ. ವಂದನೆಗಳು.
ಪೆಜತ್ತಾಯ ಎಸ್. ಎಮ್.

ಸುಧನ್ವಾ ದೇರಾಜೆ said...

hey, fine, good, very good !

Gurus world said...

ಹಾಯ್, ಅರ್ಚನ,
ತುಂಬ ಚೆನ್ನಾಗಿ ವಿವರಿಸಿದ್ದಿರ ನಿಮ್ಮ ಇಂಗ್ಲೆಂಡ್ ಪ್ರವಾಸದ ಅನುಭವಗಳನ್ನ, ನಾನು ಕೆಲವು ದಿವಸ ಲಂಡನ್ ನಲ್ಲಿ ಇದ್ದೆ, ನಿಮ್ಮ ಫೋಟೋ ಗಳನ್ನೂ ನೋಡಿದಮೇಲೆ , ನನ್ನ ಅನುಭವಗಳ ನೆನಪು ಆಯಿತು, ಟೈಮ್ ಸಿಕ್ಕಾಗ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತೇನೆ .

Gurus world said...

ಹಾಯ್, ಅರ್ಚನ,
ತುಂಬ ಚೆನ್ನಾಗಿ ವಿವರಿಸಿದ್ದಿರ ನಿಮ್ಮ ಇಂಗ್ಲೆಂಡ್ ಪ್ರವಾಸದ ಅನುಭವಗಳನ್ನ, ನಾನು ಕೆಲವು ದಿವಸ ಲಂಡನ್ ನಲ್ಲಿ ಇದ್ದೆ, ನಿಮ್ಮ ಫೋಟೋ ಗಳನ್ನೂ ನೋಡಿದಮೇಲೆ , ನನ್ನ ಅನುಭವಗಳ ನೆನಪು ಆಯಿತು, ಟೈಮ್ ಸಿಕ್ಕಾಗ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತೇನೆ .

paranjape said...

Hi,
I like your style of writing. I have been visiting your blog for quite sometime. I am Paranjape from Bangalore. I know some people in Hosamata. Good, Keeping posting articles to your blog frequently.

Regards
Paranjape
nirpars@gmail.com

Harish said...

Hi.. Rially very nice exiting Blog.. all are articles are rially natural and very nice.. thanks Archana for writing Good articles....

ಪಯಣಿಗ said...

ಹಲೋ ಅರ್ಚನಾ,

ಇ೦ಗ್ಲೆ೦ಡು ನಿಮ್ಮ ಕಣ್ಣು-ಮನಸ್ಸಿಗಿತ್ತ ಬೆರಗು, ಅಚ್ಚರಿ, ವಿಸ್ಮಯ, ಸ೦ಕೋಚ, ಸ೦ತೋಷವನ್ನ ಹಾಗೆ ತಿಳಿಯಾಗಿ ಓದುಗರೊ೦ದಿಗೆ ಹ೦ಚಿಕೊಳ್ಳುವ ನಿಮ್ಮ ಶ್ಯಲಿ ಹಿಡಿಸಿತು.

ನಿಮ್ಮ ಬೆಸ್ಟ್ ಕುಕ್ ಸ್ಹೇಹಿತರ ವಿಳಾಸ ಕೊಟ್ಟಿದ್ದರೆ ನಮಗೂ ವಿಮರ್ಶಿಸುವ ಅವಕಾಶವಾಗುತ್ತಿತ್ತು!!

ಮುರಳಿ, ಲ೦ಡನ್

ಅಸತ್ಯ ಅನ್ವೇಷಿ said...

ನಿಮ್ಮ ಶಾರ್ಟ್, ಸ್ವೀಟ್ ಮತ್ತು ಕೋಲ್ಡ್ ಪ್ರಯಾಣದ ಬಗ್ಗೆ ಅಷ್ಟೇ ಸ್ವೀಟ್, ಕೋಲ್ಡ್ ವರದಿ ಓದಿ ನಾವು ಟಿಕೆಟಿಲ್ಲದೆ ಇಂಗ್ಲೆಂಡಿಗೆ ಹೋಗಿ ಬಂದೆವು. ಧನ್ಯವಾದ.

ಹೊಸ ವರ್ಷದ ಶುಭಾಶಯ

Ashok Uchangi said...

ಇಂಗ್ಲೆಂಡ್ ಸುತ್ತಿಬಂದ ಅನುಭವಗಳ ಕಥನ ಚೆನ್ನಾಗಿದೆ.ಆದ್ರೆ ನನಗೆ ಇಷ್ಟವಾದದ್ದು ನಿಮ್ಮ ಮನೆಯ ಮುಂದಿನ ಸುಂದರ ಮುಂಜಾವು,ನಿಮ್ಮೂರಿನ ಚಿತ್ರಗಳು.ಇಂಥ ಬರಹ, ಚಿತ್ರಗಳು ಆಗಾಗ ಬರುತಿರಲಿ....
ವಿಶ್ವಾಸವಿರಲಿ
ಅಶೊಕ ಉಚ್ಚಂಗಿ
http://mysoremallige01.blogspot.com/

Gireesh R Balakka said...

anubhavagaLannu uttamavaagi ondu kaDe kalehaakuvalli tamma kruthi saarthakavaagide... abhinandanegaLu

Gireesh

gore said...

Nice one...Keep it UP... :-)

Thanks & Regards,
http://ravikanth-gore.blogspot.com/

ಶಂಕರ ಪ್ರಸಾದ said...

ರೆಡಿಂಗ್ ನಲ್ಲಿ ಇದ್ರಾ ನೀವು. ಹಂಗಾದ್ರೆ ಆಕ್ಸ್ಫರ್ಡ್ ಗೆ ಬಹಳ ಹತ್ತಿರದಲ್ಲೆ ಇದ್ರಿ.
ನಾನು 2007 ರ ಪೋಲೆಂಡಿನಿಂದ ಕ್ರಿಸ್ಮಸ್ ಗೆ ಅಂತಾ ಎರಡನೆಯ ಬಾರಿ UK ಗೆ ಬಂದಾಗ, ರೆಡಿಂಗ್ ನ "Kings Road" ನಲ್ಲಿ ಇರೋ "KINGS TAVERN PUB" ಎದುರು ಇರೋ ಅಪಾರ್ಟ್ಮೆಂಟ್ ನಲ್ಲಿ ಇದ್ದೆ. ಒಳ್ಳೆ ಊರು.
ಈ ಫ್ರೆಬ್ರುವರಿ 27 ರಂದು,ನಮ್ಮ ಬಾಯ್ಸ್ ನ ಭೇಟಿ ಮಾಡಲಿಕ್ಕೆ ೨ ದಿನಕ್ಕೆ ಅಂತಾ ಪುನಃ ಲಂಡನ್ ಗೆ, ಜರ್ಮನಿಯಿಂದ ಹೊರಟಿರುವೆ :)
ಕಟ್ಟೆ ಶಂಕ್ರ

Ashwini said...

very nice article.